ಅಗ್ಗದ ದರ ಹಾಗೂ ಮಧ್ಯಮ ದರದ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಬೀರಿರುವ ಪೋಕೋ (POCO), ಇದೀಗ ಸಿ50 ಹೆಸರಿನಲ್ಲಿ ಹೊಸ ಫೋನನ್ನು ಭಾರತೀಯ ಮಾರುಕಟ್ಟೆಗೆ ಇಳಿಸಿದೆ. 2ಜಿಬಿ ಮತ್ತು 3ಜಿಬಿ RAM ಇರುವ ಎರಡು ಮಾದರಿಗಳಲ್ಲಿ ಇದು ಲಭ್ಯವಿದ್ದು, ಪ್ರಜಾವಾಣಿಗೆ ರಿವ್ಯೂಗೆ ದೊರೆತ ಫೋನ್ 3ಜಿಬಿ/32ಜಿಬಿ ಸಾಮರ್ಥ್ಯದ್ದು. ಬೆಲೆ ₹7,299 ಆಗಿದ್ದು, ಎರಡು ವಾರ ಬಳಸಿ ನೋಡಿದ ಬಳಿಕ, Poco C50 ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಡಿಸ್ಪ್ಲೇ ಮತ್ತು ವಿನ್ಯಾಸ
6.52 ಇಂಚಿನ ಎಲ್ಸಿಡಿ ಡಿಸ್ಪ್ಲೇ ಇರುವ ಫೋನ್ನ ಸ್ಕ್ರೀನ್ ಮೇಲೆ, ಮುಂಭಾಗದ ಕ್ಯಾಮೆರಾ ಲೆನ್ಸ್ ಇರುವಲ್ಲಿ ಡ್ರಾಪ್ ನಾಚ್ ಇದೆ. ಸ್ಕ್ರೀನ್ ಸುತ್ತ ಖಾಲಿ ಜಾಗ (ಬೆಝೆಲ್) ಇದ್ದು, ಮೇಲ್ಭಾಗದಲ್ಲಿ ಸ್ಪೀಕರ್ ಗ್ರಿಲ್ ಇದೆ. ಪ್ಲಾಸ್ಟಿಕ್ ಬಾಡಿ ಹೊಂದಿರುವ ಫೋನ್ನ ಹಿಂಭಾಗ ಆಕರ್ಷಕವಾಗಿದೆ. ಮುಖ್ಯವಾಗಿ ಲೆದರ್ ರೀತಿಯ ವಿನ್ಯಾಸವಿದ್ದು, ಗಮನ ಸೆಳೆಯುತ್ತದೆ ಮತ್ತು ಕೈಯಲ್ಲಿ ಹಿಡಿದುಕೊಳ್ಳಲು ಸೂಕ್ತ ಗ್ರಿಪ್ ಸಿಗುತ್ತದೆ. ಕೆಳಭಾಗದಲ್ಲಿ ಮೈಕ್ರೋ ಯುಎಸ್ಬಿ ಪೋರ್ಟ್ ಹಾಗೂ 3.5ಮಿಮೀ ಆಡಿಯೋ ಜಾಕ್ ಇದೆ. ಎಡಭಾಗದಲ್ಲಿ ಸಿಮ್ ಕಾರ್ಡ್ ಟ್ರೇ ಇದ್ದರೆ, ಬಲಭಾಗದಲ್ಲಿ ಪವರ್ ಹಾಗೂ ವಾಲ್ಯೂಮ್ ಬಟನ್ಗಳಿವೆ. ಸುಮಾರು 190 ಗ್ರಾಂ ತೂಕವಿದ್ದು, ಕೈಯಿಂದ ಸುಲಭವಾಗಿ ಜಾರುವುದಿಲ್ಲ. 6.52 ಇಂಚಿನ ಐಪಿಎಸ್ ಎಲ್ಸಿಡಿ ಹೆಚ್ಡಿ ಪ್ಲಸ್ ಡಿಸ್ಪ್ಲೇ ಇದ್ದು, ಸ್ವಯಂಚಾಲಿತ ಬೆಳಕಿನ ಪ್ರಖರತೆ ಹೊಂದಿಸುವ ಆಯ್ಕೆ ಸೆಟ್ಟಿಂಗ್ನಲ್ಲಿದೆ. ಹೀಗಾಗಿ ಬಿಸಿಲಿನಲ್ಲಿಯೂ ಸ್ಕ್ರೀನ್ ಚೆನ್ನಾಗಿ ಕಾಣಿಸುತ್ತದೆ.

ಕಾರ್ಯಕ್ಷಮತೆ
ಆಂಡ್ರಾಯ್ಡ್ 12 ಗೋ ಆವೃತ್ತಿಯ ಕಾರ್ಯಾಚರಣಾ ವ್ಯವಸ್ಥೆಯು ಪೋಕೋ ಸಿ50ರಲ್ಲಿದ್ದು, ಮೀಡಿಯಾಟೆಕ್ ಎ22 ಚಿಪ್ಸೆಟ್ ಇದೆ. ಕ್ವಾಡ್ ಕೋರ್ ಪ್ರೊಸೆಸರ್, 3ಜಿಬಿ RAM ಹಾಗೂ 32ಜಿಬಿ ಮೆಮೊರಿ ಇದೆ. ಇದರಲ್ಲಿ ಬಳಕೆಗೆ ಲಭ್ಯವಿರುವುದು ಸುಮಾರು 23ಜಿಬಿ ಮಾತ್ರ. 512ಜಿಬಿ ವರೆಗೂ ಮೆಮೊರಿ ಕಾರ್ಡ್ ಅಳವಡಿಸಿಕೊಳ್ಳಬಹುದು.

ಕರೆ, ವಿಡಿಯೊ ಕರೆ, ವಿಡಿಯೊ ವೀಕ್ಷಣೆ, ಹಾಡು ಕೇಳುವುದೇ ಮೊದಲಾದ ಮೂಲಭೂತ ಕೆಲಸಗಳಿಗೆ ಈ ಫೋನ್ನಲ್ಲಿ ಯಾವುದೇ ಅಡ್ಡಿಯಾಗಿಲ್ಲ. ಹಲವಾರು ವೆಬ್ ಪುಟಗಳನ್ನು, ಅದರಲ್ಲೂ ಹೆಚ್ಚು ವಿಡಿಯೊ, ಫೋಟೋ ಇರುವವುಗಳನ್ನು ತೆರೆದಿಟ್ಟಾಗ, ಸ್ಕ್ರೋಲ್ ಮಾಡುವುದು ಕೊಂಚ ವಿಳಂಬವಾಗುತ್ತದೆ. ಆದರೆ, ಬೆಲೆಗೆ ತಕ್ಕಂತೆ ಕಾರ್ಯಕ್ಷಮತೆಯನ್ನು ಈ ಫೋನ್ ತೋರಿಸಿದೆ. ಆದರೆ, ಸಾಮಾನ್ಯ ಬ್ರೌಸಿಂಗ್ ಸುಲಲಿತವಾಗಿಯೇ ಇದೆ. ಹಿಂಭಾಗದಲ್ಲಿರುವ ಫಿಂಗರ್ಪ್ರಿಂಟ್ ಸೆನ್ಸರ್ ಮೂಲಕ ಸ್ಕ್ರೀನ್ ಅನ್ಲಾಕ್ ಮಾಡುವ ವಿಧಾನ ವೇಗವಾಗಿ ಕಾರ್ಯನಿರ್ವಹಿಸುತ್ತದೆ. ಕರೆ ಬಂದಾಗ ಕಾಲ್ ರೆಕಾರ್ಡಿಂಗ್ ವೈಶಿಷ್ಟ್ಯವೂ ಜೊತೆಗೂಡಿದ್ದು, ವಿಶೇಷವೆನಿಸಿದೆ.

ಕ್ಯಾಮೆರಾ
8 ಮೆಗಾಪಿಕ್ಸೆಲ್ ಹಾಗೂ 0.8MP ಸಾಮರ್ಥ್ಯದ ಎರಡು ಲೆನ್ಸ್ಗಳು ಪ್ರಧಾನ ಕ್ಯಾಮೆರಾದಲ್ಲಿದ್ದು, 5 ಮೆಗಾಪಿಕ್ಸೆಲ್ ಸಾಮರ್ಥ್ಯದ ಸೆಲ್ಫೀ ಕ್ಯಾಮೆರಾ ಇದರಲ್ಲಿದೆ. ಪೋರ್ಟ್ರೇಟ್, ಟೈಮ್ ಲ್ಯಾಪ್ಸ್ ಮೋಡ್ಗಳು ಗಮನ ಸೆಳೆದಿವೆ. ಉತ್ತಮ ಬೆಳಕಿರುವಲ್ಲಿ ಉತ್ತಮ ಗುಣಮಟ್ಟದ ಫೋಟೊ, ವಿಡಿಯೊಗಳು ಸೆರೆಯಾಗುತ್ತವೆ. ರಾತ್ರಿ ವೇಳೆಯ ಫೋಟೊಗಳು ಕೊಂಚ ಪಿಕ್ಸಲೇಟ್ ಆಗುತ್ತವೆ.

ಬ್ಯಾಟರಿ ಬಗ್ಗೆ ಹೇಳುವುದಾದರೆ 5000mAh ಸಾಮರ್ಥ್ಯದ ಬ್ಯಾಟರಿಯು ಸಾಮಾನ್ಯ ಬಳಕೆಯಲ್ಲಿ ಎರಡು ದಿನಗಳಿಗೆ ಸಾಕಾಗುತ್ತದೆ. ಹೆಚ್ಚು ವಿಡಿಯೊ, ಗೇಮ್ಸ್ ಬಳಸಿದರೆ ಬೇಗನೇ ಚಾರ್ಜ್ ಮಾಡಬೇಕಾಗುತ್ತದೆ. ಬಾಕ್ಸ್ ಜೊತೆ 10 ವ್ಯಾಟ್ ಚಾರ್ಜರ್ ಹಾಗೂ ಮೈಕ್ರೋ ಯುಎಸ್ಬಿ ಕೇಬಲ್ ನೀಡಲಾಗಿದೆ. ಶೂನ್ಯದಿಂದ ಪೂರ್ಣ ಚಾರ್ಜ್ ಆಗಲು ಸುಮಾರು ಎರಡು ಗಂಟೆ ಬೇಕಾಗುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ಬಜೆಟ್ ಅಂದರೆ ಕೈಗೆಟಕುವ ಬೆಲೆಯ ಸ್ಮಾರ್ಟ್ಫೋನ್ಗಳಲ್ಲಿ ಪೋಕೋ ಸಿ50 ವಿಶೇಷ ಸ್ಥಾನ ಪಡೆಯುತ್ತದೆ. ಸಂದೇಶ ಕಳುಹಿಸುವುದು, 4ಜಿ ಇಂಟರ್ನೆಟ್, ಇಮೇಲ್, ಯೂಟ್ಯೂಬ್ ಮತ್ತು ಇತರ ಜಾಲತಾಣಗಳ ಬ್ರೌಸಿಂಗ್ಗೆ ಅಗ್ಗದ ಬೆಲೆಯಲ್ಲಿ ಸೂಕ್ತವಾಗಬಹುದಾದ ಫೋನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.