ಅಡಿಲೇಡ್: ಅತಿ ಅಪರೂಪವಾದ ಹಾಗೂ ಅಳಿವಿನಂಚಿನಲ್ಲಿರುವ ‘ನವಿಲು ಜೇಡ’ (peacock spider) ಆಸ್ಟ್ರೇಲಿಯಾದ ಪಶ್ಚಿಮ ಕರಾವಳಿಯ ಕೆಲ ದಿಬ್ಬಗಳಲ್ಲಿ ಮಾತ್ರ ಕಂಡು ಬರುತ್ತವೆ.

ಆಕರ್ಷಕವಾದ ಹಾಗೂ ನವಿಲಿನ ಹಾಗೇ ರೆಕ್ಕೆ ಬಿಚ್ಚಿ ನೃತ್ಯ ಮಾಡುವ ಈ ಜೇಡದ ವೈಜ್ಞಾನಿಕ ಹೆಸರು Maratus speciosus (ಆಸ್ಟ್ರೇಲಿಯಾದ ಜಂಪಿಂಗ್ ಸ್ಪೈಡರ್ ಜಾತಿ). ನೃತ್ಯ ಮಾಡುವಾಗ ನವಿಲಿನ ಹಾಗೇ ಕಾಣುವುದು ಇದರ ವಿಶೇಷ. ಸಂತಾನೋತ್ಪತ್ತಿಯಲ್ಲಿ ಈ ರೀತಿ ರೆಕ್ಕೆ ಬಿಚ್ಚಿ ಕುಣಿಯುತ್ತದೆ.

ಸದ್ಯ ಈ ಜೇಡಗಳಿಗೆ ಅಳಿವು ಉಳಿವಿನ ಪ್ರಶ್ನೆ ಎದುರಾಗಿದೆ.

ಆಸ್ಟ್ರೇಲಿಯಾದ ಪಶ್ಚಿಮ ಕರಾವಳಿಯ ಬಹುತೇಕ ಭಾಗ ವಿಸ್ತರಿಸಿರುವ ಪರ್ತ್ ನಗರದ ವಿಸ್ತರಣೆಯು ಈ ನವಿಲು ಜೇಡಗಳಿಗೆ ಕಂಟಕವನ್ನು ತಂದೊಡ್ಡಿದೆ. ಪರ್ತ್ ನಗರದ ವಿಸ್ತರಣೆಯ ಭಾಗವಾಗಿ ಕರಾವಳಿಯ ದಿಬ್ಬಗಳನ್ನು ಕೊರೆದು ಎಸ್ಟೆಟ್ಗಳನ್ನಾಗಿ, ಉಪ ನಗರಗಳನ್ನಾಗಿ ಮಾಡುತ್ತಿರುವುದು ಈ ನವಿಲು ಜೇಡಗಳ ಅಳಿವಿಗೆ ಕಾರಣವಾಗಿದೆ.

ಪರ್ತ್ನ ಉಪನಗರವಾದ Yanchep ಬಳಿಯ ಕರಾವಳಿ ದಿಬ್ಬಗಳಲ್ಲಿ ಮಾತ್ರ ಈ ನವಿಲು ಜೇಡಗಳು ಕಾಣಸಿಗುತ್ತವೆ.

ಆಸ್ಟ್ರೇಲಿಯಾ ಸರ್ಕಾರ ಇದರ ರಕ್ಷಣೆ ಬಗ್ಗೆ ಕ್ರಮ ಕೈಗೊಳ್ಳದಿರುವುದರಿಂದ ಒಂದು ಸಣ್ಣ ಪ್ರದೇಶದಲ್ಲಿ ಮಾತ್ರ ನೋಡಲು ಕಾಣಸಿಗುವ ನವಿಲು ಜೇಡ ಅಳಿವಿನ ಭೀತಿ ಎದುರಿಸುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಆಧಾರ– ಪಿಟಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.