ಬೆಂಗಳೂರು: ಲೋಕಸಭಾ ಚುನಾವಣೆಯ ಹೊತ್ತಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪಾದ ಮಾಹಿತಿಗಳು ಸಿಕ್ಕಾಪಟ್ಟೆ ಹರಿದಾಡುತ್ತಿವೆ. ಕಳೆದ ಒಂದು ತಿಂಗಳಲ್ಲಿ ಭಾರತದಲ್ಲಿ ಇಬ್ಬರಲ್ಲಿ ಒಬ್ಬರಿಗೆ ಫೇಸ್ಬುಕ್, ವಾಟ್ಸ್ಆ್ಯಪ್ ಮೂಲಕ ಸುಳ್ಳುಸುದ್ದಿ ಬಂದಿರುತ್ತದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.

ಡಿಜಿಟಲ್ ಫ್ಲಾಟ್ಫಾರಂನಲ್ಲಿ ಸುಳ್ಳು ಸುದ್ದಿ ಬೇಗನೆ ಹರಡುತ್ತದೆ. ಚುನಾವಣೆಯ ಮೇಲೆ ಪ್ರಭಾವ ಬೀರುವ ರೀತಿಯಲ್ಲಿ ಈ ಫ್ಲಾಟ್ಫಾರಂ ಬಳಸಬಾರದು ಎಂದು ಸರ್ಕಾರ ಈಗಾಗಲೇ ತಾಕೀತು ನೀಡಿದೆ.

ರಾಜಕೀಯ ಜಾಹೀರಾತುಗಳಲ್ಲಿ ಪಾರದರ್ಶಕತೆಯನ್ನು ಕಾಪಾಡುವಂತೆ ಫೇಸ್ಬುಕ್ ಮತ್ತು ಗೂಗಲ್ ನಿರ್ದೇಶಿಸಿದ್ದು, ಫ್ಯಾಕ್ಟ್ಚೆಕ್ ಮೂಲಕ ಸುಳ್ಳು ಸುದ್ದಿಗಳ ಹರಡುವಿಕೆಗೆ ತಡೆಯೊಡ್ಡಿದೆ.

ಸೋಷ್ಯಲ್ ಮೀಡಿಯಾ ಮ್ಯಾಟರ್ಸ್ ಆ್ಯಂಡ್ ಇನ್ಸಿಟ್ಯೂಟ್ ಫಾರ್ ಗವರ್ನನ್ಸ್ ಮತ್ತು ಪಾಲಿಸಿ ಆ್ಯಂಡ್ ಪಾಲಿಟಿಕ್ಸ್ (ಐಜಿಪಿಪಿ) ಜಂಟಿಯಾಗಿ ಸಮೀಕ್ಷೆ ನಡೆಸಿದ್ದು, ಚುನಾವಣೆಯ ಹೊತ್ತಲ್ಲಿ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ನಮಗೆ ಸುಳ್ಳು ಸುದ್ದಿಗಳು ಸಿಕ್ಕಿವೆ ಎಂದು ಶೇ.53ಕ್ಕಿಂತಲೂ ಹೆಚ್ಚು ಮಂದಿ ಪ್ರತಿಕ್ರಿಯಿಸಿದ್ದಾರೆ.

ಸುಳ್ಳು ಮಾಹಿತಿಗಳನ್ನು ಹರಡಲು ಫೇಸ್ಬುಕ್ ಮತ್ತು ವಾಟ್ಸ್ಆ್ಯಪ್ಗಳೇ ಹೆಚ್ಚಾಗಿ ಬಳಕೆಯಾಗುತ್ತಿವೆ.ಸರಿಸುಮಾರು 30 ದಿನಗಳಲ್ಲಿ ಇಬ್ಬರಲ್ಲಿ ಒಬ್ಬರಿಗೆ ಸುಳ್ಳು ಸುದ್ದಿಗಳು ಸಿಗುತ್ತದೆ ಎಂದು ಸಮೀಕ್ಷೆಯಲ್ಲಿ ತಿಳಿದುಬಂದಿದೆ.

ಈ ವಿಷಯಕ್ಕೆ ಸಂಬಂಧಿಸಿವಾಟ್ಸ್ಆ್ಯಪ್ ಸಂಸ್ಥೆಯನ್ನು ಸಂಪರ್ಕಿಸಿದಾಗ 2019 ಸಾರ್ವತ್ರಿಕ ಚುನಾವಣೆಯ ವೇಳೆ ಸುಳ್ಳು ಮಾಹಿತಿಗಳನ್ನು ತಡೆಯಲು ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದೇವೆ. ಸುಳ್ಳು ಸುದ್ದಿಗಳ ನಿಯಂತ್ರಣಕ್ಕೆ ತೆಗೆದುಕೊಂಡ ಕ್ರಮಗಳ ಬಗ್ಗೆ ಬ್ಲಾಗ್ಪೋಸ್ಟ್ನಲ್ಲಿಯೂ ಬರೆಯಲಾಗಿದೆ. ಆದರೆ ಫೇಸ್ಬುಕ್ ಈ ಬಗ್ಗೆ ಪ್ರತಿಕ್ರಯಿಸಲು ನಿರಾಕರಿಸಿದೆ.

ಆಸಕ್ತಿಕರ ವಿಷಯವೆಂದರೆ ಈ ರೀತಿಯ ಸುದ್ದಿಗಳ ವಿಶ್ವಾಸರ್ಹತೆ ಬಗ್ಗ ಗೂಗಲ್, ಫೇಸ್ಬುಕ್, ಟ್ವಿಟರ್ನಲ್ಲಿ ಹುಡುಕುತ್ತೇವೆ ಎಂದುಶೇ. 41 ಮಂದಿ ಹೇಳಿದ್ದಾರೆ.
ಅಂದ ಹಾಗೆ 50 ಕೋಟಿ ಮತದಾರರು ಅಂತರ್ಜಾಲ ಬಳಸುವವರಾಗಿದ್ದು ಸುಳ್ಳು ಸುದ್ದಿಗಳು ಮತದಾರರ ಮೇಲೆ ಭಾರಿ ಪ್ರಭಾವ ಬೀರುತ್ತವೆ ಎಂದು ಸಮೀಕ್ಷೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.