ವಾಷಿಂಗ್ಟನ್: ವಿಶ್ವದ ಶ್ರೀಮಂತ ಉದ್ಯಮಿ, ಎಲೆಕ್ಟ್ರಿಕ್ ಕಾರು ತಯಾರಕ ಸಂಸ್ಥೆ ‘ಟೆಸ್ಲಾ’ದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಲಾನ್ ಮಾಸ್ಕ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಶನಿವಾರ ಪ್ರಶ್ನೆಯೊಂದನ್ನು ಕೇಳಿದ್ದಾರೆ.

ಟ್ವೀಟ್ ಮಾಡಿರುವ ಅವರು, ‘ನಾಗರಿಕತೆಯನ್ನು ಟಿಕ್ ಟಾಕ್ ನಾಶಪಡಿಸುತ್ತಿದೆಯೇ? ಕೆಲವರು ಹಾಗೆ ಭಾವಿಸಿದ್ದಾರೆ’ ಎಂದು ಹೇಳಿದ್ದಾರೆ. ಮತ್ತೊಂದು ಟ್ವೀಟ್ನಲ್ಲಿ, ‘ಸಾಮಾನ್ಯವಾಗಿ ಸಾಮಾಜಿಕ ಮಾಧ್ಯಮದಲ್ಲಿ ಇಂಥ ಅಭಿಪ್ರಾಯವಿದೆ’ ಎಂದು ಹೇಳಿದ್ದಾರೆ.

ವೀಚಾಟ್ ಮತ್ತು ಟಿಕ್ಟಾಕ್ನಂತೆ ಟ್ವಿಟರ್ ಆಗಬೇಕು ಎಂದು ಇಲಾನ್ ಮಸ್ಕ್ ಅವರು ಇತ್ತೀಚೆಗೆ ಟ್ವಿಟರ್ನ ಉದ್ಯೋಗಿಗಳಿಗೆ ಹೇಳಿದ್ದರು. ಈ ಬಗ್ಗೆ ಭಾರಿ ಚರ್ಚೆಗಳು ನಡೆಯುತ್ತಿವೆ. ಈ ಮಧ್ಯೆ ಮಸ್ಕ್ ಸಮಾಜಿಕ ಮಾಧ್ಯಮದಲ್ಲಿ ಇಂಥ ಪ್ರಶ್ನೆ ಕೇಳಿದ್ದಾರೆ.

‘ಟಿಕ್ಟಾಕ್ನ ಅಲ್ಗಾರಿದಮ್ ಬೇಸರ ತರಿಸುವುದಿಲ್ಲ. ಅದು ಬಳಕೆದಾರರನ್ನು ಹಿಡಿದಿಟ್ಟುಕೊಳ್ಳುತ್ತದೆ’ ಎಂದು ಅವರು ಶ್ಲಾಘಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.