ಮೆಲ್ನೋ ಪಾರ್ಕ್ (ಅಮೆರಿಕ): ಟ್ವಿಟರ್ ಬೆನ್ನಲ್ಲೇ ಇದೀಗ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್‌ನ ವೆರಿಫೈಡ್ ಖಾತೆಗಳಿಗೆ ಮಾಸಿಕ ಚಂದಾದಾರಿಗೆ ಶುಲ್ಕ ವಿಧಿಸುವುದಾಗಿ ಮೆಟಾ ಹೇಳಿದೆ.

ಈ ಬಗ್ಗೆ ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರು ಭಾನುವಾರ ಘೋಷಣೆ ಮಾಡಿದ್ದು, ಪ್ರಾಯೋಗಿಕ ಹಂತವಾಗಿ ಈ ವಾರದಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ನಲ್ಲಿ ಈ ಯೋಜನೆಯನ್ನು ಪ್ರಾರಂಭ ಮಾಡಲಾಗುವುದು ಎಂದು ಹೇಳಿದ್ದಾರೆ. ಅಲ್ಲದೇ ಶೀಘ್ರವೇ ಬೇರೆ ದೇಶಗಳಿಗೂ ವಿಸ್ತರಿಸಲಾಗುವುದು ಎಂದು ಅವರು ಹೇಳಿದ್ದಾರೆ.

ವೆಬ್ ಬಳಕೆದಾರರಿಗೆ ಮಾಸಿಕ ಮಾಸಿಕ $ 11.99 (ಸುಮಾರು ₹ 984.49) ಹಾಗೂ ಆ್ಯಪಲ್ ಹಾಗೂ ಆ್ಯಂಡ್ರಾಯ್ಡ್ ಬಳಕೆದಾರರಿಗೆ ಮಾಸಿಕ $ 14.99 ( ಸುಮಾರು ₹ 1240.12) ವಿಧಿಸುವುದಾಗಿ ಅವರು ಹೇಳಿದ್ದಾರೆ.

ವ್ಯಕ್ತಿ ಯಾ ಸಂಸ್ಥೆಯ ಸರ್ಕಾರಿ ದಾಖಲೆಗಳನ್ನು ಪಡೆದುಕೊಂಡು, ಆ ಖಾತೆಗೆ ವೆರಿಫೈಡ್ ಬ್ಯಾಡ್ಜನ್ನು (ಬ್ಲೂ ಟಿಕ್) ಮೆಟಾ ನೀಡುತ್ತದೆ. ಈ ವರೆಗೆ ಖ್ಯಾತನಾಮರು ಹಾಗೂ ಉದ್ಯಮ ಸಂಸ್ಥೆಗಳಿಗೆ ಈ ಬ್ಲೂಟಿಕ್ ಬ್ಯಾಡ್ಜನ್ನು ನೀಡಲಾಗಿತ್ತು.

ವೆರಿಫೈಡ್ ಬ್ಯಾಡ್ಜ್ ಹೊಂದಿದವರು ನಕಲಿ ಖಾತೆಗಳಿಂದ ರಕ್ಷಣೆ ಪಡೆಯುತ್ತಾರಲ್ಲದೇ, ನೇರವಾಗಿ ಗ್ರಾಹಕ ಸೇವೆಗಳನ್ನು ಪಡೆಯಬಹುದು ಎಂದು ಮೆಟಾ ತಿಳಿಸಿದೆ.

ತಮ್ಮ ಸೇವೆಗಳ ವಿಶ್ವಾಸಾರ್ಹತೆ ಹಾಗೂ ಭದ್ರತೆ ಹೆಚ್ಚಿಸುವ ಸಲುವಾಗಿ ಈ ಚಂದಾದಾರಿಗೆ ಪರಿಚಯಿಸಿದಾಗಿ ಮೆಟಾ ಹೇಳಿದೆ.

ಈಗಾಗಲೇ ವೆರಿಫೈಡ್ ಖಾತೆಗಳನ್ನು ಹೊಂದಿರುವವರಿಗೆ ಇದರಿಂದ ಯಾವುದೇ ಸಮಸ್ಯೆ ಇಲ್ಲ ಎಂದಿರುವ ಮೆಟಾ, ಗಣ್ಯ ವ್ಯಕ್ತಿಗಳು ಅಲ್ಲದೇ ಇದ್ದರೂ, ಸಂಪಾದನೆ ಉದ್ದೇಶ ಹೊಂದಿರುವ ಇನ್ಫುಲೆನ್ಸರ್‌ಗಳನ್ನು ಗುರಿಯಾಗಿಸಿಕೊಂಡು ಈ ಯೋಜನೆ ಜಾರಿಗೆ ತಂದಿದ್ದಾಗಿ ಮೆಟಾ ಹೇಳಿದೆ.

ಎರಡು ತಿಂಗಳ ಹಿಂದಷ್ಟೇ ಟ್ವಿಟರ್ ಕೂಡ ವೆರಿಫೈಡ್ ಖಾತೆಗಳಿಗೆ ಮಾಸಿಕ $ 8 ವಿಧಿಸುವ ಚಂದಾದಾರಿಕೆ ಯೋಜನೆಯನ್ನು ಪರಿಚಯಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.