ಬೆಂಗಳೂರು: ಇತ್ತೀಚೆಗಂತೂ ನಕಲಿ ಫೇಸ್ಬುಕ್ ಅಕೌಂಟ್ಗಳ ಹಾವಳಿ ವಿಪರೀತ ಹೆಚ್ಚಾಗುತ್ತಿದೆ. ಅಮಾಯಕರನ್ನು ವಂಚನೆ ಮಾಡುವುದೇ ಇವುಗಳ ಮೂಲ ಕಸುಬು.

ಇದೇ ಫೇಸ್ಬುಕ್ ನಕಲಿ ಪೇಜ್ಗಳ ಬಗ್ಗೆ ಗರಂ ಆಗಿರುವ ಖ್ಯಾತ ಉದ್ಯಮಿ ರತನ್ ಟಾಟಾ ಅವರು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಫೇಸ್ಬುಕ್ನಲ್ಲಿ 'ರತನ್ ಟಾಟಾ ಪೌಂಢೇಶನ್' ಹೆಸರಿನಲ್ಲಿ ಪೇಜ್ ಒಂದನ್ನು ತೆರೆಯಲಾಗಿದ್ದು ಈ ಬಗ್ಗೆ ತೀವ್ರ ಕಿಡಿಕಾರಿರುವ ರತನ್ ಟಾಟಾ ಅವರು, ‘ಈ ಪೇಜ್ ನಕಲಿಯಾಗಿದ್ದು, ನಮ್ಮ ಸಹೋದ್ಯೋಗಿಗಳ ಹೆಸರಿನಲ್ಲಿ ಯೂಸರ್ನೇಮ ತೆಗೆದುಕೊಂಡು ಪೇಜ್ ಮಾಡಲಾಗಿದೆ. ಈ ಪೇಜ್ನ ಕಿಡಗೇಡಿಗಳು ಅಮಾಯಕರಿಂದ ಹಣ ವಸೂಲಿ ಮಾಡುತ್ತಿದ್ದಾರೆಎಂಬ ದೂರುಗಳು ನನ್ನ ಗಮನಕ್ಕೆ ಬಂದಿವೆ. ನಾವು ಸಾರ್ವಜನಿಕರಿಂದ ಯಾವುದೇ ದೇಣಿಗೆ ಸ್ವೀಕರಿಸುವುದಿಲ್ಲ. ನಾವು ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಇಂತಹ ಪೇಜ್ಗಳು ಕಂಡು ಬಂದರೆ ನೀವು ಕೂಡ ಫೇಸ್ಬುಕ್ಗೆ ರಿಪೋರ್ಟ್ ಮಾಡಿ’ ಎಂದು ಮನವಿ ಮಾಡಿಕೊಂಡಿದ್ದಾರೆ.

ಟಾಟಾ ಕಂಪನಿಗಳ ಬಗ್ಗೆ ಪೌಂಢೇಶನ್ ಬಗ್ಗೆ ಏನಾದರೂ ಅನುಮಾನ ಬಂದರೆ ಜನ Talktous@tatatrusts.org ಗೆ ಈಮೇಲ್ ಮಾಡುವ ಮೂಲಕ ಖಚಿತ ಪಡಿಸಿಕೊಳ್ಳಬಹುದು ಎಂದು ರತನ್ ಟಾಟಾ ಹೇಳಿದ್ದಾರೆ.

ರತನ್ ಟಾಟಾ ಅವರು ಹೇಳಿರುವ ನಕಲಿ ಫೇಸ್ಬುಕ್ ಪೇಜ್ ಇದೀಗ ಡಿಲೀಟ್ ಆಗಿರುವುದು ಕಂಡು ಬಂದಿತು.

ಟ್ವಿಟರ್ ಸ್ಪಾಮ್ ಖಾತೆ ಕುರಿತು ಸ್ಪಷ್ಟಪಡಿಸಿ: ಇಲಾನ್ ಮಸ್ಕ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.