ಬೆಂಗಳೂರು: ಇನ್ನು ಮುಂದೆ ವೆರಿಫೈಡ್ ಬಳಕೆದಾರರಿಗೆ ಮಾತ್ರ ಟ್ವೀಟ್‌ಡೆಕ್ (TweetDeck) ಬಳಕೆಗೆ ಅನುಮತಿಸಲಾಗುತ್ತದೆ ಎಂದು ಸಾಮಾಜಿಕ ಮಾಧ್ಯಮ ಟ್ವಿಟರ್ ತಿಳಿಸಿದೆ.

ಈ ಬದಲಾವಣೆಯನ್ನು 30 ದಿನಗಳಲ್ಲಿ ಜಾರಿಗೆ ತರುವುದಾಗಿ ಟ್ವೀಟ್‌ನಲ್ಲಿ ತಿಳಿಸಿದೆ.

ಟ್ವೀಟ್‌ಡೆಕ್ ಎಂದರೇನು ?

ಟ್ವೀಟ್‌ಡೆಕ್ ಅಪ್ಲಿಕೇಷನ್ ಮೂಲಕ ಟ್ವಿಟರ್ ಖಾತೆ, ಫೀಡ್ ಅನ್ನು ಸುಲಭವಾಗಿ ನಿರ್ವಹಿಸಬಹುದಾಗಿದೆ. ಈವರೆಗೆ ಟ್ವೀಟ್‌ಡೆಕ್ ಸೇವೆ ಉಚಿತವಾಗಿ ಲಭ್ಯವಾಗುತ್ತಿತ್ತು.

ಈ ಡ್ಯಾಶ್‌ಬೋರ್ಡ್ ಅನ್ನು ಪ್ರಮುಖವಾಗಿ ತಮ್ಮ ವ್ಯಾಪಾರವನ್ನು ವೃದ್ಧಿಸಿಕೊಳ್ಳಲು ಉದ್ಯಮಿಗಳು, ಸಂಸ್ಥೆಗಳು ಬಳಸಿಕೊಳ್ಳುತ್ತಿದ್ದವು.

ಈಗ ಎಲಾನ್ ಮಸ್ಕ್ ಮಾಲೀಕತ್ವದ ಟ್ವಿಟರ್, ಟ್ವೀಟ್‌ಡೆಕ್ ಮೂಲಕ ಆದಾಯವನ್ನು ಹೆಚ್ಚಿಸುವ ಇರಾದೆ ಇಟ್ಟುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.