ಉನ್ನಾವೊ(ಉತ್ತರ ಪ್ರದೇಶ): ಕಳೆದ ವಾರ ಜಿಲ್ಲೆಯ ಗ್ರಾಮವೊಂದರ ಹೊಲದಲ್ಲಿ ಇಬ್ಬರು ಯುವತಿಯರು ಶವವಾಗಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಳು ಸುದ್ದಿಗಳನ್ನು ಪ್ರಕಟಿಸಿದ ಆರೋಪದ ಮೇಲೆ ಟ್ವಿಟರ್ ಖಾತೆಗಳನ್ನು ನಿರ್ವಹಿಸುವ ಎಂಟು ಮಂದಿಯ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಸುದ್ದಿ ಪೋರ್ಟ್ಲ್ ‘ಮೊಜೊ ಸ್ಟೋರಿ‘ ಸಂಪಾದಕಿ ಹಿರಿಯ ಪತ್ರಕರ್ತೆ ಬರ್ಕಾ ದತ್, ಜನ್ಜಾಗರಣ್ ಲೈವ್, ಅಝಾದ್ ಸಮಾಜ್ ಪಾರ್ಟಿ ವಕ್ತಾರ ಸೂರಜ್ ಕುಮಾರ್ ಬೌಧ್, ನೀಲಿಮ್ ದತ್, ವಿಜಯ್ ಅಂಬೇಡ್ಕರ್, ಅಭಯ್ ಕುಮಾರ್ ಆಜಾದ್, ರಾಹುಲ್ ದಿವಾಕರ್, ನವಾಬ್ ಸತ್ಪಾಲ್ ತನ್ವರ್ ಅವರ ವಿರುದ್ಧ ಭಾನುವಾರ ಉನ್ನಾವೊದಲ್ಲಿರುವ ಸದರ್ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಘಟನೆ ಕುರಿತು ‘ಸುಳ್ಳು ಮತ್ತು ದಾರಿತಪ್ಪಿಸುವಂತಹ ಸುದ್ದಿಗಳನ್ನು ಪ್ರಕಟಿಸಿದ ಆರೋಪದ ಮೇಲೆ ಎಫ್ಐಆರ್ ಹಾಕಲಾಗಿದೆ’ ಎಂದು ಎಎಸ್ಪಿ ವಿನೋದ್ ಕುಮಾರ್ ಪಾಂಡೆ ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಪತ್ರಕರ್ತೆ ಬರ್ಕಾ ದತ್, ‘ಇದು ನಾಚಿಕೆಗೇಡಿನ ಕ್ರಮ. ಕಿರುಕುಳ ನೀಡುವ ಮತ್ತು ಬೆದರಿಸುವ ಪ್ರಯತ್ನ‘ ಎಂದು ಹೇಳಿದ್ದಾರೆ.

‘ನಾವು ಪತ್ರಿಕೋದ್ಯಮದ ತತ್ವಗಳನ್ನು ಅನುಸರಿಸುತ್ತಲೇ ಹೊಸ ತಿರುವು ಪಡೆದುಕೊಳ್ಳುತ್ತಿರುವ ಘಟನೆಯ ಬಗ್ಗೆ ಎಲ್ಲಾ ದೃಷ್ಟಿಕೋನಗಳಿಂದ ವರದಿ ಮಾಡಿದ್ದೇವೆ. ಆದರೆ, ನಮ್ಮನ್ನು ಬೆದರಿಸುವುದಕ್ಕಾಗಿಯೇ ಜೈಲು ಶಿಕ್ಷೆಗೆ ಒಳಗಾಗುವಂತಹ ಐಪಿಸಿ ಸೆಕ್ಷನ್ಗಳನ್ನು ಹಾಕಲಾಗಿದೆ. ನಾನು ಇದರ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡಲು ಸಿದ್ದ‘ ಎಂದು ಹೇಳಿದ್ದಾರೆ.

‘ಉನ್ನಾವೊ ಪೊಲೀಸರು ನನ್ನ ವಿರುದ್ಧ ದಾಖಲಾಗಿರುವ ಎಫ್ಐಆರ್ ಪ್ರತಿಯನ್ನು ನೀಡಲು ನಿರಾಕರಿಸಿದ್ದಾರೆ‘ ಎಂದೂ ಬರ್ಕಾ ದತ್ ಆರೋಪಿಸಿದ್ದಾರೆ. ಎಫ್ಐಆರ್ ಪ್ರತಿ ಇಲ್ಲದೇ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಸಾಧ್ಯವಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.