ಬೆಂಗಳೂರು: ಸಾಮಾಜಿಕ ಮಾಧ್ಯಮಗಳು ಜನಪ್ರಿಯತೆ ಗಳಿಸಿದಂತೆ, ಅವುಗಳನ್ನು ದುರುಪಯೋಗಪಡಿಸಿಕೊಳ್ಳುವವರೂ ಹೆಚ್ಚಾಗುತ್ತಿದ್ದಾರೆ. ಅದಕ್ಕಾಗಿ ಸಾಮಾಜಿಕ ಜಾಲತಾಣಗಳು ವಿವಿಧ ಭದ್ರತಾ ಮತ್ತು ಸುರಕ್ಷತಾ ಅಪ್ಡೇಟ್ಗಳನ್ನು ಕಾಲಕಾಲಕ್ಕೆ ಒದಗಿಸುತ್ತವೆ.

ಈ ಬಾರಿ ವಾಟ್ಸ್ಆ್ಯಪ್ ನೂತನ ಅಪ್ಡೇಟ್ ಮೂಲಕ ಸ್ಟೇಟಸ್ ಅನ್ನು ರಿಪೋರ್ಟ್ ಮಾಡುವ ಆಯ್ಕೆಯನ್ನು ಪರಿಶೀಲಿಸುತ್ತಿದೆ.

ಸುಳ್ಳು ಸುದ್ದಿ ಹರಡುವುದು ಮತ್ತು ತಪ್ಪು ಮಾಹಿತಿ ತಡೆಯುವ ಉದ್ದೇಶದಿಂದ ವಾಟ್ಸ್ಆ್ಯಪ್ ಸ್ಟೇಟಸ್ ರಿಪೋರ್ಟ್ ಆಯ್ಕೆ ಒದಗಿಸಲು ಮುಂದಾಗಿದೆ.

ಬಳಕೆದಾರರು ವಾಟ್ಸ್ಆ್ಯಪ್ ಸ್ಟೇಟಸ್ನಲ್ಲಿ ಯಾವುದಾದರೂ ತಪ್ಪು ಮಾಹಿತಿ ಪೋಸ್ಟ್ ಮಾಡಿದರೆ, ಸುಳ್ಳು ಸುದ್ದಿ ನೀಡುತ್ತಿದ್ದರೆ, ಅದನ್ನು ರಿಪೋರ್ಟ್ ಮಾಡುವ ಆಯ್ಕೆ ದೊರೆಯಲಿದೆ. ಬಳಿಕ, ವಾಟ್ಸ್ಆ್ಯಪ್ ಅವುಗಳನ್ನು ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳಲಿದೆ.

ನೂತನ ಆಯ್ಕೆ ಬೀಟಾ ಆವೃತ್ತಿಯಲ್ಲಿ ಪರಿಶೀಲನೆಯಲ್ಲಿದೆ ಎಂದು ವಾಬೀಟಾ ಇನ್ಫೋ ವರದಿ ಮಾಡಿದೆ.

WhatsApp: ನವೆಂಬರ್ನಲ್ಲಿ 37.16 ಲಕ್ಷ ವಾಟ್ಸ್ಆ್ಯಪ್ ಖಾತೆಗೆ ನಿರ್ಬಂಧ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.