ನರಮಂಡಲದ ಬೆಳವಣಿಗೆಯಲ್ಲಿನ ನ್ಯೂನತೆ, ಸಾಮಾಜಿಕ ನಡವಳಿಕೆ ಮತ್ತು ಸಂವಹನ ಕೊರತೆಯನ್ನು ಆಟಿಸಂ ಎಂದು ಗುರುತಿಸಲಾಗುತ್ತದೆ.

ಇದನ್ನು ವೈಜ್ಞಾನಿಕವಾಗಿ ಸ್ಪೆಕ್ಟ್ರಮ್ ಡಿಸಾರ್ಡರ್ ಮತ್ತು ಕನ್ನಡದಲ್ಲಿ ಸ್ವಲೀನತೆ ಎಂದು ಕರೆಯಲಾಗುತ್ತದೆ.

ಅವರ ವರ್ತನೆ ಎಲ್ಲ ಮಕ್ಕಳಂತೆ ಸಾಮಾನ್ಯವಾಗಿರುವುದಿಲ್ಲ. ತಮ್ಮ ಕೆಲಸಗಳನ್ನು ನಿರ್ವಹಿಸಲು ಇತರರ ಸಹಾಯದ ಅವಶ್ಯಕತೆಯಿರುತ್ತದೆ.

ಇವರ ಕಲಿಕೆಯನ್ನು ಉತ್ತಮಪಡಿಸುವುದು ಹೇಗೆ ಎಂಬುದರ ಬಗ್ಗೆ ಅನೇಕ ಸಂಶೋಧನೆಗಳು, ಅಧ್ಯಯನಗಳು ನಡೆದಿವೆ. ಆಟಿಸಂ ಮಕ್ಕಳ ಸಾಮಾಜಿಕ, ಭಾವನಾತ್ಮಕ, ಬೌದ್ಧಿಕ ಕೌಶಲಗಳನ್ನು ಉತ್ತಮಪಡಿಸುವ ಚಿಕಿತ್ಸೆಗಳಿವೆ. ಆಟಿಸಂ ಶಿಕ್ಷಣ ಮತ್ತು ಮಕ್ಕಳನ್ನು ನಿಭಾಯಿಸಲು ಅನೇಕ ವಿಧಾನಗಳು ಚಾಲ್ತಿಯಲ್ಲಿವೆ.

ಈ ಮಕ್ಕಳ ಶಿಕ್ಷಣಕ್ಕಾಗಿ ಮತ್ತು ಸಾಮಾಜಿಕ ಬದಲಾವಣೆಗಾಗಿ ಕೆಲವು ಉಪಯುಕ್ತ ಮಾರ್ಗಗಳಲ್ಲಿ ತಂತ್ರಜ್ಞಾನ ಬಳಕೆಯು ಒಂದು. ಅವುಗಳಲ್ಲಿ ಕಿರುತಂತ್ರಾಂಶಗಳು ಮಕ್ಕಳಲ್ಲಿ ಬದಲಾವಣೆ ತರಲು ಒಂದಿಷ್ಟು ಸಹಾಯಮಾಡುತ್ತವೆ. ಗೂಗಲ್ ಪ್ಲೇಸ್ಟೋರ್ ನಲ್ಲಿ ಆಟಿಸಂ ಮಕ್ಕಳ ಕಲಿಕೆಗೆ ಸಂಬಂಧಿಸಿದ ಕೆಲವು ಉಪಯುಕ್ತ ಕಿರುತಂತ್ರಾಂಶಗಳು ಕಂಡುಬರುತ್ತವೆ. ಅವುಗಳಲ್ಲಿ ಕೆಲವನ್ನು ನೋಡೋಣ.

Autism: ಆಟಿಸಂನಿಂದ ಬಳಲುತ್ತಿರುವ ಮಕ್ಕಳ ಲಾಲನೆ ಪಾಲನೆ ಮತ್ತು ಅವರಿಗೆ ಸಾಮಾನ್ಯ ವಿಷಯಗಳನ್ನು ಕಲಿಸಲು ಸಹಾಯಕವಾಗುವ ಆ್ಯಪ್. ತಂದೆ–ತಾಯಿಗೆ ಮಕ್ಕಳ ಬೆಳವಣಿಗೆಗೆ, ಚಿಕಿತ್ಸೆ, ತರಬೇತಿ, ಪಾಲನೆ, ಕಲಿಕಾ ಕೌಶಲಗಳನ್ನು ತಿಳಿಸುವ ನೂರಾರು ವಿಡಿಯೊಗಳನ್ನು ಇದರಲ್ಲಿ ಅಳವಡಿಸಿದ್ದಾರೆ. ಇವುಗಳು ಸಾಮಾಜಿಕ, ಭಾವನಾತ್ಮಕ ಕೌಶಲಗಳನ್ನು ಕಲಿಸಲು ನೆರವಾಗುತ್ತದೆ. ಅವರ ಆರೋಗ್ಯದ ಬಗ್ಗೆ ಹೇಗೆ ನಿಗವಹಿಸಬೇಕು ಎಂಬುದು ಇಲ್ಲಿ ಚರ್ಚಿಸಲಾಗಿದೆ. Expert Health Studio ಎಂಬ ಕಂಪನಿಯ ಆ್ಯಪ್ ಇದು.

TEACH AUTISTIC CHILDREN: ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ ನಿಂದ ಬಳಲುವ ಮಕ್ಕಳಿಗೆ ಹೇಗೆ ಕಲಿಸಬೇಕು ಎಂಬುವುದನ್ನು ವಿವರವಾಗಿ ಕಲಿಸುವ ಆ್ಯಪ್. ಸ್ವಲೀನತೆಯನ್ನು ಗುರುತಿಸಲು, ಸಾಮಾಜಿಕ, ಸಂವಹನ, ನಡವಳಿಕೆ ಮತ್ತು ಸಂವೇದನಾ ಸಮಸ್ಯೆಗಳ ಕುರಿತು ಮಾಹಿತಿ ಹಾಗೂ ಇವುಗಳ ಬೆಳವಣಿಗೆಗೆ ಬೇಕಾದ ಕಲಿಕಾ ಸಂಪನ್ಮೂಲಗಳನ್ನು ತಿಳಿಸಲಾಗಿದೆ. ಶೈಕ್ಷಣಿಕ ವಿಷಯಗಳಲ್ಲಿ ಯಶಸ್ವಿ ಸಾಧಿಸಲು ಸಹಾಯಕವಾಗುವ ಕೆಲವು ತಂತ್ರಗಳಿವೆ. ವಿಭಿನ್ನವಾಗಿ ಮಕ್ಕಳ ದೈನಂದಿನ ಸಾಮಾನ್ಯ ವಿಷಯಗಳನ್ನು ಕಲಿಸಲು ಇದು ಶ್ರಮಿಸುತ್ತದೆ. ಇದು Achtech ಎಂಬ ಕಂಪನಿಯ ಆ್ಯಪ್.

Social Skills for Autism Kloog2: ಆಟಿಸಂ ಮಕ್ಕಳಿಗೆ ಕಲಿಸುವಾಗ ಅವರ ಗಮನವನ್ನು ಸೆಳೆದುಕೊಂಡು ಖುಷಿಯಿಂದ ಕಲಿಸಬೇಕಾಗುತ್ತದೆ. ಇದಕ್ಕಾಗಿ ಶೈನ್ ಸೆಂಟರ್ ಫಾರ್ ಆಟಿಸಂ (Shine Centre for Autism) ಎಂಬ ಸಂಸ್ಥೆ ಕೆಲವು ಆ್ಯಪ್ ಗಳನ್ನು ಹೊರತಂದಿದೆ. ಅದರಲ್ಲಿ ಈ ಆ್ಯಪ್ ಸಹ ಒಂದು. ಕೆಲವು ಆಟಗಳಿಂದ ಮತ್ತು ಪಾತ್ರಗಳಿಂದ ಕಲಿಕೆಯನ್ನು ರಂಜನೀಯವಾಗಿ ಕಲಿಸುತ್ತದೆ. ಜೀವನ ನಿರ್ವಹಣೆ, ಸುರಕ್ಷತೆಯ ಕೌಶಲಗಳು ಮತ್ತು ಸಾಮಾಜಿಕ ಸಂವಹನವನ್ನು ಉತ್ತಮಪಡಿಸಲು ಇದು ನೆರವಾಗುತ್ತದೆ.

Autism ABA teaching kids with pictures and labels: ಆಟಿಸಂನಿಂದ ಬಳಲುವ ಎಲ್ಲಾ ವಯಸ್ಸಿನ ಮಕ್ಕಳ ಕಲಿಕೆಗೆ ಸಂಬಂಧಿಸಿದ ಆ್ಯಪ್. ಆಟಿಸಂ ಚಿಕಿತ್ಸೆಯ ಪ್ರಕಾರಗಳಾದ ಅನ್ವಯಿಕ ವರ್ತನೆಯ ವಿಶ್ಲೇಷಣೆ ಮತ್ತು ಡಿಸ್ಕ್ರೀಟ್ ಟ್ರೈಯಲ್ ಟ್ರೇನಿಂಗ್ ತತ್ವಗಳನ್ನು ಆಧರಿಸಿ ಅತ್ಯಾಕರ್ಷಕ ಅನಿಮೇಷನ್ ಮತ್ತು ವಿಭಿನ್ನ ಚಿತ್ರಗಳನ್ನು ಅಳವಡಿಸಿದ್ದಾರೆ. ಇವುಗಳು ಪದಗಳನ್ನು ಕಲಿಯಲು ಮತ್ತು ಚಿತ್ರಗಳನ್ನು ಗುರುತಿಸಲು ಸಹಕರಿಸುತ್ತವೆ. ಸಲಕರಣೆಗಳು, ಹಣ್ಣು, ಪ್ರಾಣಿ, ಪಕ್ಷಿ, ದಿನನಿತ್ಯದ ಚಟುವಟಿಕೆಗಳ ಚಿತ್ರಗಳು ಮತ್ತು ಇತ್ಯಾದಿ ಚಿತ್ರಗಳನ್ನು ಅಳವಡಿಸಿದ್ದಾರೆ. helpingtogrow ಎಂಬ ಸಂಸ್ಥೆ ರಚಿಸಿದೆ.

Autism Language and Cognitive Therapy with MITA: ಆಟಿಸಂನಿಂದ ಬಳಲುವ ಮಗು ಇತರರ ಭಾವನೆ ಮತ್ತು ಭಾಷೆಯನ್ನು ಬೇಗನೆ ಅರ್ಥ ಮಾಡಿಕೊಳ್ಳಲಾರದು. ಸ್ಪೀಚ್ ಥೆರಪಿ ಮತ್ತು ಮಾನಸಿಕ ಚಿತ್ರಣ ಚಿಕಿತ್ಸೆಯ ಮೂಲಕ ಇದನ್ನು ಸರಿಪಡಿಸಬಹುದು. ಈ ಚಿಕಿತ್ಸೆಯ ತತ್ವವನ್ನು ಆಧರಿಸಿ ರಚಿಸಿದ ಆ್ಯಪ್ ಇದು.

ಸಂವಾದಾತ್ಮಕ ಪದಬಂಧಗಳು, ವಸ್ತವಿನ ವೈಶಿಷ್ಟ್ಯಗಳನ್ನು ಗುರುತಿಸಲು ಕೆಲವು ಆಟಗಳು, ವಸ್ತುಗಳನ್ನು ಹೇಗೆ ಸಂಯೋಜಿಸಬೇಕು ಎಂಬುವುದನ್ನು ಕಲಿಸುತ್ತದೆ. ಬಣ್ಣ, ಗಾತ್ರ ಮತ್ತು ಆಕಾರ ಸಂಯೋಜನೆಯ ಆಟಗಳು ಹಾಗೂ ಪಜಲ್ ಗಳನ್ನು ಅಳವಡಿಸಿದ್ದಾರೆ. ImagiRation LLC ಎಂಬ ಕಂಪನಿ ರಚಿಸಿದೆ.

Jade Autism: ರೊನಾಲ್ಡೊ ಕೋಯಿನ್ ಎಂಬ ಆಟಿಸಂ ಮಗುವಿನ ತಂದೆ ವಾಕ್ ಚಿಕಿತ್ಸ್ ಸಂಸ್ಥೆಯ ಸಹಾಯದಿಂದ ಈ ಆ್ಯಪ್ ಅನ್ನು ರಚಿಸಿದ್ದಾರೆ. ಆಟಿಸಂ ಮಕ್ಕಳಿಗೆ ಪ್ರಾಣಿಗಳು, ಬಣ್ಣಗಳು, ಸಂಖ್ಯೆಗಳು, ಆಹಾರ ಕ್ರಮ ಮತ್ತು ಅಕ್ಷರಗಳನ್ನು ಕುರಿತು ಕಲಿಸುತ್ತದೆ. ಮಗುವಿನ ತಾರ್ಕಿಕ ಕ್ರಿಯೆ, ಅರಿವು ಮತ್ತು ತಾರ್ಕಿಕ ಬೆಳವಣಿಗೆಗೆ ಸಹಕರಿಸುತ್ತದೆ. Jade Autism ಎಂಬ ಸಂಸ್ಥೆಯ ಆ್ಯಪ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.