ಬೆಂಗಳೂರು: ಜಿಯೊ ಪ್ಲಾಟ್ಫಾರ್ಮ್ಸ್ ಲಿಮಿಟೆಡ್ನ ಅಂಗಸಂಸ್ಥೆ ಆಗಿರುವ ಅಸ್ಟೀರಿಯಾ ಏರೋಸ್ಪೇಸ್ ಕಂಪನಿಯು ಡ್ರೋನ್ಗಳ ಕಾರ್ಯಾಚರಣೆಗೆ ಅಗತ್ಯವಿರುವ ಕ್ಲೌಡ್ ಆಧಾರಿತ ತಂತ್ರಾಂಶ ‘ಸ್ಕೈಡೆಕ್’ ಅಭಿವೃದ್ಧಿಪಡಿಸಿರುವುದಾಗಿ ತಿಳಿಸಿದೆ.

ಈ ತಂತ್ರಾಂಶವನ್ನು ಕೃಷಿ, ಸರ್ವೆ, ಕೈಗಾರಿಕಾ ಸ್ಥಳಗಳ ಪರಿಶೀಲನೆ ಮತ್ತು ಕಣ್ಗಾವಲು ಕೆಲಸಗಳಲ್ಲಿ ಬಳಸಿಕೊಳ್ಳಬಹುದು ಎಂದು ಅದು ಹೇಳಿದೆ. ಹಲವು ಡ್ರೋನ್ಗಳನ್ನು ನಿರ್ವಹಣೆ ಮಾಡಲು ಸ್ಕೈಡೆಕ್ ಏಕೀಕೃತ ಡ್ಯಾಶ್ಬೋರ್ಡ್ ಸೇವೆಯನ್ನು ಒದಗಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.

‘ಡ್ರೋನ್ಗೆ ಸಂಬಂಧಿಸಿದ ನಿಯಮಗಳನ್ನು ಈಚೆಗೆ ಸಡಿಲಿಸಿರುವ ಕಾರಣದಿಂದಾಗಿ ಬೇರೆ ಬೇರೆ ಉದ್ಯಮ ವಲಯಗಳಿಂದ ಡ್ರೋನ್ಗೆ ಬೇಡಿಕೆ ಹೆಚ್ಚುತ್ತಿದೆ’ ಎಂದು ಕಂಪನಿಯ ಸಹ ಸಂಸ್ಥಾಪಕ ಮತ್ತು ನಿರ್ದೇಶಕ ನೀಲ್ ಮೆಹ್ತಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.