ಎಚ್ಡಿಎಫ್ಸಿ ಇಂಟರ್ನೆಟ್ಬ್ಯಾಂಕಿಂಗ್ ಮತ್ತು ಮೊಬೈಲ್ ಅಪ್ಲಿಕೇಶನ್ಗಳಲ್ಲಿ ಸೋಮವಾರದಿಂದ (ಡಿ.2)ಅಡಚಣೆ ಕಂಡುಬರುತ್ತಿದೆ. ತಿಂಗಳ ಆರಂಭದಲ್ಲಿ ಕಾಣಿಸಿಕೊಂಡಿರುವ ಸಮಸ್ಯೆಯ ಕುರಿತುಗ್ರಾಹಕರು ಟ್ವೀಟ್ಗಳಮೂಲಕ ಆಕ್ರೋಶ ಹೊರಹಾಕುತ್ತಿದ್ದಾರೆ.ಟ್ವಿಟರ್ನಲ್ಲಿ#hdfcbankdown ಹ್ಯಾಷ್ಟ್ಯಾಗ್ ಮಂಗಳವಾರ ಇಂಡಿಯಾ ಟ್ರೆಂಡಿಂಗ್ ಪಟ್ಟಿಯಲ್ಲಿ ಕಾಣಿಸಿಕೊಂಡಿತ್ತು.

ಬಳಕೆದಾರರ ಪ್ರಕಾರ, ಎಚ್ಡಿಎಫ್ಸಿ ನೆಟ್ ಬ್ಯಾಂಕಿಂಗ್ ಅಪ್ಲಿಕೇಶನ್ ಲಾಗ್ ಇನ್ಪೇಜ್ನಲ್ಲಿ ’ಈಗ ಲಾಗ್ ಇನ್ ಆಗಿರುವ ಗ್ರಾಹಕರಿಂದ ತೀವ್ರ ಹೊರೆಯಾಗಿದ್ದು, ಸಮಸ್ಯೆ ಪರಿಹರಿಸಲು ನೆಟ್ ಬ್ಯಾಂಕಿಂಗ್ ವ್ಯವಸ್ಥೆಯು ಕಾರ್ಯನಿರತವಾಗಿದೆ. ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ’ ಎಂಬಂತಹ ಸಂದೇಶಗಳು ಕಾಣುತ್ತಿವೆ.

ಇನ್ನೂ ಕೆಲವರ ಪ್ರಕಾರ, ’ಪ್ರಸ್ತುತ ನಾವು ಭಾರಿ ದಟ್ಟಣೆ ಅನುಭವಿಸುತ್ತಿದ್ದೇವೆ. ದಯಮಾಡಿ ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ, ಅಡಚಣೆಗಾಗಿ ಕ್ಷಮಿಸಿ’ ಎಂದು ತೋರಿಸಲಾಗುತ್ತಿದೆ. ಬ್ಯಾಂಕ್ ವೆಬ್ಸೈಟ್ನಲ್ಲಿ ಬಿತ್ತರಗೊಂಡ ಮೆಸೇಜ್ಗಳ ಸ್ಕ್ರೀನ್ಶಾಟ್ಗಳನ್ನೂ ಗ್ರಾಹಕರು ಹಂಚಿಕೊಳ್ಳುತ್ತಿದ್ದಾರೆ.

‘ತಿಂಗಳ ಆರಂಭದಲ್ಲಿ ಹಲವು ಬಿಲ್ಗಳನ್ನು ಪಾವತಿಸಬೇಕು. ಆದರೆ, ನಾವು ಉಪಯೋಗಿಸುತ್ತಿರುವ ಎಚ್ಡಿಎಫ್ಸಿ ನೆಟ್ ಬ್ಯಾಂಕಿಂಗ್ ಅಪ್ಲಿಕೇಶನ್ ಕೆಲಸ ಮಾಡುತ್ತಿಲ್ಲ. ಬಿಲ್ ಪಾವತಿಸಲು ತಡವಾದರೆ, ನಮಗೆ ದಂಡ ವಿಧಿಸಲಾಗುತ್ತದೆ’ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಹಕರ ತೊಂದರೆಗೆ ಸ್ಪಂದಿಸಿರುವ ಎಚ್ಡಿಎಫ್ಸಿ ಬ್ಯಾಂಕ್, ’ಇದೊಂದು ತಾಂತ್ರಿಕ ದೋಷ, ಅಡಚಣೆಗಾಗಿ ಕ್ಷಮಿಸಿ. ಸಮಸ್ಯೆ ಬಗೆಹರಿಸಲು ತಂತ್ರಜ್ಞರು ಕಾರ್ಯಪ್ರವೃತ್ತರಾಗಿದ್ದಾರೆ,’ ಎಂದು ಹೇಳಿದೆ. ಆದರೆ, ಯಾವಾಗ ಸಮಸ್ಯೆ ಬಗೆಹರಿಯಲಿದೆ ಎಂದು ಸ್ಟಷ್ಟಪಡಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.