ಕಾನ್ಪುರ: ಸರ್ಕಾರಿ ಕಚೇರಿಯ ಒಳಗಿಂದ ಕಡತಗಳನ್ನು ಮೇಕೆಯೊಂದು ಕಚ್ಚಿಕೊಂಡು ಓಡುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾನ್ಪುರದ ಚೌಬೆಪುರ್ ಬ್ಲಾಕ್‌ನ ಪಂಚಾಯತ್ ಕಾರ್ಯದರ್ಶಿಯ ಕಚೇರಿಯಲ್ಲಿ ಬುಧವಾರ ಈ ಘಟನೆ ಸಂಭವಿಸಿದೆ.

ಕಚೇರಿಯ ಸಿಬ್ಬಂದಿ ಮೇಕೆಯ ಹಿಂದೆ ಫೈಲ್‌ಗಾಗಿ ಓಡುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. 'ಟೈಮ್ಸ್ ಆಫ್ ಇಂಡಿಯಾ'ದ ವರದಿ ಪ್ರಕಾರ ಕಾನ್ಪುರದ ಕಚೇರಿಯ ಕೋಣೆಯೊಂದರಲ್ಲಿ ಯಾರೂ ಇಲ್ಲದಿದ್ದಾಗ ಒಳಪ್ರವೇಶಿಸಿದ ಮೇಕೆ ಕೆಲವು ಕಡತಗಳನ್ನು ಕಚ್ಚಿಕೊಂಡು ಹೊರಗೆ ಹೋಗಿದೆ. ಕಚೇರಿಯ ಹೊರಗಿದ್ದ ಕೆಲವು ಸಿಬ್ಬಂದಿಗಳು ಕಡತಗಳನ್ನು ಕಚ್ಚಿಕೊಂಡು ಹೋಗುತ್ತಿರುವ ಮೇಕೆಯನ್ನು ನೋಡಿ ಬೊಬ್ಬೆ ಹಾಕಿದ್ದಾರೆ.

ಓರ್ವ ಸಿಬ್ಬಂದಿ ಫೈಲ್‌ಗಳನ್ನು ಮೇಕೆಯಿಂದ ಕಸಿದುಕೊಳ್ಳಲು ಅದರ ಹಿಂದೆ ಓಡಿದ್ದಾರೆ. ಈ ಸಂದರ್ಭ 'ಅರೆ ಯಾರ್ ತು ದೇ' (ಫೈಲ್‌ಗಳನ್ನು ವಾಪಸ್ ಕೊಡು) ಎಂದು ಹೇಳುತ್ತ ಸಿಬ್ಬಂದಿ ಓಡುತ್ತಿರುವ ವಿಡಿಯೊ ನೆಟ್ಟಿಗರಿಗೆ ವಿನೋದದ ಸರಕಾಗಿ ಪರಿಣಮಿಸಿದೆ.

ತಾಯಿಗೆ ವೈದ್ಯರ ತಪ್ಪು ಸಲಹೆಯಿಂದ ತನ್ನ ಜನನ: ಕೋರ್ಟ್ ಮೆಟ್ಟಿಲೇರಿದ ಯುವತಿಗೆ ಜಯ

ಅಂತಿಮವಾಗಿ ಕಡತಗಳನ್ನು ಮೇಕೆ ಅಗಿದು ಹಾಕುವ ಮೊದಲೇ ಕಸಿದುಕೊಳ್ಳುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಸರ್ಕಾರಿ ಕಚೇರಿಯಲ್ಲಿ ಕಡತಗಳನ್ನು ಕಾಪಾಡುವಲ್ಲಿ ಬೇಜವಾಬ್ದಾರಿತನ ತೋರುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯಿದು ಎಂದು ಹಲವರಿಂದ ಟೀಕೆ ವ್ಯಕ್ತವಾಗಿದೆ.

ಮೇಕೆ ಕೆಲವು ತ್ಯಾಜ್ಯ ಪೇಪರ್‌ಗಳನ್ನು ಕಚ್ಚಿಕೊಂಡು ಓಡಿ ಹೋಗಿತ್ತು. ಅವುಗಳು ಕಚೇರಿಯ ಕಡತಗಳಲ್ಲ ಎಂದು ಚೌಬೆಪುರ್ ಬ್ಲಾಕ್ ಅಭಿವೃದ್ಧಿ ಅಧಿಕಾರಿ ಮನುಲಾಲ್ ಯಾದವ್ 'ಎಎನ್‌ಐ'ಗೆ ಸ್ಪಷ್ಟಪಡಿಸಿದ್ದಾರೆ.

'ಕಚೇರಿ ಸಿಬ್ಬಂದಿ ಹೊರಗೆ ಕುಳಿತಿದ್ದರಿಂದ ಈ ಘಟನೆ ಸಂಭವಿಸಿದೆ. ಕಚೇರಿ ಅವಧಿಯಲ್ಲಿ ಕೊಠಡಿಯ ಒಳಗೆ ಕುಳಿತು ಕೆಲಸ ನಿರ್ವಹಿಸಲು ಸಿಬ್ಬಂದಿಗೆ ನಿರ್ದೇಶನ ನೀಡಲಾಗಿದೆ' ಯಾದವ್ ಅವರು ತಿಳಿಸಿದ್ದಾರೆ.

ಇಲಿಯಾನ ಮಾಲ್ಡೀವ್ಸ್ ಮೋಹ: ಅಭಿಮಾನಿಗಳಿಗೆ ಫೋಟೊ, ವಿಡಿಯೊ ನೋಡುವ ಕಾತರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.