ವಿಜ್ಞಾನಿಯಾಗಿ, ರಾಷ್ಟ್ರಪತಿಯಾಗಿ ಅಪಾರ ಮೆಚ್ಚುಗೆ ಗಳಿಸಿದ್ದ ಎ.ಪಿ.ಜೆ.ಅಬ್ದುಲ್ ಕಲಾಂ ಅವರು ‘ನೋ ಗಿಫ್ಟ್’ ಪಾಲಿಸಿ ಪಾಲಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇದೀಗ ಕಲಾಂ ಅವರು ನೀಡಿರುವ ಚೆಕ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಗಿಫ್ಟ್ ಪಡೆದುಕೊಂಡು ಕೊನೆಗೆ ಅದಕ್ಕೆ ಹಣ ಪಾವತಿಸಿರುವುದು ಬಹಿರಂಗವಾಗಿದೆ.

ಐಎಎಸ್ ಅಧಿಕಾರಿ ಎಂ. ವಿ. ರಾವ್ ಅವರು ತಮ್ಮ ಟ್ವಿಟರ್ (ಎಕ್ಸ್) ಖಾತೆಯಲ್ಲಿ ಕಲಾಂ ಅವರ ಗಿಫ್ಟ್ ಪ್ರಸಂಗವನ್ನು ಬಿಚ್ಚಿಟ್ಟಿದ್ದಾರೆ. ನೈತಿಕತೆ ಮತ್ತು ಶಿಸ್ತು ಪಾಲನೆಯಲ್ಲಿ ಕಲಾಂ ಎಷ್ಟು ನಿಷ್ಟೂರ ಎಂಬುವುದನ್ನು ರಾವ್ ಅವರ ಈ ಪೋಸ್ಟ್ ತೋರಿಸುತ್ತದೆ.

2014ರಲ್ಲಿ ಕಲಾಂ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಮಾರಂಭದ ಪ್ರಾಯೋಜಕತ್ವವನ್ನು 'ಸೌಭಾಗ್ಯ ವೆಟ್ ಗ್ರೈಂಡರ್' ಎಂಬ ಕಂಪನಿ ವಹಿಸಿಕೊಂಡಿತ್ತು. ಸಮಾರಂಭದ ಕೊನೆಯಲ್ಲಿ ಅತಿಥಿ ಸತ್ಕಾರದ ಭಾಗವಾಗಿ ಕಂಪನಿಯು ಕಲಾಂ ಅವರಿಗೆ ಗ್ರೈಂಡರ್ ಅನ್ನು ಉಡುಗೊರೆಯಾಗಿ ನೀಡಿತ್ತು. ಗಿಫ್ಟ್‌ಗಳನ್ನು ತೆಗೆದುಕೊಳ್ಳದ ಕಲಾಂ ಅವರು ಗ್ರೈಂಡರ್ ತೆಗೆದುಕೊಳ್ಳಲು ಹಿಂದೇಟು ಹಾಕಿದ್ದರು. ಪಟ್ಟು ಬಿಡದ ಕಂಪನಿ ಕಲಾಂ ಅವರಿಗೆ ಗ್ರೈಂಡರ್ ತೆಗೆದುಕೊಳ್ಳುವಂತೆ ಮಾಡಿತ್ತು.

ಇದಾದ ಸ್ವಲ್ಪ ದಿನದಲ್ಲೇ ಗ್ರೈಂಡರ್‌ನ ಮಾರುಕಟ್ಟೆ ಬೆಲೆ ತಿಳಿದುಕೊಂಡ ಕಲಾಂ, ಕಂಪನಿಗೆ ಚೆಕ್ ಕಳುಹಿಸಿದ್ದರು. ಕಲಾಂ ಅವರ ಚೆಕ್ ಕಂಡು ಅಚ್ಚರಿಪಟ್ಟ ಕಂಪನಿ ಕೊನೆಗೆ ಅದನ್ನು ಡೆಪಾಸಿಟ್ ಮಾಡದೆ ಇರಲು ನಿರ್ಧರಿಸಿತ್ತು. ಕಲಾಂ ಅವರ ಆ ಚೆಕ್ ಇನ್ನೂ ಹಾಗೆ ಉಳಿದಿದೆ.

ಕಲಾಂ ಅವರು ಕಂಪನಿಗೆ ನೀಡಿದ ಚೆಕ್‌ನ ಪೋಟೊವನ್ನು ಕೂಡ ರಾವ್ ಅವರು ಪೋಸ್ಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.