ವಾಷಿಂಗ್ಟನ್: ಸುದ್ದಿ ನಿರೂಪಕಿಯೊಬ್ಬರಿಗೆ ನೇರಪ್ರಸಾರ ಕಾರ್ಯಕ್ರಮದಲ್ಲಿ ಸಹ ಪತ್ರಕರ್ತರೊಬ್ಬರು ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಅಮೆರಿಕದ NBCಯ ಅಂಗಸಂಸ್ಥೆಯಾದ WRCB-TV ವಾಹಿನಿಯ ನೇರಪ್ರಸಾರದ ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿದೆ.

ಕಾರ್ನೆಲಿಯಾ ನಿಕೋಲ್ಸನ್ ಅವರು ಎಂದಿನಂತೆ ನೇರಪ್ರಸಾರ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. ಈ ವೇಳೆ ಆಕೆಯ ಪತ್ರಕರ್ತ ಗೆಳೆಯ ರಿಲೆನಗೆಲ್ ಅವರು ರಿಂಗ್ ಮತ್ತು ಹೂವಿನ ಗುಚ್ಚಗಳೊಂದಿಗೆ ಬಂದು ಮಂಡಿಯೂರಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ.

ಇದನ್ನು ನೋಡಿ ಕಾರ್ನೆಲಿಯಾ ಖುಷಿ ಮತ್ತು ಅಚ್ಚರಿಗೊಂಡಿರುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ.

‘ಮನೆಯಲ್ಲಿ ಕುಳಿತು ನೋಡುತ್ತಿರುವರಿಗೆ ವಿಶೇಷ ಸುದ್ದಿಯಿದೆ. ನಾನು ಮತ್ತು ಕಾರ್ನೆಲಿಯಾ ನಾಲ್ಕು ವರ್ಷಗಳ ಹಿಂದೆ ಮೊನಟಾನಾದಲ್ಲಿ ಮೊದಲ ಬಾರಿ ಹಿಂದೆ ಭೇಟಿಯಾಗಿದ್ದೆವು ಎಂದು ಮಾತು ಆರಂಭಿಸಿ, ಎಷ್ಟು ಉತ್ತಮವಾದ ವ್ಯಕ್ತಿತ್ವ ನಿಮ್ಮದು, ಮೊದಲ ಭೇಟಿಯಲ್ಲಿಯೇ ನಿಮಗೆ ಸೋತುಹೋಗಿದ್ದೆ’ ಎಂದು ಮನದ ಮಾತನ್ನು ರಿಲೆ ಹೇಳಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ವಿಡಿಯೊಗೆ ಸಾವಿರಾರು ಕಾಮೆಂಟ್‌ಗಳು ಬಂದಿದ್ದು, ಶುಭಾಶಯಗಳನ್ನು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.