ಬೆಂಗಳೂರು: ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರಿಗೆ ಅವರ ಮಹಿಳಾ ಅಭಿಮಾನಿಯೊಬ್ಬರು ಮುತ್ತು ಕೊಡಲು ಯತ್ನಿಸಿರುವ ಘಟನೆ ನಡೆದಿದೆ.

ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ನವೆಂಬರ್2ರಂದು ನಾಯ್ಡು ಅವರು ವಿಶಾಖಪಟ್ಟಣಕ್ಕೆ ತೆರಳಿದ್ದರು. ಈ ವೇಳೆ ಭದ್ರತಾ ಸಿಬ್ಬಂದಿಯನ್ನು ನೂಕಿ ಬಂದ ಮಹಿಳೆ ಚಂದ್ರಬಾಬು ಅವರಿಗೆ ಹೂಗುಚ್ಚ ಕೊಟ್ಟು ಮುತ್ತಿಕ್ಕಲು ಯತ್ನಿಸಿದರು. ಈ ವೇಳೆ ನಾಯ್ಡು ಅವರು ಆ ಮುತ್ತನ್ನು ನಿರಾಕರಿಸಿದರು.

ಇನ್ನು ವಿಶಾಖಪಟ್ಟಣದಲ್ಲಿರುವ ಋಷಿಕೊಂಡ ಬೆಟ್ಟದ ವಿವಾದಿತ ಕಟ್ಟಡವನ್ನು ಸಾರ್ವಜನಿಕರ ಭೇಟಿಗೆ ಶೀಘ್ರವೇ ಮುಕ್ತವಾಗಿಸಲಾಗುವುದು ಎಂದು ಇದೇ ವೇಳೆ ಸಿಎಂ ಹೇಳಿದ್ದಾರೆ.

ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಅವರು ತಮ್ಮ ಐಷಾರಾಮಿ ಜೀವನಕ್ಕಾಗಿ ಇದನ್ನು ಸಾರ್ವಜನಿಕ ಹಣದಲ್ಲಿ ನಿರ್ಮಿಸಿಕೊಂಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.