ಕಂಪ್ಯೂಟರ್ ಅರ್ಥಾತ್ ಗಣಕಯಂತ್ರ ಗೊತ್ತಿರುವವರಿಗೆ ವಿಂಡೋಸ್ ಎಂಬ ಆಪ್ತಮಿತ್ರನ ಪರಿಚಯ ಇರಲೇಬೇಕು. ನಮ್ಮ ದೈನಂದಿನ ಅನೇಕ ಕಂಪ್ಯೂಟರ್ ಕೆಲಸಗಳು ನಡೆಯುವುದೇ ವಿಂಡೋಸ್ ವ್ಯವಸ್ಥೆ ಮೂಲಕ. ಇದಿಲ್ಲದೇ ಕಂಪ್ಯೂಟರ್ ಜಗತ್ತನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಜನಜೀವನದ ಮೇಲೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪ್ರಭಾವ ಬೀರುವ ವಿಂಡೋಸ್ ಆಪರೇಟಿಂಗ್ ಸಿಸ್ಟೆಂ ಆಗಾಗ ಹೊಸತನಕ್ಕೆ ಒಡ್ಡಿಕೊಳ್ಳುತ್ತಲೇ ಬಂದಿದೆ. ಮೈಕ್ರೊಸಾಫ್ಟ್ ಇದರೊಂದಿಗೆ ಹೊಸ ತಂತ್ರಾಂಶಗಳನ್ನು ಪರಿಚಯಿಸುತ್ತಾ, ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ಮಾರ್ಪಾಡು ಮಾಡಿಕೊಳ್ಳುತ್ತಾ ಬಂದಿದೆ. ಅಂತಹ ಪ್ರಯತ್ನಗಳ ಪಟ್ಟಿಗೆ ಇದೀಗ ಹೊಸದಾಗಿ ಸೇರ್ಪಡೆಯಾಗಿರುವುದೇ ವಿಂಡೋಸ್ 10. ಇದರ ರೂಪರೇಶೆಗಳೇನು, ಏನೇನು ಹೊಸತಿದೆ ಎಂಬುದರ ಕಿರುನೋಟ ಇಲ್ಲಿದೆ.

ತನ್ನದೇ ಆವೃತಿಯನ್ನು ಹಿಮ್ಮೆಟ್ಟಿದ ವಿಂಡೋಸ್ 10
‘ವರ್ಚುವಲ್ ಡೆಸ್ಕ್‌ಟಾಪ್’ನಂತಹ ವಿಶಿಷ್ಟ ಫೀಚರ್‌ಗಳು ಈವರೆಗೂ ಮ್ಯಾಕ್ ಮತ್ತು ಲಿನಕ್ಸ್‌ನಲ್ಲಿ ಮಾತ್ರ ಕಾಣಬಹುದಾಗಿತ್ತು. ಆದರೆ ಇಂತಹ ಅಪರೂಪದ ಗುಣಲಕ್ಷಣಗಳನ್ನು ಮೈಕ್ರೊಸಾಫ್ಟ್ ಇದೇ ಮೊದಲ ಬಾರಿಗೆ ವಿಂಡೋಸ್ ವ್ಯಾಪ್ತಿಗೆ ಅಳವಡಿಸಿದೆ. ಅತಿ ಹೆಚ್ಚು ವಿಂಡೋಗಳನ್ನು ಬಳಸಿಕೊಂಡು ಕಾರ್ಯನಿರ್ವಹಿಸುವವರಿಗೆ ಇದೊಂದು ಉತ್ತಮ ಕೊಡುಗೆ. ಇದರಲ್ಲಿ ಒಂದಕ್ಕಿಂತ ಹೆಚ್ಚು ಡೆಸ್ಕ್‌ಟಾಪ್‌ಗಳನ್ನು ಏಕಕಾಲದಲ್ಲಿ ನಿರ್ವಹಿಸಬಹುದು. ಒಂದು ಡೆಸ್ಕ್‌ಟಾಪ್‌ನಲ್ಲಿರುವ ಆ್ಯಪ್ ಗಳನ್ನು ಇನ್ನೊಂದು ಡೆಸ್ಕ್‌ಟಾಪ್ ಕಂಪ್ಯೂಟರ್‌ಗೆ ಸುಲಭವಾಗಿ ಮೂವ್ ಮಾಡಬಹುದು.

ಸ್ಟಾರ್ಟ್
ವಿಂಡೋಸ್ 8ರಲ್ಲಿ ಉತ್ತಮ ಸ್ಟಾರ್ಟ್ ಮೆನು ಇಲ್ಲ ಎಂಬ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿಬಂದಿದ್ದವು. ಆದ್ದರಿಂದ ಇಲ್ಲಿ ಸ್ಟಾರ್ಟ್ ಮೆನು ಮೇಲೆ ಹೆಚ್ಚು ಗಮನ ಹರಿಸಲಾಗಿದೆ.
ಬಳಕೆದಾರರ ನಿರೀಕ್ಷೆಗಳಿಗೆ ತಕ್ಕಂತೆಯೇ ಹೆಚ್ಚಿನ ಆಯ್ಕೆಗಳನ್ನು ಅಳವಡಿಸುವ ಮೂಲಕ ಇದನ್ನು ಗ್ರಾಹಕ ಸ್ನೇಹಿಯಾಗಿ ಅಭಿವೃದ್ಧಿಪಡಿಸಲಾಗಿದೆ. ಸ್ಟಾರ್ಟ್ ಮೆನು ಅಗತ್ಯಕ್ಕನುಗುಣವಾಗಿ ಶ್ರೇಣೀಕೃತ ಪಟ್ಟಿಯೊಂದಿಗೆ ಸಹಕರಿಸುತ್ತದೆ. ಇಲ್ಲಿನ ಲೈವ್ ಟೈಲ್ ಗಳನ್ನು ಸುಲಭವಾಗಿ ನಿರ್ವವಹಿಸಬಹುದು. ಸ್ಟಾರ್ಟ್ ಮೆನುವಿನಲ್ಲಿ ಆ್ಯಪ್‌ಗಳನ್ನು ಪಿನ್ ಮಾಡುವುದರ ಮೂಲಕ ಮೆನುವಿನ ಎತ್ತರ ಮತ್ತು ಅಗಲವನ್ನು ಬಳಕೆದಾರ ತನಗೆ ಅನುಕೂಲ ಆಗುವ ರೀತಿಯಲ್ಲಿ ಹೊಂದಿಸಿಕೊಳ್ಳಬಹುದು. ಕೀ ಬೋರ್ಡ್, ಮೌಸ್ ಮತ್ತು ಟಚ್ ಮೂಲಕ ಸ್ಟಾರ್ಟ್ ಮೆನು ಬಳಸಿಕೊಳ್ಳಲು ಸುಲಭವಾಗುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

ಸ್ಮಾರ್ಟ್ ಸ್ಟೋರ್
ವಿಂಡೋಸ್ ಸ್ಟೋರ್‌ನಲ್ಲಿರುವ ಎಲ್ಲ ಆ್ಯಪ್‌ಗಳನ್ನು ಒಂದೆಡೆ ನಮಗೆ ಬೇಕಾದ ರೀತಿಯಲ್ಲಿ ಜೋಡಿಸಿಕೊಳ್ಳಬಹುದು. ಇದರೊಂದಿಗೆ ಹೊಸ ಆ್ಯಪ್‌ಗಳನ್ನು ಸಹ ಸೇರಿಸಬಹುದು. ವಿಂಡೋದ ಎಡ ಬದಿಯ ಮೇಲ್ಭಾಗದಲ್ಲಿ ಕ್ಲಿಕ್ ಮಾಡಿದಾಗ ಮಿನಿಮೈಸ್, ಮ್ಯಾಕ್ಸಿಮೈಸ್, ಪ್ರಾಜೆಕ್ಟ್, ಪ್ಲೇ, ಶೇರ್, ಸರ್ಚ್ ಸೇರಿದಂತೆ ಅನೇಕ ಹೊಸ ಆಯ್ಕೆಗಳನ್ನು ಕಾಣಬಹುದು. ಇದರಲ್ಲಿರುವ ಕೆಲ ಆಯ್ಕೆಗಳನ್ನು ತಾಂತ್ರಿಕ ವಿಶ್ಲೇಷಣೆಗೆ ಒಳಪಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಬದಲಾವಣೆಗಳೊಂದಿಗೆ ತೆರೆದುಕೊಳ್ಳಲಿದೆ.

ಸ್ನ್ಯಾಪ್ ಮೋಡ್
ವಿಂಡೋಸ್ 7ನಲ್ಲಿರುವ ಆ್ಯರೋ ಸ್ನ್ಯಾಪ್ ಮೋಡ್ ಮತ್ತು ವಿಂಡೋಸ್ 8ನಲ್ಲಿನ ಸ್ನ್ಯಾಪ್ ಮೋಡ್‌ಗಳನ್ನು ಒಂದುಗೂಡಿಸಿ ಕೋಡ್ರಂಟ್‌ನ ಸ್ನ್ಯಾಪ್ ಮೋಡನ್ನು ಪರಿಚಯಿಸಲಾಗಿದೆ. ಸ್ಕ್ರೀನ್‌ನಲ್ಲಿ ಒಂದಕ್ಕಿಂತ ಹೆಚ್ಚು ಆ್ಯಪ್‌ಗಳನ್ನು ನಿಭಾಯಿಸುವ ದೃಷ್ಟಿಯಿಂದ ಇದನ್ನು ಒದಗಿಸಲಾಗಿದೆ. ಯಾವುದೇ ಒಂದು ಅಪ್ಲಿಕೇಷನನ್ನು ಕಾರ್ನರ್‌ನಲ್ಲಿ ಎಳೆದ ತಕ್ಷಣ ಸ್ಕ್ರೀನ್ ಆದ್ಯತೆ ಮತ್ತು ಅಲ್ಲಿರುವ ಸ್ಥಳಾವಕಾಶಕ್ಕೆ ಅನುಗುಣವಾಗಿ ಸ್ಕ್ರೀನ್ ಮೇಲೆ ವಿಂಡೋಗಳು ತಾನೇ ತಾನಾಗಿ ಹೊಂದಿಕೊಳ್ಳುತ್ತವೆ.

ಹೋಮ್ ಟ್ಯಾಬ್
ಮೈಕ್ರೋಸಾಫ್ಟ್ ವಿಂಡೋಸ್‌ನ ಈವರೆಗಿನ ಯಾವುದೇ ಆವೃತಿಯಲ್ಲಿ ‘ವಿಂಡೋಸ್ ಎಕ್ಸ್‌ಪ್ಲೋರರ್’ನಲ್ಲಿ ಹೋಮ್ ಬಟನ್ ಆಯ್ಕೆಗೆ ಅವಕಾಶವಿರಲಿಲ್ಲ. ಈ ಆವೃತ್ತಿಯಲ್ಲಿ ವಿಶೇಷವಾಗಿ ಇದನ್ನು ಸೇರಿಸಲಾಗಿದೆ. ಈಗ ಹೋಮ್ ಬಟನ್ ಮೇಲೆ ಕ್ಲಿಕ್ ಮಾಡುವ ಮೂಲಕ ನೇರವಾಗಿ ಕಸ್ಟಮೈಸ್ಡ್ ಆದ ಡೆಸ್ಕ್‌ಟಾಪ್‌ಗೆ ತಲುಪಬಹುದು.

ರಿಸೈಕಲ್ ಬಿನ್
ವಿಂಡೋಸ್‌ನ ಮೊದಲಿನ ಎಲ್ಲ ಆವೃತ್ತಿಗಳಲ್ಲಿ ರಿಸೈಕಲ್ ಬಿನ್ ಒಂದನ್ನು ಹೊರತುಪಡಿಸಿ ನಿಮಗೆ ಬೇಕಾದ ಎಲ್ಲಾ ಶಾರ್ಟ್‌ಕಟ್‌ಗಳನ್ನೂ ಟಾಸ್ಕ್ ಬಾರ್‌ನಲ್ಲಿ ಸೇರಿಸಿಕೊಳ್ಳಬಹುದಾಗಿತ್ತು. ಇಲ್ಲಿ ರಿಸೈಕಲ್ ಬಿನ್ ಅನ್ನೂ ಟಾಸ್ಕ್ ಬಾರ್‌ಗೆ ತರಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ಯಥಾಪ್ರಕಾರ ಇದನ್ನು ಟಾಸ್ಕ್ ಬಾರ್‌ನಲ್ಲಿ ಪಿನ್ ಸಹ ಮಾಡಬಹುದು.

ಸ್ಮಾರ್ಟ್ ಕಾಂಟಿನಮ್
ಕಾಂಟಿನಮ್ ನಿಮ್ಮ ಡಿವೈಸ್ ಆಧಾರದ ಮೇಲೆ ಯೂಸರ್ ಇಂಟರ್ ಫೇಸನ್ನು ಬದಲಾವಣೆ ಮಾಡಿಕೊಳ್ಳುತ್ತದೆ. ಅಂದರೆ ಕೀಬೋರ್ಡ್ ಮತ್ತು ಟಚ್ ಡಿವೈಸ್ ನಡುವಿನ ವ್ಯತ್ಯಾಸವನ್ನು ತಾನಾಗಿಯೇ ಗುರುತಿಸಿಕೊಂಡು ಅದಕ್ಕೆ ಅನುಗುಣವಾಗಿ ತನ್ನ ಬಳಕೆದಾರನಿಗೆ ಅನುಕೂಲ ಆಗುವ ರೀತಿಯಲ್ಲಿ ಪಾಪ್ ಅಪ್ ಸಂದೇಶವನ್ನು ಕೊಡುವ ಮೂಲಕ ತನ್ನ ಇಂಟರ್‌ಫೇಸ್ ಬದಲಾಯಿಸಲು ಸೂಚಿಸುತ್ತದೆ.

ಫೈಲ್ ಸುರಕ್ಷತೆ
ಕೇವಲ ಬಾಹ್ಯ ವಿನ್ಯಾಸಕ್ಕೆ ಮಹತ್ವ ಕೊಡದೇ ಫೈಲ್‌ನ ಆಂತರಿಕ ಸುರಕ್ಷತೆಯ ಬಗ್ಗೆಯೂ ಇಲ್ಲಿ ಹೆಚ್ಚಿನ ಗಮನ ಹರಿಸಲಾಗಿದೆ. ಒಂದು ಆ್ಯಪ್‌ನಲ್ಲಿರುವ ಮಾಹಿತಿಯನ್ನು ಇನ್ನೊಂದು ಆ್ಯಪ್ ಮೂಲಕ ಬಳಸಿಕೊಳ್ಳಲು ಸಾಧ್ಯವಾಗದಂತೆ ಮೈಕ್ರೋ ಹಂತದಲ್ಲಿ ಡೇಟಾವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಸುರಕ್ಷಿತವಾಗಿಡುವ ಕುರಿತು ಸಂಶೋಧನೆಗಳು ನಡೆಯುತ್ತಿರುವ ಬಗ್ಗೆ ಮೈಕ್ರೋಸಾಫ್ಟ್ ಮುನ್ಸೂಚನೆ ನೀಡಿದೆ. ಡೇಟಾ ಕಂಟೇನರ್ ನಿರ್ವಹಣೆಗಾಗಿ ಇರುವ ಬಿಟ್‌ಲಾಕರ್‌ನಂತಹ ಸೌಲಭ್ಯಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅಭಿವೄದ್ಧಿಪಡಿಸಲಾಗುತ್ತಿದೆ.

ವಿಂಡೋಸ್ 8ರ ಮುಂದುವರೆದ ಆವೃತ್ತಿಯನ್ನು ಬಹಳ ದಿನಗಳಿಂದ ನಿರೀಕ್ಷಿಸಲಾಗುತ್ತಿತ್ತು. ವಿಂಡೋಸ್ 8ರ ಹಲವಾರು ದೋಷಗಳನ್ನು ಮೀರಿ ಆವೃತ್ತಿ ಹೊರಬರಬಹುದು ಎಂಬ ಬಗ್ಗೆ ಬಳಕೆದಾರರಲ್ಲಿ ಸಾಕಷ್ಟು ಕುತೂಹಲವೂ ಇತ್ತು. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ವಿಂಡೋಸ್ 10 ಮಾರುಕಟ್ಟೆ ಪ್ರವೇಶಿಸಿದೆ. ಆದರೆ ಗ್ರಾಹಕರ ಆಶೋತ್ತರಗಳನ್ನು ಇದು ಎಷ್ಟರ ಮಟ್ಟಿಗೆ ತಲುಪಬಹುದು ಎಂಬುದನ್ನು ನೋಡಲು ಇನ್ನಷ್ಟು ದಿನಗಳು ಬೇಕೇನೊ.

ಇನ್‌ಸ್ಟಲೇಷನ್ ಮಾರ್ಗಸೂಚಿ

*ವಿಂಡೋಸ್ 10ರ ಐಎಸ್ ಒ ಫೈಲ್ ಕಡಿಮೆ ಎಂದರೂ 4 ಜಿಬಿ ಇದೆ
*1Gzh ಅಥವಾ ಇದಕ್ಕೂ ಹೆಚ್ಚಿನ ಪ್ರೋಸೆಸರ್ ಇರಬೇಕು
*32 ಬಿಟ್ ಇದ್ದರೆ 1 ಜಿಬಿ ರಾಮ್ ಇರಬೇಕು
*64 ಬಿಟ್ ಇದ್ದರೆ 2 ಜಿಬಿ ರಾಮ್ ಇರಬೇಕು
*ಇನ್ ಸ್ಟಾಲ್ ಮಾಡುವ ಡ್ರೈವ್ ನಲ್ಲಿ16 ಜಿಬಿ ಅಥವಾ ಅದಕ್ಕೂ ಹೆಚ್ಚಿನ ಫ್ರೀ ಸ್ಪೇಸ್ ಇರಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.