ಜಗತ್ತಿನಲ್ಲಿ ಹವ್ಯಾಸವಿರದ ಮನುಷ್ಯರಿರುವುದು ಅತಿ ವಿರಳ. ಹವ್ಯಾಸಗಳು ಮನುಷ್ಯನನ್ನು ಸದಾ ಖುಷಿಯಲ್ಲಿಡುತ್ತವೆ ಜೀವನ ಚೈತನ್ಯಪೂರ್ಣವಾಗಿರಲು ಸಹಾಯ ಮಾಡುತ್ತವೆ. ಕೆಲವೊಮ್ಮೆ ಹವ್ಯಾಸ ಹುಚ್ಚಾಗಿ ಮಾರ್ಪಾಡಾಗುವುದುಂಟು. ಯಾರಿಗೂ ತೊಂದರೆ ಕೊಡದೆ ಒಳ್ಳೆಯದೇ ಮಾಡುವ ಹುಚ್ಚುಗಳಿವು. ಹಾಗೆ ಅಂಥದೇ ನನಗೆ ಅಂಟಿಕೊಂಡ ಒಂದು ಹುಚ್ಚು ಅಡುಗೆ ಮಾಡುವುದು.

ಭಾರತ ದೇಶದಲ್ಲಿ ಹುಟ್ಟಿದ ಪ್ರತಿ ಜೀವಕ್ಕೂ ಅಡುಗೆ ಮಾಡುವ ಕಲೆ ಎಂಬುದು ಬಳುವಳಿಯಾಗಿ ಬಂದಿರುತ್ತದೆ. ಕೆಲವರು ಬರೀ ದಿನನಿತ್ಯದ ಅಡುಗೆಯ ಮಟ್ಟಿಗೆ ಮಾತ್ರ ಆ ಕಲೆಯನ್ನು ಸೀಮಿತ ಗೊಳಿಸಿದರೆ, ಮತ್ತೊಂದಿಷ್ಟು ಜನ ಜನ್ಮಜಾತವಾಗಿ ಒದಗಿ ಬರುವ ಈ ವಿದ್ಯೆಗೆ ಹೊಸ ಆಯಾಮ ನೀಡಿ ವೃತ್ತಿಯಾಗಿ ಸ್ವೀಕರಿಸುತ್ತಾರೆ.

ಇನ್ನು ಕೆಲವರು ನನಗೆ ಅಡುಗೆ ಬರುವುದಿಲ್ಲ ಎಂದು ಹೇಳಿ ಮಾಡಿದ್ದನ್ನು ತಿಂದು ಸುಮ್ಮನಾದರೆ, ಇನ್ನೊಂದಿಷ್ಟು ಜನ ಮಾಡಿದ ಅಡುಗೆಯಲ್ಲಿ ಐಬು ಹುಡುಕುವ ಕೆಲಸವನ್ನು ಖುಷಿಯಿಂದ ರೂಡಿಸಿಕೊಳ್ಳುತ್ತಾರೆ.

ಈ ನಾಲ್ಕು ರೀತಿಯ ಜನರ ಜೊತೆಗೆ ಅಡುಗೆಯೆಂಬುದನ್ನು ಧ್ಯಾನ ಎಂಬಂತೆ ಅಪ್ಪಿಕೊಂಡ ಇನ್ನೊಂದು ಒಂದು ದೊಡ್ಡ ಬಳಗವೇ ಇದೆ. ಈ ಬಳಗದವರಿಗೆ ಅಡುಗೆ ಮಾಡುವುದು ಎಂಬುದು ಅತ್ಯಂತ ಖುಷಿಯ ವಿಷಯ. ಮನಸಿಗೆ ನೋವಾದರೂ,ಖುಷಿಯಾದರೂ ಅಡುಗೆ ಮಾಡಿದರೆ ಅದೇನೋ ಸಮಾಧಾನ ಸಿಗುತ್ತದೆ. ನಾನು ಕೂಡ ಈ ಬಳಗದವಳೇ.

ನನ್ನ ಮತ್ತು ಅಡುಗೆಯ ನಂಟು ಶುರುವಾಗಿದ್ದು ಚಂದ್ರವ್ವನ ಗುಡಿಸಿಲಿನಿಂದ. ಆಕೆ ನಮ್ಮ ಹಳೆಮನೆ ಮನೆಯ ಮುಂದೆ ಒಂದು ಚಿಕ್ಕ ಗುಡಿಸಿಲು ಕಟ್ಟಿಕೊಂಡು ಇರುತ್ತಿದ್ದಳು. ಆಕೆಯ ಗುಡಿಸಿಲಿಗೆ ಹೋಗಿ ಆಕೆ ಅಡುಗೆ ಮಾಡುವುದನ್ನ ನೋಡುವುದೆಂದರೆ ನಂಗೆ ಮಾಜಿಕ್ ಶೋ ನೋಡಿದಷ್ಟೇ ಖುಷಿ. ಕೆಲವೇ ಮಣ್ಣಿನ ಪಾತ್ರೆಗಳು ಕಟ್ಟಿಗೆಯ ಸೌಟು , ಮೂರು ಇಟ್ಟಿಗೆಯನ್ನ ಒಟ್ಟಿ ಮಾಡಿನ ಒಲೆ. ಬಟ್ಟೆಯ ಗಂಟಿನಲ್ಲಿ ಕಟ್ಟಿ ಇಡುತ್ತಿದ್ದ ಕಿರಾಣಿ ಸಾಮಾನುಗಳು.

ಅದೆಲ್ಲಕ್ಕಿಂತ ಆಕೆ ಸಕ್ಕರೆ ಚಾಪುಡಿ ಹಾಕಿಡುತ್ತಿದ್ದ ಆ ಡಬ್ಬಿ ಮತ್ತು ಚಮಚೆಯಂತೆ ಆಕೆ ಬಳಸುತ್ತಿದ್ದ ಕಪ್ಪೆಚಿಪ್ಪು. ಗದ್ದೆಯಲ್ಲಿ ಕೂಲಿ ಮಾಡಿ ಸಂಜೆ ಸುಸ್ತಾಗಿ ಬರುತ್ತಿದ್ದ ಆಕೆ ಗುಡಿಸಿಲಿನ ಬಾಗಿಲು ಸರಿಸಿ ಒಳ ಹೊಕ್ಕಳೆಂದರೆ ಅದೆಂಥದೋ ಆಹ್ಲಾದ ಆಕೆಯನ್ನು ಆವರಿಸುತ್ತಿತ್ತು. ಇಂಥ ಹೊತ್ತಿನಲ್ಲೇ ನಾನೂ ಬೆಕ್ಕಿನ ಮರಿಯಂತೆ ಆ ಒಂದಂಗಳದ ಮನೆಯೊಳಗೆ ಸೇರಿಕೊಂಡು ಚಂದ್ರವ್ವನ ಒಲೆ ಮುಂದೆ ಊದುಗೊಳವೆ ಹಿಡಿದು ಕೂಡುತ್ತಿದ್ದೆ.

ಒಲೆಯ ಮೂಲೆಗೆ ಬರುತ್ತಲೇ ಚೈತನ್ಯಭರಿತಳಾಗುತ್ತಿದ್ದಳು ದಿವಿನಾಗಿ ಹತ್ತಿಕೊಂಡ ಆಯಾ ಒಲೆಯಮುಂದೆ ಮಂಡಿಮಡಚಿ ಕೂತು ರೊಟ್ಟಿ ಬಡಿಯುತ್ತಿದ್ದರೆ ಆ ಬೆಂಕಿಯ ಹಿತವಾದ ಬೆಳಕು ಆಕೆಯ ಮುಖಕ್ಕೆ ಅದೆಂಥದೋ ಒಂದು ತೇಜ ತಂದು ಕೊಡುತ್ತಿತ್ತು.

ದಿನವಿಡೀ ದುಡಿದು ದಣಿದು ಬರುತ್ತಿದ್ದ ಆಕೆ ಅಡುಗೆ ವಿಷಯ ಬಂದಾಗ ಮಾತ್ರ ಶ್ರಾವಣದ ನವಿಲಾಗುತ್ತಿದ್ದಳು ಒಮ್ಮೆಯೂ ಬೇಸರ ಪಟ್ಟಿದ್ದೆ ನಾನು ನೋಡಿರಲಿಲ್ಲ. ಏನೋ ಒಂದು ತರಕಾರಿ ಅಥವಾ ಹೊಲದ ಬದುವಿನಿಂದ ಹೆಕ್ಕಿ ಕಿತ್ತು ಉಡಿತುಂಬ ತುಂಬಿಸಿಕೊಂಡು ಬರುತ್ತಿದ್ದ ಕೀರ್ಕಸಾಲಿ, ಗೋಳಿ, ಹಕ್ಕರಿಕೆ, ಕೊಳವೆ ಸೊಪ್ಪು, ಗದ್ದೆ ಮೆಂತೆ, ಕೆರೆಸೊಪ್ಪು, ಚಳಿಗಾಲದಲ್ಲಿ ಕಡಲೆ ಸೊಪ್ಪಿನ ಕುಡಿ, ಹೀಗೇ ಏನೇನೋ.

ಆ ಜೋಳಿಗೆಯಲ್ಲಿ ಕೈ ಹಾಕಿದರೆ ಆಕೆಗಷ್ಟೇ ದಕ್ಕುತ್ತಿದ್ದ ಮಸಾಲೆ ಪುಡಿ, ಖಾರದ ಪುಡಿಗಳನ್ನ ಬೆಂದ ತರಕಾರಿ, ಸೊಪ್ಪಿಗೆ ಸೇರಿಸಿ ಮೇಲಿಂದ ಒಂದಷ್ಟು ಗುರೆಳ್ಳು ಪುಡಿ ಉದುರಿಸಿದರೆ ಆಕೆಯ ಅಡುಗೆ ಮುಗಿಯುತ್ತಿತ್ತು.

ಆಕೆ ಮಾಡುತ್ತಿದ್ದ ಆ ಮೂರುವರೆ ರೊಟ್ಟಿಯಲ್ಲಿ ನನಗೂ ಪಾಲಿತ್ತು. ಅದರ ರುಚಿಯನ್ನು ವಿವರಿಸಲಾರೆ! ಆಕೆಯ ಅಡುಗೆ ಮನೆಯ ಸನ್ನಿಧಿಯಲ್ಲಿ ಖುಷಿ ತೃಪ್ತಿ ಆನಂದ ಅನ್ನುವ ಪದಗಳ ನಡುವೆ ಓಲಾಡುವ ಅದ್ಯಾವುದೋ ಒಂದು ಅವರ್ಣನೀಯ ಭಾವ ನನ್ನ ಪಾಲಿಗೆ ಒದಗಿ ಬರುತಿತ್ತು.

ಮೂರೇ ಮಡಿಕೆಯ - ಪಾತ್ರೆ ಇರುವ ಚಂದ್ರವ್ವನ ಅಡುಗೆ ಮನೆಗೆ ಸಂತೆಯಿಂದ ಇನ್ನೊಂದೆರಡು ಹೊಸ ಗಡಿಗೆ ತಂದು ಕೊಡಬೇಕು ಮತ್ತು ಅಷ್ಟು ದುಡ್ಡು ಕೂಡಿಸಬೇಕು ಎಂದು ನಾನು ಪ್ರತಿಜ್ಞೆ ಮಾಡಿಕೊಂಡಿದ್ದೆ.

ಅಮ್ಮನೊಂದಿಗೆ ಸಂತೆಗೆ ಹೋದಾಗಲೆಲ್ಲ ‘’ ನನಗೊಂದು ಮಡಕೆ ಕೊಡಿಸು’’ ಎಂದು ಗಂಟುಬಿದ್ದು ಬಯ್ಯಿಸಿಕೊಳ್ಳುತ್ತಿದ್ದೆ.

ನನ್ನ ಅಜ್ಜಿ, ಅಮ್ಮ ಮಾತ್ರ ಆಕೆಯ ಖೋಲಿಗೆ ನಾ ಹೋಗ್ತೀನಿ ಅಂದ್ರೆ ಬಯ್ಯುತ್ತಿದ್ದರು. ‘ಪಾಪ ಆಕೆಗೇ ಆಗುವಷ್ಟು ಇರುತ್ತದೋ ಇಲ್ವೋ, ಅದರ ಮಧ್ಯ ನೀನೂ ಹೋಗಿ ರೊಟ್ಟಿಯಲ್ಲಿ ಪಾಲು ತಗೊಳ್ತಿ’ ಎಂದು ನನ್ನ ತಡೆಯುತ್ತಿದ್ದರು.

‘’ಅಮ್ಮಾರ, ಹುಡುಗಿ ಬರ್ಲಿ ಬಿಡ್ರಿ, ಯಾಕ್ ತಡೀತೀರಿ’’ ಅಂದು ಚಂದ್ರವ್ವ ಅಜ್ಜಿ ಅಮ್ಮನಿಗೆ ಒಪ್ಪಿಸಿ ನಾನು ಮತ್ತೆ ಆಕೆಯ ಮಾಯಾ ಜಗತ್ತಿಗೆ ಮರಳುವಂತೆ ಮಾಡುತ್ತಿದ್ದಳು.

ಎರಡು ವರ್ಷಗಳ ನಂತರ ಚಂದ್ರವ್ವನ ಮಗಳು ಆಕೆಯನ್ನು ತನ್ನೊಂದಿಗೆ ಬಂದು ಇರುವಂತೆ ಒತ್ತಾಯ ಮಾಡಿ ಕರೆದುಕೊಂಡು ಹೋದಳು. ಗೊಬ್ಬರದ ಗಿಡದ ದಂಟು ಬಳಸಿ ಮಾಡಿದ ಆಕೆಯ ಗುಡಿಸಲ ಗೋಡೆಗಳು ಆಗಾಗ ಚಿಗುರೊಡೆಯುತ್ತಿತ್ತು. ನಾನೂ ಚಂದ್ರವ್ವ ಸೇರಿ ಒಳಬದಿಗೆ ಬಂದ ಚಿಗುರು ಮುರಿದು ಆ ಮರದ ಗೋಡೆಯನ್ನು ಮಟ್ಟಸ ಮಾಡುತ್ತಿದ್ದೆವು. ಆಕೆ ಆ ಜಾಗ ಬಿಟ್ಟು ಹೋದ ನಂತರ ಆ ಗೊಬ್ಬರದ ಗಿಡಗಳು ಮತ್ತೆ ಚಿಗುರಿ, ಹೂವು ಕೂಡ ಅರಳಿಸಿಕೊಂಡು ನಿಂತು ನನ್ನ ನೋಡಿ ನಗುತ್ತಿತ್ತು.

ಚಂದ್ರವ್ವ ಅದ್ಯಾವುದೋ ಮಾಯಕದಲ್ಲಿ ನನಗೂ ಅಡುಗೆ ಹುಚ್ಚು ಹತ್ತಿಸಿಬಿಟ್ಟಳು. ಜೊತೆಗೆ ಅಮ್ಮ, ನನ್ನ ಇಬ್ಬರೂ ಅಜ್ಜಿಯರು, ಅತ್ತೆ, ಚಿಕ್ಕಮ್ಮಂದಿರು ಅಡುಗೆಯನ್ನು ಡ್ಯೂಟಿ ಎಂಬಂತೆ ಮಾಡದೆ ಖುಷಿ ಖುಷಿಯಾಗಿ ಮಾಡುತ್ತಾ ಅದರಲ್ಲೇ ಕಳೆದು ಹೋಗುವ ಪರಿ ನನ್ನ ಅದ್ಯಾವ ಪರಿ ಆಕರ್ಷಿಸಿತ್ತು ಎಂದರೆ ಆರನೇ ಕ್ಲಾಸ್ ಇರುವಾಗಲೇ ನಾನು ಅಡುಗೆ ಮಾಡುವುದನ್ನ ಕಲಿತು ಬಿಟ್ಟೆ.

ವಿದೇಶಕ್ಕೆ ಬಂದು ನೆಲೆಸಿದ ಮೇಲೆ ಇಲ್ಲಿ ಸಿಗುವ ತರಕಾರಿಗಳು, ದಿನಸಿಗಳು, ಅಡುಗೆ ಮನೆ ರೂಪರೇಷೆ ಪೂರ್ತಿ ಬೇರೆಯೇ. ಆದರೂ ಚಂದ್ರವ್ವನ ಅಡುಗೆ ಮನೆ ಮತ್ತು ರೊಟ್ಟಿ ಸುಟ್ಟು ಒಳ್ಳೆಣ್ಣೆ ಸವರಿ ಚಿಟಿಕೆ ಖಾರದ ಪುಡಿ ಹಾಕಿ ಕೊಡುತ್ತಿದ್ದ ಆ ರೊಟ್ಟಿಯ ರುಚಿ ಮತ್ತು ಆಕೆಯ ಮೂರಿಟ್ಟಿಗೆಯ ಒಲೆಯ ಶಾಖ ಈಗಲೂ ನನ್ನ ಅಡುಗೆ ಪ್ರೀತಿಯನ್ನು ಬೆಚ್ಚಗೆ ಕಾಪಿಟ್ಟು ಕಾದಿದೆ. ನನ್ನ ಮಟ್ಟಿಗೆ ಅಡುಗೆ ಎಂಬುದು ಜನರ ಮನಸಿಗೆ ತಲುಪುವ ಸೇತುವೆಯಂತೆ ಕೆಲಸ ಮಾಡಿದೆ ಒಂದು ರಾಶಿ ಒಳ್ಳೆ ಸ್ನೇಹಿತರನ್ನ ಗಡಿಯ ಹಂಗಿಲ್ಲದೆ ಒದಗಿಸಿ ಕೊಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.