ನಟಿ ತಾರಾ ಅನುರಾಧಾ, ನಿವೃತ್ತ ನ್ಯಾಯಾಧೀಶ ಮಂಜುಳಾ ಚೆಲ್ಲೂರು, ಕ್ರಿಡಾಪಟು ಅಶ್ವಿನಿ ನಾಚಪ್ಪ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಕೆ ರತ್ನಪ್ರಭ.
ಸಾಧಕಿಯರನ್ನು ಗುರುತಿಸುವ ಪ್ರಕ್ರಿಯೆ ಹೆಚ್ಚು ಖುಷಿ ನೀಡಿತು. ಸಹ ತೀರ್ಪುಗಾರರಿಂದ ಹೆಚ್ಚು ಕಲಿತೆ. ಸಾಧಕಿಯರ ಬದುಕು, ಅವರ ಜೀವನ ಮೌಲ್ಯ ನಮಗೂ ಪ್ರೇರಣೆ ನೀಡುವಂಥವು. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಶ್ರಮಿಸುತ್ತಿರುವ ವಿವಿಧ ಸ್ತರದ ಮಹಿಳೆಯರನ್ನು ನೋಡಿದಾಗ ಸೋಜಿಗವೆನಿಸಿತು. ಅರ್ಹರನ್ನೇ ಅಂತಿಮ ಸುತ್ತಿಗೆ ತಂದ ಹೆಗ್ಗಳಿಕೆ ಪ್ರಜಾವಾಣಿಯದ್ದು. ಈ ಸಾಧಕಿಯರ ಬದುಕು ಉಳಿದವರಿಗೂ ಸ್ಫೂರ್ತಿಯಾಗಿದೆ-ತಾರಾ ಅನೂರಾಧ, ಕನ್ನಡದ ಪ್ರತಿಭಾನ್ವಿತ ನಟಿ
ಪ್ರಜಾವಾಣಿ ಸಾಧಕಿಯರನ್ನು ಆಯ್ಕೆ ಮಾಡಿದ್ದೇ ಅದ್ಭುತವಾದ ಅನುಭವ ನನಗೆ. ಎಲ್ಲ ರೀತಿಯ ಗಮನ ಮತ್ತು ಗೌರವಕ್ಕೆ ಅರ್ಹರಾಗಿರುವ ಈ ಸಾಧಕಿಯರನ್ನು ಸಮಾಜಕ್ಕೆ ಪರಿಚಯಿಸಬೇಕಾದ ಅಗತ್ಯ ಖಂಡಿತವಾಗಿ ಇದೆ. ಸಾಧಕಿಯರ ಆಯ್ಕೆಯಲ್ಲಿ ಸಮಿತಿಯಲ್ಲಿದ್ದ ಎಲ್ಲರದ್ದೂ ಒಕ್ಕೊರಲ ದನಿಯಾಗಿತ್ತು.-ನ್ಯಾ.ಮಂಜುಳಾ ಚೆಲ್ಲೂರ್, ನಿವೃತ್ತ ಮುಖ್ಯ ನ್ಯಾಯಮೂರ್ತಿ, ಬಾಂಬೆ, ಕಲ್ಕತ್ತಾ, ಕೇರಳ ಹೈಕೋರ್ಟ್
ಸಾಧಕಿಯರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಪಾರದರ್ಶಕವಾಗಿತ್ತು. ಆಯ್ಕೆ ಸಮಿತಿಯಲ್ಲಿ ಚರ್ಚಿಸಿ ಮತ್ತು ಅಳೆದೂ ತೂಗಿ ಸಾಧಕಿಯರನ್ನು ಆಯ್ಕೆ ಮಾಡಲಾಗಿದೆ. ಎಲ್ಲ ವಿಭಾಗಗಳಲ್ಲಿಯೂ ಉತ್ತಮ ಆಯ್ಕೆಗಳಿದ್ದವು. ಸಮಾಜಮುಖಿಯಾಗಿ ದುಡಿಯುತ್ತ ಎಲೆಮರೆಯ ಕಾಯಿಗಳಂತೆ ಇರುವ ಸಾಧಕಿಯರನ್ನು ಗುರುತಿಸಿರುವುದು ಶ್ಲಾಘನೀಯ-ಅಶ್ವಿನಿ ನಾಚಪ್ಪ, ಅಂತರರಾಷ್ಟ್ರೀಯ ಅಥ್ಲೀಟ್
ಸಾಧಕಿಯರನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಿಷ್ಪಕ್ಷಪಾತವಾಗಿತ್ತು. ಆಯ್ಕೆ ಮಾಡಿದ ಎಲ್ಲರೂ ಅರ್ಹರೇ ಆಗಿದ್ದರು. ಅವರಲ್ಲಿ ಮತ್ತೆ ಆಯ್ಕೆ ಮಾಡುವುದೇ ಸವಾಲಿನ ಕೆಲಸವಾಗಿತ್ತು. ಸಾಮಾಜಿಕ ಸುಧಾರಣೆ ಮತ್ತು ಬದಲಾವಣೆ ತರುವಲ್ಲಿ ಹೆಚ್ಚು ಪ್ರೇರಣೆ ನೀಡುವಂಥ, ಪ್ರಭಾವ ಬೀರುವಂಥ ಸಾಧಕಿಯರನ್ನು ತೀರ್ಪುಗಾರರ ತಂಡ ಒಮ್ಮತದಿಂದ ಆಯ್ಕೆ ಮಾಡಿತು. ‘ಪ್ರಜಾವಾಣಿ’ಯ ಈ ಸ್ತ್ರೀಪರ ನಿಲುವು ಸಮಾಜಮುಖಿಯಾಗಿದೆ. ಅಂತಿಮ ಸುತ್ತಿಗೆ ಬಂದ ಎಲ್ಲ ಸಾಧಕಿಯರಿಗೂ ಅಭಿನಂದನೆಗಳು-ಕೆ. ರತ್ನಪ್ರಭಾ, ಕರ್ನಾಟಕ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.