ಸಂಕಲ್ಪಗಳು, ದೃಢ ಸಂಕಲ್ಪವಾಗುವುದು ಹೇಗೆ?
ಅತ್ಯುತ್ಸಾಹವೂ ಕೆಲವೊಮ್ಮೆ ನಮ್ಮ ಸಂಕಲ್ಪಗಳು ಈಡೇರದಂತೆ ಮಾಡುತ್ತವೆ.ನಿತ್ಯ ವಾಕ್ ಹೋಗುವ ಸಂಕಲ್ಪ ಮಾಡುವವರು ಅದನ್ನು ಮುಂದುವರಿಸಲು ಆಗುವುದೇ ಇಲ್ಲ. ಮೊದಲ ದಿನವೇ ಕೈಲಾಗದಷ್ಟು ಅಥವಾ ಕಾಲಿಗಾಗದಷ್ಟು ನಡೆದು ದಣಿವು ಮಾಡಿಕೊಳ್ಳುತ್ತಾರೆ. ದೇಹದಂಡನೆಯಂಥ ಸಂಕಲ್ಪಗಳಿದ್ದರೆ ನಿಧಾನವಾಗಿ ತೆಗೆದುಕೊಂಡು ಹೋಗಬೇಕು. ಮೊದಲ ದಿನದಿಂದಲೇ ಸಂಯಮ ರೂಢಿಸಿಕೊಳ್ಳಬೇಕು. ಜಂಕ್ ತಿನ್ನುವುದಿಲ್ಲ ಎಂದು ಕೊಂಡವರು ತಿಂಗಳಿಗೆ ಒಂದು ದಿನವಾದರೂ ಜಂಕ್ ಡೇ ಇಟ್ಕೊಂಡಿರಬೇಕು. ಆಸೆಗಳನ್ನು ಅದುಮಿಟ್ಟಿಕೊಳ್ಳುವುದು, ನಾವೇ ನಮಗೆ ಮೋಸ ಮಾಡಿಕೊಳ್ಳಲು ಸುಲಭವಾಗುತ್ತದೆ. ಚೀಟ್ ಡೇ ಇದ್ದರೆ ಸಂಯಮ ಸಾಧಿಸುವುದು ಸರಳವಾದೀತು.