ಕೇರಳದ ಎರ್ನಾಕುಲದಿಂದ ಭದ್ರಾವತಿಗೆ ಬಂದವರು ಸಿಸ್ಟರ್ ಶೋಭನಾ. ಭದ್ರಾವತಿಯಲ್ಲಿ ಸೇಂಟ್ ಚಾರ್ಲ್ಸ್ ಬರೋಮಿಯಾ ಸಂಸ್ಥೆ 1954ರಿಂದಲೂ ನಡೆಸುತ್ತಿರುವ ನಿರ್ಮಲಾ ಆಸ್ಪತ್ರೆಯಲ್ಲಿ ಕೆಲಸ ಮಾಡಲು ಬಂದ ಶೋಭನಾ, ಬಿಡುವಿನ ವೇಳೆಯಲ್ಲಿ ಗ್ರಾಮೀಣರು ಹಾಗೂ ಬಡವರ ಶುಶ್ರೂಷೆ ಆರಂಭಿಸಿದರು. ಈ ವೇಳೆ ಅಲ್ಲಿನ ಕೂಲಿ ಕಾರ್ಮಿಕರ ಬದುಕನ್ನು ಹತ್ತಿರದಿಂದ ಕಂಡರು. ಅವರ ಮಕ್ಕಳಿಗೆ ಶಿಕ್ಷಣ ಕೊಡಿಸಲು ಟೊಂಕ ಕಟ್ಟಿ ನಿಂತು ಇಂದು ಅನೇಕ ಬಡವರ ಪಾಲಿನ ತೆರೇಸಮ್ಮ ಆಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.