ತಾಯಿ ಮಗುವಿಗೆ ಕನಿಷ್ಠ ಆರು ತಿಂಗಳ ಕಾಲ ಎದೆಹಾಲನ್ನು ಉಣಿಸಬೇಕು. ಆದರೆ, ಹಲವರಿಗೆ ಆರಂಭದಲ್ಲಿಯೇ ಎದೆಹಾಲಿನ ಕೊರತೆ ಉಂಟಾಗುತ್ತದೆ. ಇದರಿಂದ ಮಗುವಿಗೆ ಅಗತ್ಯವಿರುವ ಪೋಷಕಾಂಶ ಸಿಗದೆ ಹೋಗಬಹುದು. ಎದೆಹಾಲು ಉಣಿಸುವಾಗ ಸರಿಯಾದ ಭಂಗಿಯನ್ನು ಅನುಸರಿಸುವುದು, ಮೊಲೆ ತೊಟ್ಟನ್ನು ಮಗು ಬಾಯಿ ತುಂಬಾ ಹಿಡಿದು ಹೀರಿಕೊಳ್ಳುವುದು ಬಹಳ ಮುಖ್ಯ. ಹಾಗೆಯೇ ಆಗಾಗ್ಗೆ ಸ್ತನ್ಯಪಾನ ಮಾಡಿಸುತ್ತಿದ್ದರೆ, ಹಾರ್ಮೋನುಗಳು ಬಿಡುಗಡೆಗೊಂಡು ಎದೆಹಾಲು ಉತ್ಪತ್ತಿಗೆ ಸಹಕಾರಿಯಾಗುತ್ತದೆ. ಕನಿಷ್ಠ ಹತ್ತು ನಿಮಿಷಗಳ ಕಾಲ ಎರಡೂ ಸ್ತನಗಳಲ್ಲಿ ಹಾಲುಣಿಸಿದಾಗ ಎದೆಹಾಲು ಉತ್ಪತ್ತಿಯಾಗುತ್ತದೆ.

ಎದೆಹಾಲನ್ನು ಮಗು ಪಡೆದಷ್ಟೂ ಹಾಲು ಉತ್ಪತ್ತಿಯಾಗುತ್ತದೆ. ಅದರ ಜತೆಗೆ ಬಾಣಂತಿಯರಾದವರು ಸತ್ವಯುತ ಆಹಾರವನ್ನು ಸೇವಿಸುವುದು ಅಷ್ಟೆ ಮುಖ್ಯ.

ಎದೆಹಾಲು ಹೆಚ್ಚಿಸುವ ಆಹಾರ ಪದಾರ್ಥಗಳಿವು.

ಕಾಯಿಸಿ ಆರಿಸಿದ ಹಸುವಿನ ಹಾಲನ್ನು ಕನಿಷ್ಠ ಎರಡು ಲೋಟ ಕುಡಿಯಿರಿ. ಇದರಿಂದ ಕ್ಯಾಲ್ಸಿಯಂ ಹೆಚ್ಚುತ್ತದೆ. ಒಂದು ಲೋಟದ ಹಾಲಿನಲ್ಲಿ 300 ಗ್ರಾಂ ಕ್ಯಾಲ್ಸಿಯಂ ಇರುತ್ತದೆ. ಮೊಸರು, ಬಾರ್ಲಿ ಸೇವಿಸಿ.

ಮೆಂತ್ಯೆಕಾಳುಗಳು ಹಾಲು ಹೆಚ್ಚಳಕ್ಕೆ ಉತ್ತಮ ಆಯ್ಕೆ. ಮೆಂತ್ಯೆ ಗಂಜಿ, ಲಡ್ಡು, ಚೂರ್ಣವನ್ನು ಊಟದ ನಂತರ ಸೇವಿಸಬಹುದು. ಇದರ ಜತೆಗೆ ಧನಿಯಾ ಕಾಳಿನ ಗಂಜಿಯೂ ಹಾಲು ಹೆಚ್ಚಳಕ್ಕೆ ಉತ್ತಮ ಆಯ್ಕೆ.

ಹಸಿರುತರಕಾರಿ, ಬೇಳೆ ಕಾಳುಗಳು, ಕಡಲೆಕಾಳು, ಓಟ್ಸ್, ಬಾರ್ಲಿ, ವಾಲ್‌ನಟ್, ಕುಂಬಳ ಬೀಜ, ಬ್ಲೂಬೆರ್‍ರಿ ಹಣ್ಣುಗಳ ಸೇವನೆ ಕಡ್ಡಾಯವಾಗಿರಲಿ. ಮಾಂಸಾಹಾರಿಗಳು ಮೀನಿನ ಖಾದ್ಯವನ್ನು ಸೇವಿಸಬಹುದು.

ಬಳಲಿಕೆ, ಒತ್ತಡ ಕಡಿಮೆಯಾಗಲು ಸಂಗೀತ ಕೇಳಿ. ಮಗು ಮಲಗಿದಾಗಲೇ ಮಲಗಿ ವಿಶ್ರಾಂತಿ ಪಡೆಯಿರಿ. ಇದೂ ಹಾಲು ಹೆಚ್ಚಳಕ್ಕೆ ಸಹಕಾರಿಯಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.