ದುಬೈ: ಯೆಮೆನ್ನ ಭದ್ರಕೋಟೆ ಮಾರಿಬ್ ನಗರಕ್ಕಾಗಿ ನಡೆದ ಹೋರಾಟದಲ್ಲಿ ಸುಮಾರು 80 ಬಂಡುಕೋರರು ಮತ್ತು ಸರ್ಕಾರದ 18 ಮಂದಿ ಸೈನಿಕರು ಹತರಾಗಿದ್ದಾರೆ ಎಂದು ಸೇನಾ ಮೂಲಗಳು ಬುಧವಾರ ಎಎಫ್ಪಿಗೆ ತಿಳಿಸಿವೆ.

'60 ಮಂದಿ ಹುತಿ ಬಂಡುಕೋರರು ಹತರಾಗಿದ್ದಾರೆ. ಅವರಲ್ಲಿ ಹೆಚ್ಚಿನವರು ಕಳೆದ 24 ಗಂಟೆಗಳಲ್ಲಿ ನಡೆಸಿದ ವಾಯುದಾಳಿಯಲ್ಲಿ ಹತರಾಗಿದ್ದಾರೆ. ಕಳೆದ 48 ಗಂಟೆಗಳಲ್ಲಿ ನಡೆದ ಘರ್ಷಣೆಯಲ್ಲಿ ಸರ್ಕಾರಿ ಪರವಾದ18 ಸೈನಿಕರು ಹತರಾಗಿದ್ದು, ಡಜನ್ಗಟ್ಟಲೆ ಸೈನಿಕರು ಗಾಯಗೊಂಡಿದ್ದಾರೆ’ ಎಂದು ಸರ್ಕಾರಿ ಮಿಲಿಟರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೌದಿ ನೇತೃತ್ವದ ಮಿಲಿಟರಿ ಒಕ್ಕೂಟದ ಬೆಂಬಲವಿರುವ ಯೆಮೆನ್ ಸರ್ಕಾರ ಮತ್ತು ಇರಾನ್ ಮಿತ್ರಪಡೆ ಹುತಿ ಬಂಡುಕೋರರ ನಡುವಿನ ಯುದ್ಧಗಳು ಇತ್ತೀಚಿನ ದಿನಗಳಲ್ಲಿ ಮರೀಬ್ ಪ್ರಾಂತ್ಯದಲ್ಲಿ ತೀವ್ರಗೊಂಡಿವೆ. ವಾಯು ದಾಳಿಗಳೂ ತೀವ್ರಗೊಂಡಿವೆ ಎಂದು ಹೆಸರು ಬಹಿರಂಗಪಡಿಸದ ಸೇನಾಧಿಕಾರಿ ಹೇಳಿದ್ದಾರೆ.

‘ಹುತಿ ಬಂಡುಕೋರರು ಮಂಗಳವಾರ ರಾತ್ರಿ ಸೇನಾ ದಾಳಿಯನ್ನು ಆರಂಭಿಸಿದ್ದು, ಅದು ಬುಧವಾರ ಮುಂಜಾನೆಯವರೆಗೆ ಮುಂದುವರೆಯಿತು. ಆದರೆ, ಸೇನಾಪಡೆಗಳು ದಂಗೆಕೋರರನ್ನು ಹಿಮ್ಮೆಟ್ಟಿಸಿವೆ’ ಎಂದು ಸರ್ಕಾರದ ಪರ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಹುತಿ ಬಂಡುಕೋರರು ಮರಿಬ್ ನಗರವನ್ನು ವಶಪಡಿಸಿಕೊಳ್ಳಲು ಫೆಬ್ರುವರಿಯಿಂದ ಪ್ರಯತ್ನ ತೀವ್ರಗೊಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.