ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋವಿಡ್‌: ಬೀಜಿಂಗ್‌ನ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದೆ ಪರದಾಟ

ಫಾಲೋ ಮಾಡಿ
Comments

ಬೀಜಿಂಗ್‌: ನಗರದಲ್ಲಿ ಕೊರೊನಾ ಸೋಂಕು ತೀವ್ರವಾಗಿ ಉಲ್ಬಣಗೊಂಡಿದ್ದು, ಆಸ್ಪತ್ರೆಗಳಲ್ಲಿ ಹಾಸಿಗೆಗಳು ಭರ್ತಿಯಾಗಿವೆ. ಸೋಂಕಿತರಲ್ಲಿ ವಯಸ್ಸಾದವರೇ ಹೆಚ್ಚಾಗಿದ್ದು, ಗಾಲಿಕುರ್ಚಿಗಳಲ್ಲಿ ಕುಳಿತು ಆಮ್ಲಜನಕವನ್ನು ಪಡೆಯುವ ಸ್ಥಿತಿ ಎದುರಾಗಿದೆ.

ನಗರದ ಪೂರ್ವದಲ್ಲಿರುವ ಚುಯ್ಯಂಗ್ಲಿಯು ಆಸ್ಪತ್ರೆ ಸೋಂಕಿತರಿಂದ ತುಂಬಿ ತುಳುಕುತ್ತಿದ್ದು, ಹೊಸದಾಗಿ ದಾಖಲಾಗಲು ಬಂದವರಿಗೆ ಹಾಸಿಗೆಗಳು ಸಿಗುತ್ತಿಲ್ಲ. ನರ್ಸ್‌ಗಳು, ವೈದ್ಯರು ತೀವ್ರ ಒತ್ತಡಕ್ಕೆ ಒಳಗಾಗಿದ್ದು ತುರ್ತು ಪ್ರಕರಣಗಳಿಗೆ ಮಾತ್ರ ಚಿಕಿತ್ಸೆ ನೀಡುತ್ತಿದ್ದಾರೆ.

ಕಳೆದ ತಿಂಗಳು ದೇಶದಾದ್ಯಂತ ಕಟ್ಟುನಿಟ್ಟಿನ ನಿಯಮಗಳನ್ನು ಸಡಲಿಸಲಾಗಿತ್ತು. ಅದಾದ ಬಳಿಕ ಅನಾರೋಗ್ಯಕ್ಕೆ ತುತ್ತಾಗುವವರು ಮತ್ತು ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಾಗಿದೆ.

ಚೀನಾದಿಂದ ಬರುವ ಪ್ರಯಾಣಿಕರು 48 ಗಂಟೆಗೆ ಮುಂಚೆ ಮಾಡಿಸಿರುವ ಕೋವಿಡ್‌ ಪರೀಕ್ಷೆಯ ನೆಗೆಟಿವ್‌ ವರದಿಯನ್ನು ನೀಡಬೇಕು ಎಂದು ಅಮೆರಿಕ ಹೇಳಿದೆ. ಯುರೋಪಿಯನ್ ಒಕ್ಕೂಟ ಸಹ ಚೀನಾದಿಂದ ಬರುವ ಪ್ರಯಾಣಿಕರಿಗೆ ಕೊರೊನಾ ಸೋಂಕು ಪತ್ತೆ ಪರೀಕ್ಷೆಯ ನೆಗೆಟಿವ್ ವರದಿ ಹೊಂದಿರುವುದನ್ನು ಬೆಂಬಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT