ತೈಪೆ: ಚೀನಾದ ಭಾರೀ ವಿರೋಧದ ನಡುವೆಯೂ ಅಮೆರಿಕದ ಸಂಸತ್ ಸ್ಪೀಕರ್ ನ್ಯಾನ್ಸಿ ಪೆಲೊಸಿ ಅಮೆರಿಕದ ವಿಶೇಷ ವಿಮಾನದಲ್ಲಿ ತೈವಾನ್ ರಾಜಧಾನಿ ತೈಪೆ ತಲುಪಿದ್ದಾರೆ.

ಈ ಮಧ್ಯೆ, ಚೀನಾದ ಫೈಟರ್ ಜೆಟ್ಗಳು ತೈವಾನ್ ಜಲಸಂಧಿಯನ್ನು ದಾಟಿವೆ ಎಂದು ಚೀನಾ ಮಾಧ್ಯಮ ಮಂಗಳವಾರ ರಾತ್ರಿ ವರದಿ ಮಾಡಿದೆ. ಪೆಲೋಸಿ ಅವರು ತೈವಾನ್ಗೆ ಆಗಮಿಸಿದ ಬೆನ್ನಲ್ಲೇ ಚೀನಾ ಜೆಟ್ಗಳು ತೈವಾನ್ ಪ್ರವೇಶಿಸಿರುವುದು ಪ್ರಕ್ಷುಬ್ಧ ವಾತಾವರಣಕ್ಕೆ ಕಾರಣವಾಗಿದೆ.

‘ಚೀನಾದ ಎಸ್ಯು-35 ಫೈಟರ್ ಜೆಟ್ಗಳು ತೈವಾನ್ ಜಲಸಂಧಿಯನ್ನು ದಾಟುತ್ತಿವೆ’ಎಂದು ಸಿಜಿಟಿಎನ್ ಟಿವಿ ವರದಿ ಮಾಡಿದೆ,

ನಮ್ಮ ಭೇಟಿಯು ತೈವಾನ್ಗೆ ಅಮೆರಿಕದ ಕಾಂಗ್ರೆಸ್ ನಿಯೋಗಗಳ ಭೇಟಿಯಲ್ಲಿ ಒಂದಾಗಿದೆ. ಇದು 1979 ರ ತೈವಾನ್ ಸಂಬಂಧಗಳ ಕಾಯಿದೆ ಅನ್ವಯ ರಚಿಸಲ್ಪಟ್ಟಿರುವ ಅಮೆರಿಕ-ಚೀನಾ ಜಂಟಿ ಸಂವಹನಗಳು ಮತ್ತು ಆರು ಭರವಸೆಗಳನ್ನು ಒಳಗೊಂಡ ದೀರ್ಘಕಾಲದ ಅಮೆರಿಕದ ನೀತಿಗೆ ಯಾವುದೇ ರೀತಿಯಿಂದಲೂ ವಿರೋಧಿಯಲ್ಲ ಎಂದು ಸ್ಪೀಕರ್ ನ್ಯಾನ್ಸಿ ಪೆಲೊಸಿ ಹೇಳಿರುವುದಾಗಿ ಎಎನ್ಐ ಟ್ವೀಟ್ ಮಾಡಿದೆ.

ಅಮೆರಿಕದ ನಿಯೋಗದ ಭೇಟಿಯು ತೈವಾನ್ನ ಪ್ರಜಾಪ್ರಭುತ್ವದ ಬದ್ಧತೆಗೆ ಸಲ್ಲಿಸಿದ ಗೌರವವಾಗಿದೆ ಎಂದು ಪೆಲೊಸಿ ಹೇಳಿದ್ದಾರೆ.

ಗಡಿಯ ಯಥಾಸ್ಥಿತಿಯನ್ನು ಬದಲಾಯಿಸುವ ಏಕಪಕ್ಷೀಯ ಪ್ರಯತ್ನಗಳನ್ನು ಅಮೆರಿಕ ವಿರೋಧಿಸುತ್ತಲೇ ಇದೆ ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.