ಕೊಲಂಬೊ: ದೇಶದ ಆರ್ಥಿಕ ಬಿಕ್ಕಟ್ಟು ನಿಭಾಯಿಸಲಾಗದ ರಾಜಪಕ್ಸ ಕುಟುಂಬಸ್ಥರು ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಒತ್ತಾಯಿಸಿ ದೇಶದಾದ್ಯಂತಶ್ರೀಲಂಕಾ ಪ್ರಜೆಗಳ ಪ್ರತಿಭಟನೆ ಆರಂಭವಾದ ಬಳಿಕ, ಪ್ರಧಾನಿ ಮಹಿಂದಾ ರಾಜಪಕ್ಸ ಅವರು ಇದೇ ಮೊದಲ ಬಾರಿಗೆಭಾನುವಾರ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಅವರು ಪ್ರತಿಭಟನನಿರತರಿಂದ ಭಾರಿ ಪ್ರತಿರೋಧ ಎದುರಿಸಿದ್ದಾರೆ.

ಪ್ರಧಾನಿ ರಾಜಪಕ್ಸ ಅವರು ಭಾನುವಾರ ಅನುರಾಧಪುರದಲ್ಲಿರುವ 2300 ವರ್ಷಗಳ ಇತಿಹಾಸವಿರುವ ಬೌದ್ಧ ಮಂದಿರಕ್ಕೆ ಬಂದಿದ್ದರು. ಈ ವೇಳೆ ಹತ್ತಾರು ಜನರು, ಪವಿತ್ರ ನಗರಕ್ಕೆ ಕಳ್ಳರನ್ನು ಬಿಟ್ಟುಕೊಳ್ಳಬಾರದು. ಅವರ ಮೇಲೆ ನಿರ್ಬಂಧ ಹೇರಬೇಕು ಎಂಬಂತಿರುವ ಭಿತ್ತಿಪತ್ರಗಳನ್ನು ಪ್ರದರ್ಶಿಸಿ, ಘೋಷಣೆ ಕೂಗಿದರು. ಪ್ರಧಾನಿ ಭದ್ರತೆಗಾಗಿ ವಿಶೇಷ ಕಾರ್ಯಪಡೆ(ಎಸ್‌ಟಿಎಫ್)ಯ ಭಾರಿ ಪ್ರಮಾಣದ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಅಡುಗೆ ಅನಿಲ, ಪೆಟ್ರೋಲ್, ಮತ್ತು ಡೀಸೆಲ್ ಕೊರತೆ ವಿರೋಧಿಸಿದೇಶದ ಬಹುತೇಕ ಭಾಗಗಳಲ್ಲಿ ನಿರಂತರವಾಗಿ ಪ್ರತಿಭಟನೆಗಳು ನಡೆಯುತ್ತಿರುವ ಕಾರಣ, ಪ್ರಧಾನಿ ಮಹಿಂದಾ ರಾಜಪಕ್ಸ ಅವರು ಹೆಲಿಕಾಪ್ಟರ್ ಮೂಲಕ ರಾಜಧಾನಿ ಕೊಲಂಬೊಕ್ಕೆ ಹಿಂದಿರುಗಿದರು.

ಅನಿಲ ಪೂರೈಕೆಗಾಗಿ ರಾತ್ರಿಯಿಡೀ ಕಾಯ್ದು ಕುಳಿತಿದ್ದ ಗುಂಪೊಂದು ಭಾನುವಾರ ಟ್ರಕ್‌ನಲ್ಲಿ ಸಾಗಿಸಲಾಗುತ್ತಿದ್ದ ಅಡುಗೆ ಅನಿಲದ 84 ಸಿಲಿಂಡರ್‌ಗಳನ್ನು ಕಳವು ಮಾಡಿದ್ದಾರೆ. ಈ ವೇಳೆ ಪೊಲೀಸರು ಅಸಹಾಯಕರಾಗಿ ವೀಕ್ಷಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.