ಇಸ್ಲಾಮಾಬಾದ್: ಮೂರು ತಿಂಗಳಿನಲ್ಲಿ ಪಾಕಿಸ್ತಾನದ ಸಂಸತ್ತಿಗೆ ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂದು ಅಲ್ಲಿನ ಚುನಾವಣಾ ಆಯೋಗವು ಅಸಮರ್ಥತೆ ವ್ಯಕ್ತಪಡಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ರಾಷ್ಟ್ರೀಯ ಸಂಸತ್ತಿನಲ್ಲಿ ತಮ್ಮ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ಡೆಪ್ಯೂಟಿ ಸ್ಪೀಕರ್ ತಿರಸ್ಕರಿಸಿದ ಬಳಿಕ ಅಧ್ಯಕ್ಷರ ಮೂಲಕ ಸಂಸತ್ತನ್ನು ವಿಸರ್ಜಿಸಿ, ಮೂರು ತಿಂಗಳಲ್ಲಿ ಚುನಾವಣೆ ನಡೆಸುವಂತೆ ಪ್ರಧಾನಿ ಇಮ್ರಾನ್ ಖಾನ್ ಆದೇಶ ಮಾಡಿಸಿದ್ದರು.

ಈ ಮಧ್ಯೆ, ಅವಿಶ್ವಾಸ ನಿರ್ಣಯವನ್ನು ತಳ್ಳಿಹಾಕಿದ ಡೆಪ್ಯುಟಿ ಸ್ಪೀಕರ್ ನಿರ್ಣಯವನ್ನು ಪ್ರಶ್ನಿಸಿ ವಿಪಕ್ಷಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮುಂದೂಡಿದೆ.

‘ಇತ್ತೀಚಿನ ಕ್ಷೇತ್ರಗಳ ಪುನರ್ ವಿಂಗಡಣೆ ಹಿನ್ನೆಲೆಯಲ್ಲಿ, ಅದರಲ್ಲೂ ಖೈಬರ್ ಪಖ್ತುಂಖ್ವಾದಲ್ಲಿ 26ನೇ ತಿದ್ದುಪಡಿ ಬಳಿಕ ಸ್ಥಾನಗಳು ಹೆಚ್ಚಾಗಿದ್ದು, ಜಿಲ್ಲಾ ಮತ್ತು ಕ್ಷೇತ್ರವಾರು ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು ಪ್ರಮುಖ ಸವಾಲಾಗಿದೆ. ಸಾರ್ವತ್ರಿಕ ಚುನಾವಣೆಯ ತಯಾರಿಗೆ ಕನಿಷ್ಠ ಆರು ತಿಂಗಳು ಬೇಕಾಗುತ್ತವೆ’ ಎಂದು ಚುನಾವಣಾ ಆಯೋಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಡಾನ್ ಸುದ್ದಿ ಪತ್ರಿಕೆ ವರದಿ ಮಾಡಿದೆ.

ಚುನಾವಣಾ ಸಾಮಗ್ರಿ ಹೊಂದಿಸುವಿಕೆ, ಮತಪತ್ರ ತಯಾರಿ, ಚುನಾವಣಾ ಸಿಬ್ಬಂದಿ ತರಬೇತಿ ಮುಂತಾದವುಗಳು ಸವಾಲಿನ ಕೆಲಸಗಳಾಗಿವೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.