ಕಠ್ಮಂಡು: ರಸ್ತೆ ಮಧ್ಯದಲ್ಲಿ ಕೆಟ್ಟು ನಿಂತ ಕಾರನ್ನೋ ಟೆಂಪೊವನ್ನೋ ಪ್ರಯಾಣಿಕರು ತಳ್ಳಿ ಬದಿಗೆ ಸರಿಸುವುದನ್ನು ನೋಡಿರುತ್ತೇವೆ. ಆದರೆ, ರನ್ವೇಯಿಂದ ವಿಮಾನವನ್ನೇ ತಳ್ಳಿ ಬದಿಗೆ ಸರಿಸಿದ್ದನ್ನು ಎಲ್ಲಾದರೂ ನೋಡಿದ್ದೀರಾ?

ನೇಪಾಳದ ಬಾಜುರಾ ವಿಮಾನ ನಿಲ್ದಾಣದಲ್ಲಿ ಇಂಥದ್ದೊಂದು ವಿದ್ಯಮಾನ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊಗಳು ಶೇರ್ ಆಗಿವೆ.

ಆಗಿದ್ದೇನು?: ತಾರಾ ಏರ್ ಸಂಸ್ಥೆಗೆ ಸೇರಿದ ವಿಮಾನವೊಂದು ಟೈರ್ ಸ್ಫೋಟಗೊಂಡ ಪರಿಣಾಮ ನೇಪಾಳದ ಬಾಜುರಾ ವಿಮಾನ ನಿಲ್ದಾಣದ ರನ್ವೇಯಲ್ಲಿ ಬಾಕಿಯಾಗಿದೆ. ಲಘು ವಿಮಾನವನ್ನು ಪ್ರಯಾಣಿಕರು ತಳ್ಳಿ ಮುಂದಕ್ಕೆ ಸಾಗಿಸುತ್ತಿರುವ ದೃಶ್ಯವನ್ನು ಪ್ರತ್ಯಕ್ಷದರ್ಶಿಗಳು ವಿಡಿಯೊ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.

ಮೊದಲು ‘ಟಿಕ್ಟಾಕ್’ನಲ್ಲಿ ಪ್ರಕಟಗೊಂಡಿದ್ದ ವಿಡಿಯೊವನ್ನು ಟ್ವಿಟರ್ ಬಳಕೆದಾರರೊಬ್ಬರು ಶೇರ್ ಮಾಡಿಕೊಂಡಿದ್ದು, ‘ಇದು ನೇಪಾಳದಲ್ಲಿ ಮಾತ್ರ ಸಾಧ್ಯವೇನೋ’ ಎಂದು ಹಾಸ್ಯಮಿಶ್ರಿತ ಸಂದೇಶವನ್ನೂ ಪ್ರಕಟಿಸಿದ್ದಾರೆ.

ಓದಿ:ತಾಯಿ ಪ್ರೀತಿ: ಸ್ವಾಗತಿಸಲು ಹೂಗುಚ್ಛ ತಂದಿದ್ದ ಮಗನಿಗೆ ಚಪ್ಪಲಿ ಏಟು, ವಿಡಿಯೊ ನೋಡಿ

ಹಮ್ಲಾದ ಸಿಮ್ಕೋಟ್ನಿಂದ ತೆರಳಿದ್ದ ವಿಮಾನವು ಬಾಜುರಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದಾಗ ಅದರ ಒಂದು ಚಕ್ರ ಸ್ಫೋಟಗೊಂಡಿತ್ತು. ಹೀಗಾಗಿ ವಿಮಾನವು ರನ್ವೇ ಮಧ್ಯದಲ್ಲೇ ಸಿಲುಕಿತ್ತು. ವಿಮಾನವನ್ನು ರನ್ವೇಯಿಂದ ಟ್ಯಾಕ್ಸಿವೇಗೆ ಎಳೆದುತರಲು ಯಾವುದೇ ತಾಂತ್ರಿಕ ವ್ಯವಸ್ಥೆ ಇಲ್ಲದ ಕಾರಣ ವಿಮಾನ ನಿಲ್ದಾಣ ಅಧಿಕಾರಿಗಳ ಜತೆ ಪ್ರಯಾಣಿಕರು ಕೈಜೋಡಿಸಿದರು ಎಂದು ತಾರಾ ಏರ್ ವಕ್ತಾರರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.