ಕಠ್ಮಂಡು: ನೇಪಾಳದ ಪೊಖರಾದಲ್ಲಿ ಭಾನುವಾರ ಪತನವಾದ ಯೇತಿ ಏರ್‌ಲೈನ್ಸ್ ವಿಮಾನದಲ್ಲಿ ಒಟ್ಟು 68 ಪ್ರಯಾಣಿಕರು ಮೃತರಾಗಿದ್ದು, ಇವರಲ್ಲಿ ನೇಪಾಳದ ಖ್ಯಾತ ಪತ್ರಕರ್ತ ತ್ರಿಭುವನ್ ಪೌಡ್ಯಾಲ್ ಕೂಡ ಒಬ್ಬರು ಎನ್ನಲಾಗಿದೆ.

ನೇಪಾಳದ ಪತ್ರಕರ್ತರ ಒಕ್ಕೂಟದ (ಎಫ್‌ಎನ್‌ಜೆ) ಕೇಂದ್ರ ಕಾರ್ಯಕಾರಿ ಸದಸ್ಯರಾಗಿದ್ದ 37 ವರ್ಷದ ಪೌಡ್ಯಾಲ್ ಅವರ ಮೃತದೇಹವನ್ನು ಗುರುತಿಸಲಾಗಿದೆ. ಪೌಡ್ಯಾಲ್ ಅವರು ತಾಯಿ, ಪತ್ನಿ ಮತ್ತು ಪುತ್ರನನ್ನು ಅಗಲಿದ್ದಾರೆ. ಪೌಡ್ಯಾಲ್ ಅವರ ಅಕಾಲಿಕ ಮರಣಕ್ಕೆ ಎಫ್‌ಎನ್‌ಜೆ ಸಂತಾಪ ಸೂಚಿಸಿದೆ.

ಪೊಖರ ನಿವಾಸಿಯಾಗಿದ್ದ ಪೌಡ್ಯಾಲ್ ಅವರು ಸ್ಥಳೀಯ ದಿನಪತ್ರಿಕೆ, ಎಫ್‌ಎಂ ರೇಡಿಯೋ ಹಾಗೂ ದೂರದರ್ಶನ ಚಾನಲ್ ಸೇರಿದಂತೆ ಹಲವು ಮಾಧ್ಯಮದೊಂದಿಗೆ ಸಂಪರ್ಕ ಹೊಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.