ಪ್ಯಾರಿಸ್: ನ್ಯಾಟೊ ಸದಸ್ಯ ರಾಷ್ಟ್ರಗಳು ಉಕ್ರೇನ್‌ಗೆ ಮಿಲಿಟರಿ ನೆರವನ್ನು ಹೆಚ್ಚಿಸುತ್ತಿವೆ ಎಂದು ನ್ಯಾಟೊ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೋಲ್ಟೆನ್‌ಬರ್ಗ್ ಸೋಮವಾರ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ‘ನಾನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಜೊತೆ ಮಾತನಾಡಿದ್ದೇನೆ. ಉಕ್ರೇನ್ ನಾಗರಿಕರು ಮತ್ತು ಸಶಸ್ತ್ರ ಪಡೆಗಳ ಶೌರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದೇನೆ’ ಎಂದು ತಿಳಿಸಿದ್ದಾರೆ.

‘ನ್ಯಾಟೊ ಸದಸ್ಯ ರಾಷ್ಟ್ರಗಳು ಕ್ಷಿಪಣಿ, ಶಸ್ತ್ರಾಸ್ತ್ರ ಸೇರಿದಂತೆ ಉಕ್ರೇನ್‌ಗೆ ಮಾನವೀಯ ಹಾಗೂ ಆರ್ಥಿಕ ನೆರವನ್ನು ಹೆಚ್ಚುಸುತ್ತಿವೆ’ ಎಂದು ಸ್ಟೋಲ್ಟೆನ್‌ಬರ್ಗ್ ಹೇಳಿದ್ದಾರೆ.

ನ್ಯಾಟೊದ 30 ಸದಸ್ಯ ರಾಷ್ಟ್ರಗಳ ಪೈಕಿ ಹಲವು ದೇಶಗಳು ಉಕ್ರೇನ್‌ಗೆ ಶಸ್ತ್ರಾಸ್ತ್ರ ಮತ್ತು ಇತರ ಸೇನಾ ಸಲಕರಣೆಗಳ ಪೂರೈಕೆ ಮಾಡುತ್ತಿವೆ. ಆದರೆ, ನ್ಯಾಟೊ ಮೂಲಕ ಯಾವುದೇ ಪೂರೈಕೆ ಇಲ್ಲ. ಉಕ್ರೇನ್‌ಗೆ ಬೆಂಬಲವಾಗಿ ಸೇನಾ ಕಾರ್ಯಾಚರಣೆ ನಡೆಸುವ ಉದ್ದೇಶವೂ ಇಲ್ಲ ಎಂದು ನ್ಯಾಟೊ ಮೂರು ದಿನಗಳ ಹಿಂದೆ ಹೇಳಿದೆ.

ಈಸ್ಟೋನಿಯಾ, ಲಾತ್ವಿಯಾ, ಲಿಥುವೇನಿಯಾ ಮತ್ತು ಪೋಲೆಂಡ್ ದೇಶಗಳು ಉಕ್ರೇನ್ ಮತ್ತು ರಷ್ಯಾ ಸಮೀಪದಲ್ಲಿರುವ ನ್ಯಾಟೊ ಸದಸ್ಯ ರಾಷ್ಟ್ರಗಳಾಗಿವೆ.

ಇವನ್ನೂ ಓದಿ...

ಉಕ್ರೇನ್‌ಗೆ ಶಸ್ತ್ರಾಸ್ತ್ರ ಪೂರೈಕೆ: ಐರೋಪ್ಯ ಒಕ್ಕೂಟ ದೇಶಗಳ ರಕ್ಷಣಾ ಸಚಿವರ ಸಭೆ

ಪೋಲೆಂಡ್ ಗಡಿಯಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಥಳಿಸಿದ ಉಕ್ರೇನ್ ಯೋಧರು

ಕಣ್ಣೆದುರೇ ಸಾವಿನ ಭೀಕರತೆ ಕಂಡೆ: ಉಕ್ರೇನ್ನಿಂದ ರಾಜ್ಯದ ವಿದ್ಯಾರ್ಥಿನಿ ಭಯದ ಮಾತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.