ಕಾಬೂಲ್: ಅಫ್ಗಾನಿಸ್ತಾನದ ಎರಡನೇ ಅತಿದೊಡ್ಡ ನಗರ ಕಂದಹಾರ್ ವಶಪಡಿಸಿಕೊಂಡಿರುವುದಾಗಿ ತಾಲಿಬಾನ್ ಉಗ್ರರು ಹೇಳಿಕೊಂಡಿದ್ದಾರೆ.

ಸದ್ಯ ರಾಜಧಾನಿ ಮತ್ತು ಇತರ ಕೆಲವೇ ಭೂಭಾಗಗಳು ಸರ್ಕಾರದ ನಿಯಂತ್ರಣದಲ್ಲಿವೆ. ಉಳಿದಂತೆ ಹೆಚ್ಚಿನ ಭೂಭಾಗ ತಾಲಿಬಾನ್ ಉಗ್ರರ ವಶವಾಗಿವೆ.

ಓದಿ:ಮತ್ತೆ ಮೂರು ಪ್ರಾಂತ್ಯಗಳ ರಾಜಧಾನಿಗಳು ತಾಲಿಬಾನ್ ವಶಕ್ಕೆ

‘ಕಂದಹಾರ್ ಅನ್ನು ಸಂಪೂರ್ಣವಾಗಿ ವಶಕ್ಕೆ ತೆಗೆದುಕೊಂಡಿದ್ದೇವೆ. ಮುಜಾಹಿದೀನ್, ನಗರದ ಹುತಾತ್ಮರ ಚೌಕ ತಲುಪಿದೆ’ ಎಂದು ತಾಲಿಬಾನ್ ವಕ್ತಾರರು ಘೋಷಿಸಿದ್ದಾರೆ.

ಸರ್ಕಾರದ ಸೇನಾ ಪಡೆಗಳು ನಗರದ ಹೊರವಲದ ನೆಲೆಗಳಿಗೆ ಸಂಪೂರ್ಣವಾಗಿ ಹಿಂದೆ ಸರಿದಿವೆ ಎಂದು ಮೂಲಗಳು ಹೇಳಿವೆ.

ಇತ್ತೀಚೆಗಷ್ಟೇ ಈಶಾನ್ಯ ಭಾಗದ ಬದಖ್‌ಷಾನ್ ಮತ್ತು ಪಶ್ಚಿಮ ಭಾಗದ ಬಘ್ಲಾನ್ ಹಾಗೂ ಫರಾಹ್ ಪ್ರಾಂತ್ಯಗಳ ರಾಜಧಾನಿಗಳನ್ನು ತಾಲಿಬಾನ್ ವಶಪಡಿಸಿಕೊಂಡಿತ್ತು. ಸದ್ಯ , ದೇಶದ ಮೂರನೇ ಎರಡರಷ್ಟು ಭಾಗ ತಾಲಿಬಾನ್ ನಿಯಂತ್ರಣದಲ್ಲಿದೆ ಎನ್ನಲಾಗಿದೆ.

ಓದಿ:ತಾಲಿಬಾನ್ ಕೈ ಸೇರಿದ ಭಾರತದ ಹೆಲಿಕಾಪ್ಟರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.