ಸಾಂಪ್ರದಾಯಿಕ ತರಕಾರಿ ವೈವಿಧ್ಯದ ಕುರಿತು ಸಮಗ್ರ ಮಾಹಿತಿ ನೀಡುವುದರ ಜತೆಗೆ ಅವುಗಳನ್ನು ಸಂರಕ್ಷಿಸುವ ಹಾಗೂ ಮತ್ತೆ ಬೆಳೆಯುವ ಕುರಿತ ವಿವರಣೆ ನೀಡುವ ಪುಸ್ತಕ ‘ಬೀಜದ ನಂಟು–ತರಕಾರಿ ಬೀಜೋತ್ಪಾದಕರ ಕೈಪಿಡಿ’.

ಇಪ್ಪತ್ತೈದು ವರ್ಷಗಳಿಂದ ದೇಸಿ ತರಕಾರಿಗಳ ಬೀಜ ಸಂರಕ್ಷಣೆಯಲ್ಲಿ ತೊಡಗಿರುವ ಪುದುಚೇರಿಯ ದೀಪಿಕಾ ಕುಂದಾಜಿ ಈ ಕೃತಿಯ ಮೂಲ ಲೇಖಕಿ. ಮೊದಲು ಅವರು ಇಂಗ್ಲಿಷ್ನಲ್ಲಿ ಈ ಕೃತಿ ಬರೆದಿದ್ದರು. ಆ ಪುಸ್ತಕವನ್ನು ಸಹಜ ಸಮೃದ್ಧ ಪ್ರಕಾಶನ ಪ್ರಕಟಿಸಿತ್ತು. ನಂತರ ಅದು ಬೇರೆ ಭಾಷೆಗಳಿಗೆ ಅನುವಾದವಾಗಿತ್ತು. ಲೇಖಕ ಆನಂದತೀರ್ಥ ಪ್ಯಾಟಿಯವರು ಇದೇ ಪುಸ್ತಕವನ್ನು ಈಗ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯನ್ನೂ ಸಹಜ ಸಮೃದ್ಧ ಪ್ರಕಾಶನ ಪ್ರಕಟಿಸಿದೆ.

ತರಕಾರಿ ಬೆಳೆಯಲು ಆಸಕ್ತರಿರುವವರಿಗೆ, ಇರುವಷ್ಟೇ ಜಾಗದಲ್ಲಿ ಹೇಗೆಲ್ಲ ನಾಟಿ ತರಕಾರಿ ಗಳನ್ನು ಬೆಳೆಸಬಹುದು ಎಂಬುದನ್ನು ಇದರಲ್ಲಿ ಸರಳವಾಗಿ ವಿವರಿಸಲಾಗಿದೆ.

ಒಂದೊಂದು ತರಕಾರಿಯಲ್ಲೂ ಇರುವ ತಳಿಗಳ ಅಚ್ಚರಿಯ ವೈವಿಧ್ಯವನ್ನು ಈ ಪುಸ್ತಕದಲ್ಲಿ ಅನಾವರಣ ಮಾಡಲಾಗಿದೆ. ಬೀಜೋತ್ಪಾದನೆಯ ಮೂಲ ಮಾಹಿತಿ, ಉತ್ತಮ ಗುಣಮಟ್ಟದ ಬೀಜ, ಶುದ್ಧತೆ ಕಾಪಾಡಿಕೊಳ್ಳುವ ಬಗೆ ಹೇಗೆ ಎಂಬ ಮಾಹಿತಿಯೂ ಇದೆ. ಪುಸ್ತಕದಲ್ಲಿರುವ ವರ್ಣ ರಂಚಿತ ಚಿತ್ರಗಳು ಸರಳವಾಗಿ ಬೀಜ ಸಂರಕ್ಷಣೆಯನ್ನು ಅರ್ಥಮಾಡಿಸುತ್ತವೆ.

ಜತೆಗೆ ಬೆಂಡೆ, ಬದನೆ, ಟೊಮೆಟೊ, ಮೆಣಸಿನಕಾಯಿ ಹಾಗೂ ಇತರ ತರಕಾರಿಗಳ ಬೀಜವನ್ನು ಸಂರಕ್ಷಿಸುವ ಸುಲಭವಾದ ಪದ್ಧತಿಗಳನ್ನು ಇದರಲ್ಲಿ ವಿವರಿಸಲಾಗಿದೆ.

ದೀಪಿಕಾ ಅವರು ತಮ್ಮ ಅನುಭವಗಳ ಜತೆಗೆ, ತಾವು ಕಂಡುಕೊಂಡ ಬೀಜೋತ್ಪಾದನೆಯ ತಂತ್ರಗಳನ್ನೂ ಇದರಲ್ಲಿ ಹಂಚಿಕೊಂಡಿದ್ದಾರೆ. ರೈತರು, ಕೃಷಿ ಆಸಕ್ತರಿಗೆ ಹೆಚ್ಚು ಸುಲಭವಾಗಲಿ ಎಂಬ ಉದ್ದೇಶದಿಂದ ವೈಜ್ಞಾನಿಕ ಪದಗಳನ್ನು ಬಳಸದೇ, ಸರಳ ಭಾಷೆಯಲ್ಲಿ ವಿವರಣೆ ನೀಡಿದ್ದಾರೆ.

ಪುಸ್ತಕದ ಬೆಲೆ: ರೂ 100(ಅಂಚೆವೆಚ್ಚ ಸೇರಿ). ಪುಸ್ತಕಕ್ಕಾಗಿ ಸಂಪರ್ಕಿಸುವ ದೂರವಾಣಿ ಸಂಖ್ಯೆ: 080-23655302.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.