ದೇಶದಲ್ಲಿ ರಾಜಪ್ರಭುತ್ವಗಳ ಆಡಳಿತ ಕೊನೆಗೊಂಡು ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬಂದಿದೆ. ಆದರೆ ಅರಸೊತ್ತಿಗೆ ಕಾಲದ ಪಳಿಯುಳಿಕೆಗಳಂತಿರುವ ಕೆಲವು ಸಂಸ್ಥಾನಗಳು ಇಂದಿಗೂ ಇವೆ.

ಅವುಗಳಿಗೆ ಈಗ ರಾಜಕೀಯ ಮಹತ್ವವೇನೂ ಇಲ್ಲ, ಆದರೆ ಅವು ತಮ್ಮ ವೈಭವದ ದಿನಗಳನ್ನು ನೆನಪಿಸುವಂತಹ ಸಂಪ್ರದಾಯಗಳನ್ನು ಆಚರಿಸಿಕೊಂಡು ಬರುತ್ತ ಜನರ ಗಮನ ಸೆಳೆಯುತ್ತಿವೆ.

ಅಂತಹ ದೇಸಗತಿಗಳ ಪೈಕಿ ಹಾವೇರಿ ಜಿಲ್ಲೆಯ ಹಂದಿಗನೂರಿನ ಮಾಮಲೇದೇಸಾಯಿ ದೇಸಗತಿಯೂ ಒಂದು. ಅದು ಇಂದಿಗೂ ತನ್ನ ದೇಸಗತಿ ಸಂಪ್ರದಾಯವನ್ನು ತಪ್ಪದೆ ಪಾಲಿಸಿಕೊಂಡು ಬರುತ್ತಿದೆ.

ದೇಸಗತಿಗಳ ಉತ್ತರಾಧಿಕಾರ ಆ ಮನೆತನದ ಜೇಷ್ಠ ಪುತ್ರನಿಗೆ ಸಲ್ಲುತ್ತದೆ. ಆ ದೇಸಗತಿಯ ಆಸ್ತಿಯ ಅವಿಭಾಜ್ಯತೆಯಿಂದಾಗಿ ಹಂದಿಗನೂರು ದೇಸಗತಿ ಅವಿಭಕ್ತ ಕುಟುಂಬದ ಪರಿಕಲ್ಪನೆಯನ್ನು ನಾಲ್ಕು ಶತಮಾನಗಳಿಂದ ಉಳಿಸಿಕೊಂಡು ಬಂದಿದೆ.

ನೂರಾರು ಎಕರೆ ಜಮೀನು ಹೊಂದಿರುವ ಹಂದಿಗನೂರು ದೇಸಗತಿ ಮನೆತನದ ಮೂಲ ಉದ್ಯೋಗ ಬೇಸಾಯ. ಈ ಮನೆತನದವರು ವಾಸಿಸುತ್ತಿದ್ದ `ವಾಡೆ~ ಮೂರು ಎಕರೆ ಪ್ರದೇಶದಲ್ಲಿದೆ. ವಾಡೆ ಸುತ್ತ ಆರು ಬೃಹದಾಕಾರದ ಹುಡೆಗಳಿಂದ ಕೂಡಿದ ಭದ್ರ ಕೋಟೆಯನ್ನು ಹೊಂದಿದೆ.

ಕೋಟೆಯ ಮನೆ, ಸದರು, ಸಭಾಂಗಣ ಹಾಗೂ ದೇಸಗತಿಗೆ ಪ್ರತ್ಯೇಕ ಕಚೇರಿ ಎಲ್ಲವೂ ಇಂದಿಗೂ ಅಚ್ಚುಕಟ್ಟಾಗಿವೆ. ಈ ದೇಸಗತಿಯ ಗಾದಿಯ ಹನ್ನೆರಡನೇ ಮಾಲೀಕ ಬುಳ್ಳಪ್ಪ ಮಾಮಲೇದೇಸಾಯಿ ಅವರ ಕಾಲದಲ್ಲಿ ನಿರ್ಮಾಣವಾದ ಈ ವಾಡೆಯ `ಸದರು~ ಅತ್ಯಂತ ಆಕರ್ಷಕವಾಗಿದೆ.

40 ಕೊಠಡಿಗಳಿರುವ ಈ ಬೃಹತ್ ವಾಡೆಯಲ್ಲಿ ಮೂರು ಬಾವಿಗಳಿವೆ. ವಾಡೆಯ ಆವರಣದಲ್ಲಿರುವ ಶಿಥಿಲಾವಸ್ಥೆಯಲ್ಲಿದ್ದ ಸರ್ವೇಶ್ವರ ದೇವಸ್ಥಾನವನ್ನು ಕೆಲ ವರ್ಷಗಳ ಹಿಂದೆ ಜೀರ್ಣೋದ್ಧಾರ ಮಾಡಲಾಗಿದೆ.

ಈ ಟೀವಿ ವಾಹಿನಿಯಲ್ಲಿ ನೂರಾರು ಕಂತುಗಳಲ್ಲಿ ಪ್ರಸಾರವಾದ ದಿ. ವೈಶಾಲಿ ಕಾಸರವಳ್ಳಿ ನಿರ್ದೇಶನದ `ಮೂಡಲಮನೆ~ ಧಾರವಾಹಿಯನ್ನು ನೋಡಿದವರಿಗೆಲ್ಲ ಈ ವಾಡೆಯ ಪರಿಚಯವಿದೆ. ಧಾರಾವಾಹಿಯ ಶೇಕಡಾ ಎಂಬತ್ತರಷ್ಟು ಚಿತ್ರೀಕರಣ ಇದೇ ವಾಡೆಯಲ್ಲಿ ನಡೆದಿತ್ತು.

ಹಂದಿಗನೂರು ದೇಸಗತಿ ವಾರಸುದಾರರು ಸಂಸ್ಥಾನದ ವೈಭವದ ದಿನಗಳಲ್ಲಿ ಆಚರಿಸುತ್ತಿದ್ದ ಹಬ್ಬಗಳನ್ನು ಅದೇ ಮಾದರಿಯಲ್ಲಿ ಇಂದಿಗೂ ಆಚರಿಸಿಕೊಂಡು ಬರುತ್ತಿದ್ದಾರೆ. ದಸರಾ ಸಂದರ್ಭದಲ್ಲಿ ಗ್ರಾಮದಲ್ಲಿ ದೇಸಗತಿ ಮನೆತನದ `ದರ್ಬಾರ್~ ಮೈಸೂರು ಅರಮನೆ ದಸರಾ ಆಚರಣೆಯನ್ನು ನೆನಪಿಸುತ್ತದೆ.

ಅಂದು ಗಾದಿ ಮಾಲೀಕರು ಸಂಸ್ಥಾನದ ಸಂಪ್ರದಾಯದಂತೆ ಪಲ್ಲಕ್ಕಿಯಲ್ಲಿ ಕುಳಿತು ಗ್ರಾಮದ `ಬನ್ನಿ~ ಮರಕ್ಕೆ ಬಂದು ಅಲ್ಲಿ ಬನ್ನಿ ಮುಡಿಯುತ್ತಿದ್ದರು. ಆನಂತರ ಮೆರವಣಿಗೆಯ ಮೂಲಕ ವಾಡೆಯ ಸದರನ್ನು ತಲುಪಿ ಅಲ್ಲಿ ಗ್ರಾಮಸ್ಥರಿಂದ ಬನ್ನಿ ಸ್ವೀಕರಿಸುವ ಪದ್ಧತಿ ಇತ್ತು. ಈ ಆಚರಣೆಯನ್ನು ದೇಸಗತಿಯ ಇಂದಿನ ವಾರಸುದಾರರು ಈಗಲೂ ಮುಂದುವರೆಸಿಕೊಂಡು ಬಂದಿದ್ದಾರೆ.

ಹಂದಿಗನೂರು ಮನೆತನದ ಮೂಲ ಪುರುಷ ವಿಠಲನಾಥ ಬುಳ್ಳಸರಶೆಟ್ಟಿ ಅವರು. ಕ್ರಿ.ಶ. 1575ರಲ್ಲಿ ಅವರು ದೇಸಗತಿ ಸ್ಥಾಪಿಸಿದರು. ಅವರು ವಿಜಾಪುರ ಜಿಲ್ಲೆಯ ಗಣಕಿಬೇವಿನಹಳ್ಳಿಯವರು. ವಿಜಾಪುರದ ಆದಿಲ್ಶಾಹಿ ಹಜರತ್ ಮಹಮ್ಮದ್ ಬಾದಶಹ ಆನೆಗುಂದಿ ರಾಜರ ಮೇಲೆ ಯುದ್ದ ಸಾರಿದರು. ಯುದ್ದದಲ್ಲಿ ಪಾಲ್ಗೊಳ್ಳುವ ಸೈನ್ಯಕ್ಕೆ ಆಹಾರ ಪೂರೈಸುವಂತೆ ಆದಿಲ್ಶಾಹಿ ಶ್ರೀಮಂತ ವ್ಯಾಪಾರಿ ವಿಠಲನಾಥರನ್ನು ಕೇಳಿಕೊಳ್ಳುತ್ತಾನೆ.

ಆಗ ವಿಠಲನಾಥರು ಸೈನ್ಯಕ್ಕೆ ಆಹಾರ ಪೂರೈಸುತ್ತಾರೆ. ಯುದ್ದದಲ್ಲಿ ವಿಜಾಪುರದ ಸೇನೆಗೆ ಗೆಲುವಾಗುತ್ತದೆ. ವಿಠಲನಾಥರ ಸಹಾಯವನ್ನು ಮೆಚ್ಚಿಕೊಂಡ ಆದಿಲ್ಶಾಹಿ ಅವರಿಗೆ 134 ಹಳ್ಳಿಗಳ `ವತನ~ವನ್ನು ಕೊಡುತ್ತಾನೆ.

ವಿಠಲನಾಥರು ಪ್ರಾರಂಭದಲ್ಲಿ ಬಂಕಾಪುರವನ್ನು ತಮ್ಮ ಸಂಸ್ಥಾನದ ಕೇಂದ್ರವನ್ನಾಗಿ ಮಾಡಿಕೊಂಡಿದ್ದರು. ಆ ನಂತರ ಕೆಲವು ಕಾರಣಗಳಿಂದ ಹಂದಿಗನೂರು ಗ್ರಾಮಕ್ಕೆ ಸ್ಥಳಾಂತರವಾಯಿತು.

ಅಂದಿನಿಂದ ಹಂದಿಗನೂರು ದೇಸಗತಿ ಸಂಸ್ಥಾನ ಮಾಮಲೇದೇಸಾಯಿ ಎಂಬ ಹೆಸರಿನಿಂದ 134 ಹಳ್ಳಿಗಳ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆಗೆ ಶ್ರಮಿಸಿತು. ಈ ಹಳ್ಳಿಗಳ ಸಾಮಾನ್ಯ ಆಡಳಿತ, ಕಂದಾಯ ವಸೂಲಿಯನ್ನು ಸಂಸ್ಥಾನ ನಿರ್ವಹಣೆ ಮಾಡುತ್ತಿತ್ತು.

ಮಾಮಲೇದೇಸಾಯಿ ಮನೆತನದ ಮುಖ್ಯಸ್ಥರನ್ನು `ಗಾದಿ ಮಾಲೀಕರು~ ಎಂದು ಗೌರವದಿಂದ ಕರೆಯುವ ಪರಿಪಾಠ ಆರಂಭವಾಯಿತು. ದೇಸಗತಿಯ ಮುಖ್ಯಸ್ಥರು ಮಹಾರಾಜರಂತೆ ಮನೆತನದ ಪದ್ಧತಿಯಲ್ಲಿ ಪಟ್ಟಾಭಿಷೇಕದ ನಂತರವೇ ನೂತನ ಗಾದಿ ಮಾಲೀಕರಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದರು. ಆ ಸಂಪ್ರದಾಯ ಇಂದಿಗೂ ಪಾಲನೆ ಆಗುತ್ತಿದೆ. ಹಂದಿಗನೂರು ಸಂಸ್ಥಾನ ಈವರೆಗೆ ಹದಿನೇಳು ಗಾದಿ ಮಾಲೀಕರನ್ನು ಕಂಡಿದೆ.

ಸಂಸ್ಥಾನದ ಹದಿನಾಲ್ಕನೇ ಗಾದಿ ಮಾಲೀಕರಾದ ಸರ್ದಾರ್ ಬುಳ್ಳಪ್ಪ(ಬಾಬಾಸಾಹೇಬ) ಮಾಮಲೇದೇಸಾಯಿ ಅತ್ಯಂತ ಜನಪ್ರಿಯ ಆಡಳಿತಗಾರರಾಗಿದ್ದರು. 1889ರಲ್ಲಿ ಸಂತ ಶಿಶುನಾಳ ಶರೀಫರ ಸಮಾಧಿ ನಿರ್ಮಾಣಕ್ಕಾಗಿ ಶಿಶುನಾಳ ಗ್ರಾಮದಲ್ಲಿ ಹಿಂದೂ- ಮುಸ್ಲಿಂರ ನಡುವೆ ಸಣ್ಣಗೊಂದಲ ಉಂಟಾಗಿತ್ತು. ಆಗ ಬುಳ್ಳಪ್ಪ ಅವರು ಶಿಶುನಾಳಕ್ಕೆ ತೆರಳಿ ಶರೀಫರ ಸಮಾಧಿ ವಿವಾದ ಬಗೆಹರಿಸಿ ಗೊಂದಲಕ್ಕೆ ತೆರೆ ಎಳೆದಿದ್ದರು.

ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಬುಳ್ಳಪ್ಪ ಅವರು 1911ರಲ್ಲಿ ನಡೆದ ಬೆಳಗಾವಿ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷತೆ ವಹಿಸಿದ್ದರು. ಅವರ ದಕ್ಷತೆಯನ್ನು ಮೆಚ್ಚಿ 1936ರಲ್ಲಿ ಬ್ರಿಟಿಷ್ ಸರ್ಕಾರ ಅವರಿಗೆ `ಸರ್ದಾರ್~ ಬಿರುದು ನೀಡಿ ಗೌರವಿಸಿತ್ತು. ಬುಳ್ಳಪ್ಪನವರ ಹಿರಿಯ ಪತ್ನಿ ನಾಗೂಬಾಯಿ ಆಯುರ್ವೇದ ತಜ್ಞೆಯಾಗಿದ್ದರು. ಅವರು `ಬಿಷಗ್ದರ್ಪಣ~ ಹೆಸರಿನ ಆಯುರ್ವೇದ ಗ್ರಂಥ ಬರೆದು ಪ್ರಕಟಿಸಿದ್ದರು.

ದೇಸಗತಿಯ ಹನ್ನೊಂದನೇ ಗಾದಿ ಮಾಲೀಕರ ಹಿರಿಯ ಮಡದಿ ಅವ್ವ ನಾಗವ್ವ ಗಾದಿ ಮಾಲೀಕಿಣಿಯೂ ಆಗಿದ್ದರು. ಅವರು ಕುದುರೆ ಸವಾರಿಯಲ್ಲಿ ಪರಿಣತಿ ಸಾಧಿಸಿದ್ದರು. `ಬಸವಪುರಾಣ~ ಹೆಸರಿನ ಗ್ರಂಥಗಳನ್ನು ರಚಿಸಿದ ಕೀರ್ತಿ ಅವ್ವ ನಾಗವ್ವ ಅವರದು.

ದೇಸಗತಿ ಮಾಲೀಕರ ಪೈಕಿ 15ನೇ ಗಾದಿ ಮಾಲೀಕರ ಪುತ್ರರಾದ ಆರ್.ಬಿ. ಮಾಮಲೇದೇಸಾಯಿ ಸ್ವಾತಂತ್ರ್ಯ ಹೋರಾಟಗಾರರು. ಗಾಂಧೀಜಿ ಅವರ ಕರೆಯ ಮೇರೆಗೆ ಸ್ವಾತಂತ್ರ್ಯ ಚಳುವಳಿಯಲ್ಲಿ ತೊಡಗಿಕೊಂಡಿದ್ದರು. ಕರ್ನಾಟಕದ ಏಕೀಕರಣ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ರಾಷ್ಟ್ರೀಯ ಏಕತೆ ಹಾಗೂ ಜಾಗೃತಿ ಮೂಡಿಸಲು `ವಿಶಾಲ ಕರ್ನಾಟಕ~ ಹೆಸರಿನ ದಿನಪತ್ರಿಕೆಯನ್ನು ಆರಂಭಿಸಿದರು. ನಂತರ ರೈತರ ಹಿತ ಕಾಪಾಡುವ ಸಲುವಾಗಿ `ರೈತ ಪೇಟೆ~ ಎಂಬ ಮಾಸಿಕ ಪತ್ರಿಕೆಯನ್ನೂ ಅವರು ಆರಂಭಿಸಿದ್ದರು. ಆರ್.ಬಿ. ಮಾಮಲೇದೇಸಾಯಿ ಒಕ್ಕಲತನ ಹುಟ್ಟುವಳಿ ಮಾರಾಟ ಸಂಘದ ಸಂಸ್ಥಾಪಕರೂ ಹೌದು.

ಹಿರೇಕೆರೂರು ತಾಲ್ಲೂಕಿನ ಹಂಸಬಾವಿಯ ಮೃತ್ಯುಂಜಯ ಶಿಕ್ಷಣ ಸಂಸ್ಥೆಗೆ 450 ಎಕರೆ ಹಾಗೂ ಶಿಗ್ಗಾಂವದ ಮಾಮಲೇದೇಸಾಯಿ ಪ್ರೌಢ ಶಾಲೆಗೆ 250 ಎಕರೆ ಜಮೀನು ದಾನ ನೀಡಿ ಶೈಕ್ಷಣಿಕ ಅಭಿವೃದ್ಧಿಗೆ ನೆರವಾಗಿದ್ದರು. ಹಂದಿಗನೂರು ದೇಸಗತಿಗೆ ಈಗ ಅರವಿಂದ ಮಾಮಲೇ ದೇಸಾಯಿ ಮಾಲೀಕರು. ಅವರು 17ನೇ ಗಾದಿ ಮಾಲೀಕರು.

ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬಂದ ನಂತರ ಸ್ಥಳೀಯ ಆಡಳಿತದ ಹೊಣೆಗಾರಿಕೆ ದೇಸಗತಿಗೆ ಇಲ್ಲವಾದರೂ ಹಂದಿಗನೂರು ಮತ್ತು ಸುತ್ತಮುತ್ತಲಿನ ಜನರು ಈ ಸಂಸ್ಥಾನದ ಹಿರಿಯರು ಮತ್ತು ಈಗಿನ ಮಾಮಲೇದೇಸಾಯಿ ಅವರ ಜನಾನುರಾಗಿ ನಡವಳಿಕೆಗೆ ಗೌರವ ಸಲ್ಲಿಸುತ್ತ ಬಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.