ಕಲಾವಿದನ ಕಲ್ಪನೆಯ ನೋಟ ವಿಭಿನ್ನ – ವಿನೂತನ. ಕಲಾತ್ಮಕ ನೋಟಗಳನ್ನೊಳಗೊಂಡ ಯಾರಿಗೂ ಅರಿಯದ ಕಲಾ ವಿಸ್ಮಯ ಪ್ರಪಂಚಕ್ಕೆ ಅಡಿಯಿಡುವಂತೆ ಮಾಡುತ್ತದೆ. ಅಂತಹ ಭಿನ್ನ- ಭಾವ ಬೆಸೆವ ಕಲಾಕೃತಿಗಳ ಸರಮಾಲೆಯನ್ನು ಕಲಾಸಕ್ತನ ಮಡಿಲಿಗೆ ಅರ್ಪಿಸಲಿದ್ದಾರೆ ಕಲಾವಿದರಾದ ಕೆ.ಸುಪ್ರೀತ್ ಅಡಿಗ, ಸುನಿಲ್ ಮಿಶ್ರ, ಮಹೇಶ್, ಅಂಬಿಕಾ ಮತ್ತು
ಇನ್ಷಾ ಉಮ್ಮೆಹಾನಿ.

ಈ ಪಂಚ ಕಲಾವಿದರ ಕಲಾ ಪ್ರದರ್ಶನ ಬೆಂಗಳೂರಿನ ಕುಮಾರ ಕೃಪಾ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್ತಿನ ಕಲಾ ಗ್ಯಾಲರಿಯಲ್ಲಿ ಶುಕ್ರವಾರದಿಂದ ಪ್ರದರ್ಶನಗೊಳ್ಳಲಿದ್ದು, ಇದೇ 31ರವರೆಗೂ ನಡೆಯುತ್ತದೆ.

ಕರ್ನಾಟಕ ಚಿತ್ರಕಲಾ ಪರಿಷತ್ತಿನ ಕಲಾ ಮಹಾ ವಿದ್ಯಾಲಯದಲ್ಲಿ ಉಪನ್ಯಾಸಕರೂ ಆಗಿರುವ ಕೆ.ಸುಪ್ರೀತ್ ಅಡಿಗ ಅವರು, ಕ್ಯಾಮೆರಾದಲ್ಲಿ ಸೆರೆ ಹಿಡಿದ ವಿಭಿನ್ನ ಸಂದೇಶ ಸಾರುವ ಚಿತ್ರಗಳನ್ನು ಪ್ರದರ್ಶನದಲ್ಲಿ ಇಟ್ಟಿದ್ದಾರೆ. ಕರಾವಳಿಯ ಮೀನುಗಾರರ ಬದುಕು ಪ್ರತಿ ದಿನದ ಚಟುವಟಿಕೆಯ ಸಂದೇಶ ನೀಡುವ ವಿಷಯಗಳ ಆಧಾರಿತ ಫೋಟೋಗ್ರಫಿಯನ್ನು ಪ್ರದರ್ಶಿಸಿರುವುದು ವಿಶೇಷ. ಅದರ ಜೊತೆಗೆ ಹಸಿವು ಹೇಗೆ ಮನುಷ್ಯನನ್ನು ಕಂಗೆಡಿಸುತ್ತದೆ ಎಂಬುದನ್ನು ಸೆರೆಹಿಡಿದಿದ್ದಾರೆ.

ಕಲಾವಿದ ಸುನಿಲ್ ಮಿಶ್ರಾ ಅವರು ವೃತ್ತಿಯಲ್ಲಿ ಕಲಾ ಶಿಕ್ಷಕರು. ಕರಾವಳಿಯ ಉಡುಪಿಯವರು. ಮಿತಿಮೀರಿದ ಜನಸಂಖ್ಯೆ ಯಾವ ರೀತಿ ದೇಶದ ಪ್ರಗತಿ ಮೇಲೆ ಪರಿಣಾಮ ಬೀರುತ್ತದೆ, ಅದರ ಜೊತೆಗೆ ನಿರುದ್ಯೋಗ ಇನ್ನಿತರ ಸಮಸ್ಯೆಗಳನ್ನು ಚಿತ್ರ ಮತ್ತು ಶಿಲ್ಪಗಳಲ್ಲಿ ಬಿಂಬಿಸಿರುವುದು ವಿಶೇಷ.

ಕಲಾವಿದೆ ಇನ್ಷಾ ಉಮ್ಮೆಹಾನಿ ಅವರು ಭಾರತೀಯ ವಿದ್ಯಾಭವನದಲ್ಲಿ ಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಕಲಾಕೃತಿಗಳಲ್ಲಿ, ಮಗುವಿನ ಬಾಲ್ಯ ಇಂದಿನ ಈ ಕಾಲಘಟ್ಟದಲ್ಲಿ ಯಾವ ರೀತಿ ನಾಶವಾಗುತ್ತಿದೆ. ಮಗು ಎಲ್ಲೋ ಬೆಳೆಯಬೇಕಾದಂತಹ ಪರಿಸ್ಥಿತಿ, ಕೆಲಸದ ಒತ್ತಡ, ಇವೆಲ್ಲವನ್ನು ಅವರು ಕಲಾಕೃತಿಗಳಲ್ಲಿ ಚಿತ್ರಿಸಿದ್ದಾರೆ. ಅಂದರೆ ಆಗಿನ ಆಟ, ಪ್ರೀತಿ, ವಿಶ್ವಾಸ
ಮರಳಿ ಬರಬೇಕು ಎಂಬುದು ಈ ಕಲಾಕೃತಿಗಳ ಸಂದೇಶ.

ಕಲಾವಿದೆ ಅಂಬಿಕಾ ಅವರ ಕಲಾಕೃತಿಗಳಲ್ಲಿ ಜನರು ತಮ್ಮ ಕೆಲಸ ಮಾಡುವುದನ್ನು ಬಿಟ್ಟು ಇನ್ನೊಬ್ಬರ ಕೆಲಸದಲ್ಲಿ ಮೂಗು ತೂರಿಸುತ್ತಾರೆ ಎಂಬುದು ಬಿತ್ತರವಾಗಿದೆ. ತಾವು ಮಾಡುವ ಕೆಲಸದಲ್ಲಿ ನಿಷ್ಠೆಯಿರಲಿ, ಗೆಲುವು ಖಚಿತ ಎಂಬ ಸಂದೇಶವೂ ಅವರ ಕಲಾಕೃತಿಯಲ್ಲಿದೆ. ಕಲಾವಿದ ಮಹೇಶ್ ಅವರ ಕಲಾಕೃತಿಗಳಲ್ಲಿ, ಇಂದಿನ ಬೆಂಗಳೂರು ಹೇಗೆಲ್ಲಾ ಬೆಳೆದಿದೆ. ಇದರಿಂದಾಗುವ ಅನಾಹುತಗಳನ್ನು ಅವರು ತಮ್ಮ ಕಲಾಕೃತಿಗಳಲ್ಲಿ ಬಿಂಬಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.