ಕಿವಿಯೋಲೆಗಳ ಬಗ್ಗೆ ಆಸಕ್ತಿ ಯಾರಿಗಿಲ್ಲ ಹೇಳಿ. ಮೊನ್ನೆ ಮೊನ್ನೆ ನಡೆದ ಜಾತ್ರೆಯಲ್ಲೋ, ಉತ್ಸವದಲ್ಲೋ ನಿಮ್ಮ ಮುಂದೆ ಸಾಗಿ ಹೋದ ಯುವತಿಯರ ಕಿವಿಯಲ್ಲಿದ್ದ ಓಲೆ ಕಂಡು ನೀವೂ ಆಸೆಪಟ್ಟಿದ್ದನ್ನು ಮರೆತಿಲ್ಲವಲ್ಲ. ಬಗೆಬಗೆ ವಿನ್ಯಾಸದ, ವಿವಿಧ ಗಾತ್ರಗಳ, ಹಲವು ಬಣ್ಣಗಳ ಕಿವಿಯಾಭರಣಗಳಿಗೆ ನೀವು ಮನಸೋತಿದ್ದು ನಿಜ ತಾನೆ?

ಬಗೆ ಬಗೆ ಉಡುಪು ಧರಿಸಿದ ನಾರಿಯರಿಗೆ ಸೌಂದರ್ಯ ನೀಡಲು ಕಿವಿಯ ಆಭರಣಗಳು ಅತಿ ಮುಖ್ಯ. ಹೆಚ್ಚೇಕೆ, ಪ್ರತಿ ನಾಗರಿಕತೆಯನ್ನು ಗಮನಿಸಿದರೂ ಅಂದಿನ ಕಾಲಕ್ಕೆ ತಕ್ಕುದಾದ ಕಿವಿಯ ವಿಶಿಷ್ಟವಾದ ಆಭರಣಗಳು ಅಂದಂದಿಗೆ ಪ್ರಚಲಿತ ಪಡೆದುಕೊಂಡಿದ್ದವು ಎಂಬುದು ಇತಿಹಾಸದಿಂದ ವೇದ್ಯವಾಗುತ್ತದೆ.

ಅದೇ ರೀತಿ ಇಂದು ಕೂಡ ಬಗೆಬಗೆ ಆಭರಗಳು ವಿನ್ಯಾಸಗೊಂಡು ಮಾರುಕಟ್ಟೆಗಳಲ್ಲಿ ಲಭ್ಯವಿವೆ. ಆಯ್ಕೆ ಮಾಡಲು ಕಷ್ಟ ಆಗುವಂಥ ವಿನ್ಯಾಸಗಳು, ಶೈಲಿಗಳು, ಗಾತ್ರಗಳಲ್ಲಿ ಸಿಗುತ್ತವೆ.

ಕಿವಿಯ ಆಭರಣಗಳನ್ನು ಬಗೆಬಗೆ ವಿನ್ಯಾಸ, ಬಣ್ಣಗಳಲ್ಲಿ ತಯಾರಿಸಲಾಗುತ್ತದೆ. ಚಿನ್ನ, ಬೆಳ್ಳಿ, ಗಮ್‌ಮೆಟಲ್, ಬಿಳಿ ಅಥವಾ ಕಪ್ಪು ಮೆಟಲ್, ಪ್ಲಾಸ್ಟಿಕ್, ಫ್ಯಾನ್ಸಿ ವೈರ್‌ಗಳಿಂದಲೂ ತಯಾರಿಸಲಾಗುತ್ತದೆ. ಸ್ತ್ರೀಯರ ಸೌಂದರ್ಯ ವರ್ಧಿಸುವ ಈ ಕಿವಿಯೋಲೆಗಳು ನೋಟಕ್ಕೆ ಮತ್ತಷ್ಟು ರಂಗು ತುಂಬುತ್ತವೆ.

ದೇಶದ ಒಂದೊಂದು ಭಾಗಕ್ಕೆ ಭೇಟಿ ನೀಡಿದರೆ ನಮಗೆ ಅಲ್ಲಿನ ಸಾಂಪ್ರದಾಯಿಕ ಆಭರಣಗಳ ಸೊಬಗು ಅನಾವರಣವಾಗುತ್ತದೆ. ಅದು ಹೆಚ್ಚಾಗಿ ಚಿನ್ನ ಅಥವಾ ಬೆಳ್ಳಿಯ ಆಭರಣಗಳೇ ಆಗಿರುತ್ತವೆ. ಆದರೆ, ಚಿನ್ನ ಕೊಂಚ ದುಬಾರಿಯಾಗುತ್ತಿರುವುದರಿಂದಲೂ ಬೆಳ್ಳಿ ಆಭರಣಗಳಿಗೆ ತನ್ನದೇ ಆದ ಇತಿಮಿತಿಗಳಿರುವುದರಿಂದ ಅವುಗಳತ್ತ ಎಲ್ಲರ ಚಿತ್ತ ಹರಿಯುವುದು ಕಡಿಮೆ. ಮದುವೆ, ವಾರ್ಷಿಕೋತ್ಸವಗಳಂಥ ಸಾಂಪ್ರದಾಯಿಕ ಕಾರ್ಯಕ್ರಮಗಳಿಗೆ ಮಾತ್ರ ಚಿನ್ನ ಮತ್ತು ಬೆಳ್ಳಿಯ ಆಭರಗಳು ಹೆಚ್ಚು ಒಪ್ಪುತ್ತವೆ.

ಆದರೆ, ಇಂದು ಬಹುತೇಕ ಮಹಿಳೆಯರು ಅತ್ಯಾಧುನಿಕ ಆಭರಣಗಳನ್ನು ಇಷ್ಟಪಡುತ್ತಾರೆ. ಅದರಲ್ಲೂ ಇಂದಿನ ಯುವ ಮಹಿಳಾ ಪೀಳಿಗೆ ಸಾಂಪ್ರದಾಯಿಕ ಕಾರ್ಯಕ್ರಮಗಳಿಗಿಂತ ಭಿನ್ನವಾದ ಸಮಾರಂಭಗಳಲ್ಲಿ ಪಾಲ್ಗೊಳ್ಳುವುದೇ ಹೆಚ್ಚು. ಇಂಥ ಮೋಜಿನ, ವಿಶಿಷ್ಟ ಕಾರ್ಯಕ್ರಮಗಳಿಗೆ ಹಾಜರಾಗುವಾಗ ವೈಶಿಷ್ಟ್ಯಪೂರ್ಣ ಆಭರಣಗಳನ್ನು ಧರಿಸಿದ್ದರೆ ಮಾತ್ರ ಹೆಚ್ಚು ಮೆರುಗು.

ಇಂಥ ಸಂದರ್ಭಗಳಿಗಾಗಿಯೇ ಹೆಚ್ಚು ಮನೆಸೆಳೆಯುವಂಥ ಪ್ಲಾಸ್ಟಿಕ್, ಉಣ್ಣೆ, ರೈನ್‌ಸ್ಟೋನ್, ಸ್ಟೀಲ್ ಹಾಗೂ ಇತರ ಮೆಟಲ್‌ಗಳ ಆಭರಣಗಳು ಮಾರುಕಟ್ಟೆಯಲ್ಲಿವೆ. ನಮ್ಮ ಆಭರಣ ಇತರರ ಮನಗೆಲ್ಲುವ ಹಾಗೂ ಯಾವ ಬಗೆಯ ಕಾರ್ಯಕ್ರಮಕ್ಕೆ ಇವು ಸೂಕ್ತ ಎಂದು ನಿರ್ಧರಿಸುವ ಜಾಣ್ಮೆ ನಮ್ಮಲ್ಲಿರಬೇಕು ಅಷ್ಟೆ.

ಅದಕ್ಕೆ ಪೂರಕವಾದ ವಿವಿಧ ವಿನ್ಯಾಸಗಳು ಮನ ಸೆಳೆಯುತ್ತವೆ. ಶೂ ಮಾದರಿಯ ವಿನ್ಯಾಸ ಕಿವಿಯಾಭರಣಗಳೂ ವಿಶಿಷ್ಟವಾದ ನೋಟವನ್ನೂ ನೀಡಲಿದೆ. ಗಾಢ ಮೆಟಲ್‌ಗಳಿಂದ ತಯಾರಿಸಿದ ಇವುಗಳು ಕಿವಿಗೆ ಮೆರುಗು ನೀಡುತ್ತವೆ. ಡೆನಿಮ್ ಜೀನ್ಸ್‌ಗಳಿಂದ ತಯಾರಿಸಿದ ಆಭರಣಗಳೂ ಇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.