ಕೋರಮಂಗಲದ ಸಂಜನಾ ಸಿಂಗ್ ಪದವಿ ವಿದ್ಯಾರ್ಥಿ. ಕಲಿಕೆಯ ಸಂದರ್ಭದಲ್ಲೇ ಸಾಬೂನು ತಯಾರಿಸುವ ಹವ್ಯಾಸವನ್ನು ಉದ್ಯಮವನ್ನಾಗಿಸಿಕೊಂಡಿದ್ದಾರೆ.‘ಹ್ಯಾಂಡ್ಮೇಡ್ಸೋಪ್ ಬೈ ಸಂಜನಾ’ ಎಂಬ ಹೆಸರಿನಲ್ಲಿ ಸಾವಯವ, ಆಕರ್ಷಕ ವಿನ್ಯಾಸದ ಸಾಬೂನುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಮಕ್ಕಳಿಗೆ ಹಾಗೂ ಮಹಿಳೆಯರಿಗೆ‘ಆರ್ಟಿಸನಲ್ ಸೋಪ್ ಮೇಕಿಂಗ್’ ಕಾರ್ಯಾಗಾರವನ್ನೂ ನಡೆಸುತ್ತಾರೆ.

ಇವರು ತಯಾರಿಸಿದ ಸಾಬೂನುಗಳು ಕಣ್ಸೆಳೆಯುವುದು ವಿಭಿನ್ನ ವಿನ್ಯಾಸಗಳಿಂದ.ಬಣ್ಣ ಬಣ್ಣದ ಕಪ್ ಕೇಕ್ಗಳು, ಹೃದಯಾಕಾರದ ಸೋಪು, ಹಕ್ಕಿ, ಪ್ರಾಣಿಗಳು, ನಕ್ಷತ್ರ ಆಕೃತಿಗಳು.. ಹೀಗೆ ಸಾಬೂನಿನಲ್ಲಿವಿಭಿನ್ನ ವಿನ್ಯಾಸಗಳು ಅವರ ಕೈಚಳಕದಲ್ಲಿ ಮೂಡಿವೆ.

ಸಂಜನಾ ಅವರದು ಕ್ರಿಯಾಶೀಲ ಮನಸು. ಗ್ರಾಹಕರನ್ನು ಬೇಗ ಆಕರ್ಷಿಸುವುದಕ್ಕಾಗಿ ಸಾಬೂನಿನಲ್ಲಿ ಬಗೆ ಬಗೆ ವಿನ್ಯಾಸಗಳನ್ನು ಮಾಡುತ್ತಾ ಹೋದರು. ಪ್ರತಿ ಬಾರಿ ಸೋಪು ಮಾಡುವಾಗಲೂ ಅವರ ಮನಸು ಹೊಸ ವಿನ್ಯಾಸದ ಬಗ್ಗೆಚಿಂತಿಸುತ್ತಿತ್ತು. ‘ಇದು ಗ್ರಾಹಕರಿಗೂ ಇಷ್ಟವಾಯಿತು. ಅದೇ ಪ್ರೇರಣೆ’ ಎನ್ನುತ್ತಾರೆ ಸಂಜನಾ.

ನಿಂಬೆ, ಗುಲಾಬಿ ಜಲ, ಗ್ಲಿಸರಿನ್.. ಹೀಗೆ ಬೇರೆ ವಸ್ತುಗಳಿಂದ,ಮುಖ ಹಾಗೂ ಮೈ ಚರ್ಮದ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಬೇರೆ ಬೇರೆ ಬಗೆಯ ಸಾಬೂನುಗಳನ್ನು ಮಾಡುತ್ತಾರೆ. ಒಪ್ಪವಾಗಿಡುವ ವಸ್ತುಗಳಂತೆ ಕಾಣುವ ಇವುಗಳನ್ನುಮೊದಲ ಬಾರಿಗೆ ನೋಡಿದಾಗ ಸಾಬೂನೇ? ಎಂದು ಅನುಮಾನವಾಗದಿರದು.

‘ಈ ಸಾಬೂನುಗಳು ರಾಸಾಯನಿಕ ಮುಕ್ತವಾದವು. ಕೊಬ್ಬರಿ, ನಿಂಬೆ, ಅಲೊವೆರಾ, ಚಾಕೊಲೇಟ್... ಹೀಗೆ ಚರ್ಮಕ್ಕೆ ಹಿತಕರವಾದ ವಸ್ತುಗಳನ್ನೇ ಇದರಲ್ಲಿ ಬಳಸುತ್ತೇನೆ. 10–15 ಬಗೆಯ ಸಾಬೂನುಗಳನ್ನು ತಯಾರಿಸುತ್ತೇನೆ. ಇವು ಚರ್ಮರೋಗಕ್ಕೂ ಒಳ್ಳೆಯದು. ದೀರ್ಘಕಾಲದ ಬಾಳಿಕೆಗೆ ರಾಸಾಯನಿಕಗಳನ್ನು ಬಳಸಲ್ಲ’ ಎಂಬುದು ಅವರ ಮಾತು.

ಪದವಿ ಓದುತ್ತಿರುವ ಸಂಜನಾಗೆ ಭವಿಷ್ಯದಲ್ಲಿಯೂ ಸಾಬೂನು ತಯಾರಿಕೆಯನ್ನೇಮುಂದುವರಿಸುವ ಆಸಕ್ತಿ ಇದೆ. ರಜೆಯಲ್ಲಿ, ವಾರಾಂತ್ಯಗಳಲ್ಲಿ ಕಾರ್ಯಾಗಾರವನ್ನು ನಡೆಸುತ್ತಾರೆ.

ಸಂಪರ್ಕಕ್ಕೆ: sanjanabp@gmail.com

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.