ಸೊಲಬಕ್ಕನವರ ಎಂಬ ಕಲಾ ರೂವಾರಿ
ಬೆಂಗಳೂರಿನಲ್ಲಿ ‘ಮಾದರಿ ಪಾರಂಪರಿಕ ಕಲಾ ಗ್ರಾಮ’ ನಿರ್ಮಾಣಗೊಳ್ಳುವ ಮುನ್ನ ಶಿಗ್ಗಾವಿ ಬಳಿಯ ಗೋಟಗೋಡಿ ‘ರಾಕ್ ಗಾರ್ಡನ್’ನಲ್ಲಿ ಈ ರೀತಿಯ ಯಶಸ್ವಿ ಪ್ರಯತ್ನವನ್ನು ಮಾಡಲಾಗಿದೆ. ಈ ಎಲ್ಲದರ ಹಿಂದಿನ ರೂವಾರಿ ಬಯಲಾಟ ಅಕಾಡೆಮಿಯ ಮಾಜಿ ಅಧ್ಯಕ್ಷ ಶಿಗ್ಗಾವಿ ತಾಲ್ಲೂಕಿನ ಹುಲಿಸೋಗಿಯ ದಿವಂಗತ ಟಿ.ಬಿ. ಸೊಲಬಕ್ಕನವರ. ಮರೆತು ಹೋಗುತ್ತಿರುವ ನಮ್ಮ ಗ್ರಾಮೀಣ ಸಂಸ್ಕೃತಿಯನ್ನು ಕಲಾಕೃತಿಗಳ ಮೂಲಕ ಜೀವಂತವಾಗಿಡಬೇಕು ಎಂಬ ಆಶಯ ಮತ್ತು ಸೊಲಬಕ್ಕನವರ ಒತ್ತಾಸೆಯಿಂದ ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ‘ಕಲಾ ಗ್ರಾಮ’ವನ್ನು ರೂಪಿಸಲು ಕ್ರಮ ಕೈಗೊಂಡಿತು. ಸೊಲಬಕ್ಕನವರ ಅವರ ಪುತ್ರ ರಾಜಹರ್ಷ ಈ ಪಾರಂಪರಿಕ ಗ್ರಾಮವನ್ನು 2020ರಲ್ಲಿ ರೂಪಿಸಿದರು. ‘ರಂಗೋಲಿ ಗಾರ್ಡನ್’ ಎಂಬ ಸಂಸ್ಥೆ ನಿರ್ವಹಣೆಯ ಹೊಣೆ ಹೊತ್ತಿದೆ.