ಬಿಸಿ ಬಿಸಿ ಜೋಳ್ದ ರೊಟ್ಟಿ, ಬದ್ನೆಕಾಯಿ ಪಲ್ಯೆ, ತುಪ್ಪ ಸೇರಿಸಿ ಊಟ ಮಾಡ್ತಾ ಇದ್ರಾ ರುಚಿ ಮಸ್ತ್ ಇರ್ತಾತ.

ನಟ ಪ್ರಕಾಶ್ ರೈ ನಟನೆಯ ‘ಒಗ್ಗರಣಿ’ ಸಿನಿಮಾದಾಗ ‘ಈ ಜನುಮವೇ ಅಹಃ ದೊರಕಿದೆ ರುಚಿ ಸವಿಯಲು’ ಹಾಡು ಊರ್ ಬಿಟ್ಟು ಬೇರೆ ಊರಾಗ ಇರೋ ನಮಗಾಗಿ ಮಾಡದಂಗ ಐತಿ. ಆ ಸಿನಿಮಾದ ಹಾಡ್ನಾಗ ಊಟ್ದ ರುಚಿ, ಮಹತ್ವ ಹೇಳಾರಾ. ಆದ್ರಾ, ನಮ್ಗೆ ಇಷ್ಟವಾದ ಆ ಊಟ ಇಂದು ಸಿಗೋದೆ ಅಪರೂಪ ಆಗೈತಿ.

ಉತ್ತರ ಕರ್ನಾಟಕದ ಮಂದಿಗೆ ಜೋಳ್ದ ರೊಟ್ಟಿನಾ ಜೀವಾಳ. ರೊಟ್ಟಿ ತಿನ್ನೋ ಮೂಲಕವೇ ದೈನಂದಿನ ಕೆಲಸದ ಆರಂಭ. ಖಡಕ್ ರೊಟ್ಟಿ, ಶೇಂಗಾಪುಡಿ, ಚಟ್ನಿಪುಡಿ, ಗುರಾಳ್ ಪುಡಿ, ಕಾಳು, ಹಸಿಮೆಣಸಿನಕಾಯಿ, ಉಳ್ಳಾಗಡ್ಡಿ ದಿನನಿತ್ಯದ ಊಟದಾಗ ಇರ್ಲ್ಬೇಕು. ಎಂದೋ ಒಮ್ಮೆ ಇಡ್ಲಿ, ದೋಸೆ, ಪೂರಿ ಇತ್ಯಾದಿ. ಉತ್ತರ ಕರ್ನಾಟಕದ ಯಾವ ಖಾನಾವಳಿ ಇಲ್ವೇ ಮನೀಗಿ ಹೋದ್ರೂ ರೊಟ್ಟಿ ಇಲ್ದಾ ಊಟ ಪೂರ್ಣ ಆಗಲ್ಲ. ಹುಬ್ಬಳ್ಳಿಯಿಂದ ರೈಲು ಹತ್ ನೋಡಿ, ಅಲ್ಲಿನ ಜನರ ಬುತ್ತಿನೂ ರೊಟ್ಟಿಯೇ.

ಮನ್ಯಾಗಿದ್ದಾಗ ಅಮ್ಮ, ರೊಟ್ಟಿ ತಟ್ಟಿ, ಅಂಚಿನ ಮೇಲಿಂದ ಬಿಸಿ ಬಿಸಿ ರೊಟ್ಟಿನಾ ಅಂಗ ನಮ್ಮ ತಟ್ಟೆಗೆ ಕೊಡ್ತಿದ್ದಳು. ಈ ರುಚಿ ಸವಿತ್ತಿದ್ದ ನಾವು ಅಂದರ ಉತ್ತರ ಕರ್ನಾಟಕದ ಮಂದಿ ಇಂದು ನೌಕ್ರಿ ಅರಸಿ ಬೆಂಗ್ಳೂರಿಗೆ ಬಂದು, ಪೇಯಿಂಗ್ ಗೆಸ್ಟ್ಗಳಲ್ಲಿ (ಪಿ.ಜಿ) ಉಳ್ಕಂಡೀವಿ. ಇಲ್ಲಿ ಎಲ್ ನೋಡಿದ್ರೂ ರೈಸ್ ಐಟಂ. ಚಿತ್ರನ್ನ, ಪುಳಿಯೋಗೆರೆ, ಟೊಮೊಟೊ ರೈಸ್, ಪೊಂಗಲ್, ವಾಂಗಿಬಾತ್ ಹಿಂಗ ರೈಸ್ ಐಟಂಗಳ ಪಟ್ಟಿ ದೊಡ್ಡದು ಐತಿ. ಇಲ್ಲಿನೂ ರೊಟ್ಟಿ ಖಾನಾವಳಿಗಳು ಕೂಡಾ ಇದಾವ. ಆದ್ರ, ಅಮ್ಮ ಮಾಡದಂಗ ರೊಟ್ಟಿ ಇಲ್ಲ. ಎಲ್ಲವೂ ಮಷಿನ್ನಿಂದಲೇ ಸಿದ್ಧ. ರೊಟ್ಟಿ ಸಹ ಪೇಪರ್ ತರ ಇರ್ತಾತಿ. ತಿಂದ್ರೂ ತಿಂದಗೇ ಆಗಲ್ಲ. ಹಾಗಂತ ಬಿಡೋಕು ಆಗಲ್ಲ. ಹೊಟ್ ತುಂಬ ರೊಟ್ಟಿ ಉಣ್ಣೋಕೆ ಹೋದ್ರೆ ಬಿಲ್ ಕಟ್ಟೋಕೆ ಜೇಬಿಗೆ ಭಯ ಆಗ್ತಾತ. ರೊಟ್ಟಿ ಜಾಗನಾ ಇದೀಗ ಚಪಾತಿ ಆವರಿಸ್ತೈತಿ. ಆದ್ರ ಆ ಚಪಾತಿ ಸಹ ಯಂತ್ರದಿಂದಲೇ ಹುಟ್ಟಿದ್ದು, ಎಣ್ಣೆ ಇಲ್ಲದಂಗ ಸಿದ್ಧ ಆಗ್ತಾತ. ಕೆಲವೆಡೆ ರೊಟ್ಟಿ, ಚಪಾತಿನಾ ಕೈಯಿಂದ ಮಾಡಿದ್ರೂ ರುಚಿ ಅಷ್ಟಕಷ್ಟೆ. ಅನ್ನಕ್ಕೆ ಅಡುಗೆ ಸೋಡಾ ಬೆರೆಕೆ ಮಾಡ್ತಾರಾ. ಗತಿಯಿಲ್ಲದ ತಿನ್ನ್ಲೇ ಬೇಕಾದ ಸ್ಥಿತಿ. ಅರೆ ಹೊಟ್ಯಾಗ ಜೀವನ ನಡೆಸ್ಬೇಕಾದ ಪರಿಸ್ಥಿತಿ.

ಮನ್ಯಾಗಿದ್ದಾಗ ದಿನನಿತ್ಯವೂ ರೊಟ್ಟಿ ತಿಂದಿದ್ದ ನಮಗೆ, ಇಂದು ಆ ರೊಟ್ಟಿನಾ ಇಲ್ದಂಗ ಆಗೈತಿ. ರಜೆ ಸಿಕ್ರೇ ಸಾಕು ಮನೀಗಿ ಹೋಗಿ ಮೊದಲು ಮಾಡಿಸೋದ ರೊಟ್ಟಿನಾ. ನಂತರ ರಾಗಿ ಮುದ್ದೆ, ಮಟನ್ ಸಾರು. ಅಷ್ಟೇ ಅಲ್ಲ ಊರಿಂದ ವಾಪಸ್ ಬರೋವಾಗ ಇಲ್ವೇ ಯಾರಾದ್ರೂ ಊರಿಂದ ಬರ್ತಾ ಇದ್ದಾರೆ ಅಂದ್ರೆ ಸಾಕು ರೊಟ್ಟಿ ತಗೊಂಡು ಬರ್ರೀ ಅಂತ ಕೇಳಿಯೇ ಬಿಡ್ತೀವಿ.

ಇಸ್ಕೂಲಲ್ಲಿ ಇರೋವಾಗ ‘ಆಳಾಗಿ ದುಡಿ, ಅರಸನಾಗಿ ಉಣ್ಣು’, ‘ಅಕ್ಕಿ ತಿಂದವ ಹಕ್ಕಿ ತರ, ಜೋಳ ತಿಂದವ ತೋಳ ತರ ಇರ್ತಾನೆ’ ಅನ್ನೋ ಮಾತು ಇವತ್ತು ಜ್ಞಾಪಕ ಬರ್ತಾ ಐತಿ. ದುಡಿಯಾಕ ಬಂದ ಬಹುತೇಕ ಮಂದಿ, ಇಂದು ಇಷ್ಟಾರ್ಥ ಭೋಜನ ಇಲ್ಲದೆ ಪರಿತಪಿಸ್ಥ ಇದಾರ. ಬೇಕಾದ ಅಡುಗೆ ಮಾಡ್ಕೊಂಡು ಉಣ್ ಬಹುದು ಅಲ್ಲವಾ ಅನ್ನೋ ಪ್ರಶ್ನೆ ಹುಟ್ಟೋದು ಸಹಜ. ಆದ್ರ, ಎಲ್ಲರಿಗೂ ಅಡುಗೆ ಮಾಡಿಕೊಳ್ಳಾಕ ಬರಬೇಕಲ್ವಾ?. ಮಾಡಿಕೊಳ್ಳಾಕ ಅನುಕೂಲ ಕೂಡ ಇರಬೇಕಲ್ವಾ?. ಬೆಂಗಳೂರು ಟ್ರಾಫಿಕ್ನಾಗ ಅರ್ಧ ಜೀವನವೇ ಹೋದ್ರೆ, ಅಡುಗೆ ಮಾಡಿಕ್ಕೊಳ್ಳ ಬೇಕೆಂದ್ರೂ ಟೈಮ್ ಸಿಗಲ್ಲ. ತಿನ್ನೋದಾಗ ಮಾತ್ರವಲ್ಲ, ಕೆಲ್ಸ, ಇಲ್ಲಿನ ಹವಾಮಾನ, ಆಚಾರ-ವಿಚಾರ, ಸಂಪ್ರದಾಯ ಹೀಗೆ ಎಲ್ಲದ್ದಕ್ಕೂ ಹೊಂದಾಣಿಕೆ. ಕಾಂಕ್ರೀಟ್ ಗೋಡೆಗಳ ನಡುವೆ ಇರುವ ಹೊಂದಾಣಿಕೆ ಜೀವನ ಇದಾಗೈತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.