2011 ರಿಂದ ಇಲ್ಲಿಯವರೆಗೆ ಬಾಲಿವುಡ್ ಚಿತ್ರಗಳ ಪಟ್ಟಿಯ ಮೇಲೆ ಒಮ್ಮೆ ಕಣ್ಣಾಡಿಸಿದರೆ ವಿವಿಧ ಕ್ಷೇತ್ರಗಳ ದಿಗ್ಗಜರ ಯಶೋಗಾಥೆ ಕುರಿತ ಚಿತ್ರಗಳ ಸಂಖ್ಯೆ ಗಮನ ಸೆಳೆಯುತ್ತದೆ. ಸದ್ಯ ಇನ್ನೂ ಕಾರ್ಯಪ್ರವೃತ್ತರಾಗಿರುವ ದಿಗ್ಗಜರ ಬಯೋಪಿಕ್ಗಳ ಸರಣಿ ಗಮನ ಸೆಳೆಯುತ್ತದೆ. ಅದರಲ್ಲೂ ಕ್ರೀಡಾ ಕ್ಷೇತ್ರದ ಸಾಧಕರದ್ದೇ ಮೇಲುಗೈ ಎಂಬುದೊಂದು ವಿಶೇಷ.

‘ಭಾಗ್ ಮಿಲ್ಕಾ ಭಾಗ್’, ‘ಮೇರಿ ಕೋಮ್’, ‘ದಂಗಲ್’, ‘ಎಂ.ಎಸ್. ದೋನಿ’, ‘ಸಚಿನ್ ತೆಂಡೂಲ್ಕರ್’, ‘ಅಜರ್’ ಮತ್ತು ಈಗ ‘ಸೂರ್ಮಾ’ ಚಿತ್ರಗಳು ಆ ಪಟ್ಟಿಯಲ್ಲಿ ಎದ್ದು ಕಾಣುತ್ತವೆ. ಇದರಲ್ಲಿ ಅಜರ್ ಮತ್ತು ಸಚಿನ್ ತೆಂಡೂಲ್ಕರ್ ಬಿಟ್ಟರೆ ಉಳಿದ ಚಿತ್ರಗಳು ಹಿಟ್ ಆಗಿವೆ. ಹಾಕಿ ಕ್ರೀಡೆಯ ದಂತಕಥೆ ಸಂದೀಪ್ ಸಿಂಗ್ ಜೀವನಗಾಥೆಯ ‘ಸೂರ್ಮಾ’ ಕೂಡ ಈಗ ಪ್ರೇಕ್ಷಕರನ್ನು ಸೆಳೆಯುತ್ತಿದೆ.

ಹಾಡು, ನೃತ್ಯ, ಹೊಡೆದಾಟ, ಹಾಸ್ಯಪ್ರಧಾನ ಚಿತ್ರಗಳನ್ನು ಹಲವು ವರ್ಷಗಳಿಂದ ನೋಡುತ್ತ ಬಂದಿರುವ ಚಿತ್ರರಸಿಕರಿಗೂ ಈ ಬಯೋಪಿಕ್ಗಳು ಇಷ್ಟವಾಗುತ್ತಿವೆ. ಜೊತೆಗೆ ಯುವ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯಲುಈ ಚಿತ್ರಗಳು ತಕ್ಕಮಟ್ಟಿಗೆ ಯಶಸ್ಸು ಕಂಡಿವೆ. ಭಾರತದಲ್ಲಿ ಇವತ್ತು ಸಿನಿಮಾ ತಾರೆಯರಿಗೆ ಇರುವಷ್ಟೇ ತಾರಾ ಮೌಲ್ಯ, ಫ್ಯಾನ್ ಫಾಲೋಯಿಂಗ್ ಕ್ರಿಕೆಟಿಗರಿಗೂ ಇದೆ. ಅಷ್ಟೇ ಏಕೆ ಕಾಮನ್ವೇಲ್ತ್ ಗೇಮ್ಸ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್ಗಳಲ್ಲಿ ಸಾಧನೆ ಮಾಡಿರುವ ಕ್ರೀಡಾಪಟುಗಳಿಗೂ ಈಗ ಮಾಧ್ಯಮ ಮನ್ನಣೆ ಹೆಚ್ಚು ಸಿಗುತ್ತಿದೆ. ಭಾರತದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಕ್ರೀಡಾಪಟುಗಳು ದೊಡ್ಡ ಸಾಧನೆ ಮಾಡುವುದು ಸುಲಭದ ಮಾತಲ್ಲ. ಆದ್ದರಿಂದ ಪ್ರತಿಯೊಬ್ಬ ಯಶಸ್ವಿ ಕ್ರೀಡಾಪಟುವಿನ ಹಿಂದೆ ಒಂದು ಕಥೆ ಇದ್ದೇ ಇರುತ್ತದೆ. ಇನ್ನೊಂದು ವಿಶೇಷವೆಂದರೆ ಪ್ರತಿಯೊಬ್ಬರ ಹಿನ್ನೆಲೆಯೂ ಭಿನ್ನವಾಗಿರುತ್ತದೆ.

-ಮೇರಿ ಕೋಮ್

ಉದಾಹರಣೆಗೆ ಬಾಕ್ಸರ್ ಮೇರಿ ಕೋಮ್ ಅವರು ಎದುರಿಸಿದ ಸಮಸ್ಯೆಗಳು ಬೇರೆ ರೀತಿಯವು. ಮನೆಯಲ್ಲಿ ತಂದೆಯ ವಿರೋಧವನ್ನು ಎದುರಿಸುತ್ತಲೇ ಬಾಕ್ಸಿಂಗ್ ಪಟುವಾಗಿ ಬೆಳೆದವರು. ಆದರೆ ಪೋಗಟ್ ಸಹೋದರಿಯರ ಕಥೆ ಹಾಗಲ್ಲ. ಅಪ್ಪನೇ ತನ್ನ ಹೆಣ್ಣುಮಕ್ಕಳನ್ನು ಕುಸ್ತಿಪಟುಗಳನ್ನಾಗಿ ಬೆಳೆಸುವ ಕಥೆ ಅದು. ಮಿಲ್ಕಾ ಸಿಂಗ್ ಕಥೆ ಮತ್ತೊಂದು ರೀತಿಯದ್ದು. ಅದರಲ್ಲಿ ದೇಶಭಕ್ತಿಯ ಜಾಡು ಗಮನ ಸೆಳೆಯುತ್ತದೆ. ಇನ್ನು ಕ್ರಿಕೆಟ್ ಲೋಕದ ಯಶಸ್ವಿ ನಾಯಕ ಮಹೇಂದ್ರಸಿಂಗ್ ದೋನಿಯದ್ದು ಮತ್ತೊಂದು ರೀತಿಯ ಜೀವನಗಾಥೆ. ಮಧ್ಯಮವರ್ಗ ಕುಟುಂಬದ ಬಾಲಕನೊಬ್ಬ ಕ್ರಿಕೆಟ್ ವಿಶ್ವದ ಸೂಪರ್ ಸ್ಟಾರ್ ಆಗಿ ಬೆಳೆಯುವ ಕಥೆ ಅದು. ಇದೀಗ ಬಂದಿರುವ ಸೂರ್ಮಾ ಕಥೆಯ ನಾಯಕ ಸಂದೀಪ್ ಸಿಂಗ್ ಅವರದ್ದು ಮತ್ತೊಂದು ರೀತಿಯ ವಿಷಯ.

ಭಾರತದ ಹಾಕಿ ಕ್ರೀಡಾ ಕ್ಷೇತ್ರವು ಕಂಡ ಶ್ರೇಷ್ಠ ಆಟಗಾರರಲ್ಲಿ ಸಂದೀಪ್ ಕೂಡ ಒಬ್ಬರು. 2003ರಿಂದ ಯಶಸ್ಸಿನ ಓಟ ಆರಂಭಿಸಿದ್ದ ಶ್ರೇಷ್ಠ ಡ್ರ್ಯಾಗ್ ಫ್ಲಿಕರ್. ಆದರೆ ವೃತ್ತಿಜೀವನದ ಪ್ರಮುಖ ಘಟ್ಟದಲ್ಲಿದ್ದಾಗಲೇ ಬಂದೆರಗಿದ ಆಘಾತದಿಂದ ಹೊರಬಂದು ಮತ್ತೆ ಮಿಂಚಿದ ಯಶೋಗಾಥೆ ಅವರದ್ದು. ಈಸಬೇಕು ಇದ್ದು ಜೈಸಬೇಕು ಎಂಬ ಛಲದ ವ್ಯಕ್ತಿತ್ವ ಅವರನ್ನು ಮತ್ತಷ್ಟು ಶ್ರೇಷ್ಠರನ್ನಾಗಿಸಿತು.

2006ರಲ್ಲಿ ವಿಶ್ವಕಪ್ ಟೂರ್ನಿಯಲ್ಲಿ ಆಡಲಿದ್ದ ಭಾರತ ಹಾಕಿ ತಂಡಕ್ಕೆ ಅವರು ಆಯ್ಕೆಯಾಗಿದ್ದರು. ತಮ್ಮ ಊರು ಕುರುಕ್ಷೇತ್ರದಿಂದ ದೆಹಲಿಗೆ ತೆರಳಲು ಶತಾಬ್ದಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಆದರೆ, ಅಲ್ಲಿ ಎರಡು ಗುಂಪುಗಳು ನಡೆಸಿದ ಘರ್ಷಣೆ, ಹಿಂಸಾಚಾರದಲ್ಲಿ ಹಾರಿದ ಗುಂಡು ಅವರ ದೇಹ ಹೊಕ್ಕು ಸಾವಿನಂಚಿಗೆ ಕರೆದೊಯ್ದಿತ್ತು. ವೃತ್ತಿಬದುಕು ಕೊನೆಯಾಗುವ ಆತಂಕದ ಛಾಯೆ ಮೂಡಿತ್ತು. ಆದರೆ, ಅದೆಲ್ಲವನ್ನೂ ಮೀರಿ ನಿಂತ ಸಂದೀಪ್ 2009ರಲ್ಲಿ ಭಾರತ ತಂಡಕ್ಕೆ ಮರಳಿದರು. ಮೊದಲಿಗಿಂತಲೂ ಚುರುಕಾಗಿ ಆಡಿದರು.

2012ರ ಲಂಡನ್ ಒಲಿಂಪಿಕ್ಸ್ಗೆ ಭಾರತ ತಂಡವು ಅರ್ಹತೆ ಗಳಿಸಲು ಅವರ ಆಟವೇ ಪ್ರಮುಖವಾಯಿತು. ಈ ಎಲ್ಲ ಅಂಶಗಳ ಸುತ್ತ ಚಿತ್ರಕಥೆ ಹೆಣೆಯಲಾಗಿದೆ. ಮೊದಲ ದಿನವೇ ಕೋಟಿ ರೂಪಾಯಿ ಗಳಿಕೆಯನ್ನೂ ದಾಟಿದೆ.
ಇವತ್ತಿನ ಸ್ಪರ್ಧಾತ್ಮಕ ಜೀವನದಲ್ಲಿ ಪ್ರತಿಯೊಬ್ಬರೂ ಯಶಸ್ಸು ಗಳಿಸುವತ್ತ ಓಡುತ್ತಿದ್ದಾರೆ. ಆ ಹಾದಿಯಲ್ಲಿ ಕಷ್ಟಕೋಟಲೆಗಳನ್ನು ಎದುರಿಸಿ ಮುಂದುವರಿಯಲು ಪ್ರೇರಣೆಗಳ ಅವಶ್ಯಕತೆ ಇರುತ್ತದೆ. ತಮ್ಮ ಮಕ್ಕಳು ದೊಡ್ಡ ಸಾಧನೆ ಮಾಡಬೇಕು ಎನ್ನುವವರ ಸಂಖ್ಯೆ ಹೆಚ್ಚಿದೆ. ಅಂತಹವರೆಲ್ಲರ ಮನಸ್ಸನ್ನು ಗ್ರಹಿಸಿರುವ ಚಿತ್ರ ನಿರ್ಮಾಪಕರು ಬಯೋಪಿಕ್ಗಳತ್ತ ಒಲವು ತೋರಲು ಕಾರಣವಿರಬಹುದು.

ಅದರಲ್ಲೂ ಸದ್ಯ ತಮ್ಮ ವೃತ್ತಿರಂಗದಲ್ಲಿ ಮಿಂಚುತ್ತಿರುವವರನ್ನೇ ಚಿತ್ರಕಥೆಯನ್ನಾಗಿಸಿದರೆ ಮತ್ತಷ್ಟು ಯಶಸ್ಸಿಯಾಗುತ್ತವೆ ಎನ್ನುವ ಸತ್ಯವನ್ನೂ ಮನಗಂಡಿದ್ದಾರೆ. ಮಹೇಂದ್ರಸಿಂಗ್ ದೋನಿ ಕುರಿತ ಚಲನಚಿತ್ರ ಇದಕ್ಕೆ ಉತ್ತಮ ಉದಾಹರಣೆ.

ಕ್ರೀಡಾಂಗಣದಲ್ಲಿ ಅವರ ಆಟ ಮತ್ತು ಚಿತ್ರದಲ್ಲಿ ಅವರ ಜೀವನ ಎರಡನ್ನೂ ಏಕಕಾಲಕ್ಕೆ ನೋಡಿದ್ದು ಒಂದು ವಿಶೇಷ ಅನುಭವ. ಇದೇ ಜಾಡಿನಲ್ಲಿ ಬಂದಿರುವ ಸಂಜು ಚಿತ್ರ ನಟ ಸಂಜಯ್ ದತ್ ಅವರ ಜೀವನಗಾಥೆಯನ್ನು ತೋರಿಸಿದೆ. ಇದೂ ಕೂಡ ಹಿಟ್ ಆಗಿದೆ. ಈ ಹಿಂದೆ ಸಿಲ್ಕ್ ಸ್ಮಿತಾ ಅವರ ಕುರಿತ ‘ಡರ್ಟಿ ಪಿಕ್ಚರ್’, ದಿಟ್ಟ ಗಗನಸಖಿ ನೀರಜಾ ಬಾನೋಟ್, ಚಂಬಲ್ ಕಣಿವೆಯ ಡಕಾಯಿತ ರಾಣಿಯಾಗಿದ್ದ ಫೂಲನ್ ದೇವಿ ಅವರ ಕುರಿತ ‘ಬ್ಯಾಂಡಿಟ್ ಕ್ವೀನ್’ ಚಿತ್ರಗಳು ಕೂಡ ಸಾಕಷ್ಟು ಸುದ್ದಿ ಮಾಡಿದ್ದವು.

ಮುಂದಿನ ದಿನಗಳಲ್ಲಿ ಇಂತಹ ಇನ್ನಷ್ಟು ಚಿತ್ರಗಳು ಬರುವ ಸಿದ್ಧತೆಯಲ್ಲಿವೆ. ಬ್ಯಾಡ್ಮಿಂಟನ್ ತಾರೆಯರಾದ ಸೈನಾ ನೆಹ್ವಾಲ್, ಪಿ.ವಿ. ಸಿಂಧು,, ಕುಸ್ತಿಪಟು ಸುಶೀಲ್ ಕುಮಾರ್, ಕ್ರಿಕೆಟಿಗ ವಿರಾಟ್ ಕೊಹ್ಲಿ, ಗಣಿತಶಾಸ್ತ್ರಜ್ಞ ಆನಂದಕುಮಾರ್, 1948ರಲ್ಲಿ ಒಲಿಂಪಿಕ್ಸ್ ಚಿನ್ನ ಗೆದ್ದ ಭಾರತ ಹಾಕಿ ತಂಡದ ಕುರಿತ ಗೋಲ್ಡ್ ಚಿತ್ರಗಳು ಸಿದ್ಧವಾಗುತ್ತಿವೆ.

-‘ಭಾಗ್ ಮಿಲ್ಕಾ ಭಾಗ್’ ಚಿತ್ರದ ದೃಶ್ಯ

ಹಿಂದಿ ಚಿತ್ರರಂಗದ ಸೂಪರ್ ಸ್ಟಾರ್ಗಳಾದ ದೀಪಿಕಾ ಪಡಕೋಣೆ, ಅಕ್ಷಯ್ ಕುಮಾರ್, ಶ್ರದ್ಧಾ ಕಪೂರ್, ಹೃತಿಕ್ ರೋಷನ್ ಅವರು ಬಯೋಪಿಕ್ಗಳಲ್ಲಿ ನಟಿಸಲು ಮುಗಿಬಿದ್ದಿದ್ದಾರೆ. ಶ್ರದ್ಧಾಕಪೂರ್ ಸೈನಾ ನೆಹ್ವಾಲ್ ಆಗಿ, ದೀಪಿಕಾ ಅವರು ಸಿಂಧು ಆಗಿ, ಗಣಿತಜ್ಞ ಆನಂದಕುಮಾರ್ ಪಾತ್ರದಲ್ಲಿ ಹೃತಿಕ್ ತೆರೆ ಮೇಲೆ ಮಿಂಚಲಿದ್ದಾರೆ. ಮುಂಬರುವ ಚಿತ್ರಗಳು ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತವೆ ಎನ್ನುವುದರ ಮೇಲೆ ಬಯೋಪಿಕ್ ಟ್ರೆಂಡ್ ಎಷ್ಟು ದಿನ ಮುಂದುವರಿಯಲಿದೆ ಎಂಬ ಲೆಕ್ಕಾಚಾರವೂ ನಡೆಯಲಿದೆ.

-ಸಂದೀಪ್ ಸಿಂಗ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.