ಆತ್ಮಹತ್ಯೆಗೆ ಶರಣಾಗಲು ಕಲ್ಲಿನ ಕೋಟೆ ಏರಿದ್ದ ಜ್ಯೋತಿರಾಜ್ ಸಾಹಸಿಗನಾಗಿ ಪರಿವರ್ತನೆಯಾಗಿದ್ದು ಕುತೂಹಲಕಾರಿ ಕಥನ.ಕೋತಿಗಳಂತೆ ಬಂಡೆ ಏರುತ್ತಾ, ಸಾರ್ವಜನಿಕರ ಪ್ರಶಂಸೆಯನ್ನೇ ಕೀರ್ತಿಯಾಗಿಸಿಕೊಂಡು, ದಶಕಗಳಲ್ಲೇ ರಾಷ್ಟ್ರೀಯ ಮಾಧ್ಯಮಗಳಲ್ಲಿ ಮಿಂಚಿದ್ದು, ಮತ್ತೊಂದು ರೋಚಕ ಬೆಳವಣಿಗೆ.

ಜ್ಯೋತಿರಾಜ್ ತಮಿಳುನಾಡಿನ ತೇನಿ ಜಿಲ್ಲೆಯ ಆಂಡಿಪಟ್ಟಿ ತಾಲ್ಲೂಕಿನ ಕಾಮರಾಜಪುರಂ ಎಂಬ ಸಣ್ಣ ಗ್ರಾಮದಲ್ಲಿ ಜನಿಸಿ ಚಿತ್ರದುರ್ಗದಲ್ಲಿ ನೆಲೆ ಕಂಡುಕೊಂಡಿದ್ದು ಆಕಸ್ಮಿಕ. ಪಕ್ಕದ ಗ್ರಾಮದ ಜಾತ್ರೆಗೆ ಹೋಗಿ ಪೋಷಕರಿಂದ ತಪ್ಪಿಸಿಕೊಂಡ ಬಾಲಕ ಬಂದಿದ್ದು ಬಾಗಲಕೋಟೆಗೆ. 13ನೇ ವಯಸ್ಸಿನಲ್ಲಿ ಚಿತ್ರದುರ್ಗದ ವಿಜಾಪುರಕ್ಕೆ ಬಂದು ಕೋಟೆ ನಾಡಿನ ಮಗನಾಗಿ ಬೆಳೆದರು.

ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಜ್ಯೋತಿರಾಜ್ಗೆ ಬಡತನ, ಏಕಾಂಗಿತನದಿಂದ ಖಿನ್ನತೆಗೆ ಒಳಗಾಗಿದ್ದರು. ಆತ್ಮಹತ್ಯೆಗಾಗಿ ಏಳು ಸುತ್ತಿನ ಕೋಟೆ ಏರಿದರು. ಆದರೆ, ಕಲ್ಲು ಬಂಡೆಯ ಮೇಲೆ ಸ್ವಚ್ಛಂದವಾಗಿ ಹಾರಾಡುತ್ತಿದ್ದ ಕೋತಿಗಳು, ಇವರ ಸಾವಿನ ನಿರ್ಧಾರವನ್ನು ಬದಲಿಸಿದೆವು. ಜತೆಗೆ, ಬದುಕುವ ಸ್ಫೂರ್ತಿ ನೀಡಿದವು. ಅಲ್ಲಿಂದಲೇ ಜ್ಯೋತಿರಾಜ್, ಕೋತಿಗಳಂತೆ ಬಂಡೆ, ಬೆಟ್ಟಗಳನ್ನು ಏರಲು ಆರಂಭಿಸಿದರು.

ಬರಿಗೈಯಲ್ಲಿ ಬೃಹದಾಕಾರದ ಬಂಡೆಗಳು, ಕಲ್ಲಿನ ಗೋಡೆಗಳನ್ನು ಏರುವಂಥ ಇವರ ಸಾಹಸ ಎಂಥವರನ್ನೂ ಬೆರಗುಗೊಳಿಸುತ್ತದೆ. ಹಾಲಿವುಡ್ನ ಸ್ಪೈಡರ್ಮಾನ್ ನೆನಪಿಸುತ್ತದೆ. ಶಕ್ತಿಮಾನ್, ಬ್ಯಾಟ್ಮ್ಯಾನ್, ಸ್ಪೈಡರ್ಮ್ಯಾನ್ ಅವರನ್ನೊಳಗೊಂಡ ಸಾಹಸಿಗರ ವಿಶ್ವ ಟಾಪ್ ಟೆನ್ನಲ್ಲಿ ತಾನೂ ಒಬ್ಬನಾಗಿದ್ದೇನೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಜ್ಯೋತಿರಾಜ್. ಹತ್ತು ಜನರ ಪೈಕಿ ಕೆಲವರೊಂದಿಗೆ ವಿವಿಧ ಮಾಧ್ಯಮಗಳ ಮೂಲಕ ಮಾತಾಡಿದ್ದೇನೆ ಎನ್ನುತ್ತಾರೆ.

ಏಳುಸುತ್ತಿನ ಕೋಟೆಗೆ ಬರುವ ಪ್ರವಾಸಿಗರು ಇವರ ಸಾಹಸ ಮೆಚ್ಚಿ, ಚಪ್ಪಾಳೆ ಹೊಡೆದು ನೀಡುವ ಹಣದಲ್ಲೇ ಜೀವನ. ಅದೇ ಹಣದಲ್ಲಿ 27ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಿಸಿದ್ದಾರೆ. ಈಗಾಗಲೇ ಅಡ್ವೆಂಚರ್ ಕ್ಲಬ್ ಸ್ಥಾಪಿಸಿಕೊಂಡು ಬಡ ಮಕ್ಕಳಿಗೆ ವಾಲ್ಕ್ಲೈಂಬಿಂಗ್ ತರಬೇತಿ ನೀಡುತ್ತಿದ್ದಾರೆ. ನಾಯಕ ನಟನಾಗಿ ಸ್ಯಾಂಡಲ್ವುಡ್ಗೂ ಕಾಲಿಟ್ಟಿದ್ದ ಇವರನ್ನು ಕ್ರೀಡಾಜಗತ್ತು ಆಕರ್ಷಿಸಿದೆ.

2020ರಲ್ಲಿ ನಡೆಯುವ ಒಲಂಪಿಕ್ ಕ್ರೀಡಾಕೂಟದಲ್ಲಿ ವಾಲ್ಕ್ಲೈಂಬಿಂಗ್ ಕೂಡ ಸೇರ್ಪಡೆಗೊಂಡಿದೆ.ಒಲಂಪಿಕ್ಗೆ ಪ್ರವೇಶ ಪಡೆಯಲು ಇನ್ನಿಲ್ಲದ ತಾಲೀಮು ನಡೆಸುತ್ತಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿತ್ರದುರ್ಗದ ಕೀರ್ತಿಪತಾಕೆಯನ್ನು ಹಾರಿಸಲು2019ರ ಹೊಸ ವರ್ಷವನ್ನು, ವಾಲ್ಕ್ಲೈಂಬಿಂಗ್ ತರಬೇತಿಗೆ ಮೀಸಲಿಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.