ದಕ್ಷಿಣ ಪೆಸಿಫಿಕ್ ಸಾಗರದ ಈಸ್ಟರ್ ದ್ವೀಪವು ಬೃಹತ್ ಗಾತ್ರದ, ವಿಚಿತ್ರವೂ ವಕ್ರವಕ್ರವೂ ಆಗಿರುವ ತಲೆ ಹೊಂದಿರುವ ಪ್ರತಿಮೆಗಳಿಗೆ ಪ್ರಸಿದ್ಧವಾಗಿದೆ. ಈ ಪ್ರತಿಮೆಗಳನ್ನು ರಾಪಾ ನುಯಿ ಜನಾಂಗದವರು ಜ್ವಾಲಾಮುಖಿಯಿಂದ ಉಂಟಾದ ಶಿಲೆ ಬಳಸಿ ನಿರ್ಮಿಸಿದರು. ಅವರು ಇದನ್ನು ನಿರ್ಮಿಸಿದ ಕಾಲ ಕ್ರಿ.ಶ. 1250ರಿಂದ 1500ರ ನಡುವೆ ಎಂದು ಅಂದಾಜಿಸಲಾಗಿದೆ.

ಈ ಪ್ರತಿಮೆಗಳಿಗೆ ಮೋವಾಯ್ ಎಂದು ಹೆಸರು. ಇವು 3.5 ಮೀಟರ್‌ನಿಂದ ಆರಂಭಿಸಿ 6 ಮೀಟರ್‌ಗಳಷ್ಟು ಎತ್ತರವಾಗಿವೆ. ಒಂದು ಪ್ರತಿಮೆ 10 ಮೀಟರ್ ಎತ್ತರವಾಗಿದೆ. ಇವೆಲ್ಲ ಹತ್ತಾರು ಟನ್‌ಗಳಷ್ಟು ಭಾರವಾಗಿವೆ. ಈ ದ್ವೀಪದಲ್ಲಿ ಇಂತಹ 600ಕ್ಕೂ ಹೆಚ್ಚು ಪ್ರತಿಮೆಗಳು ಇವೆ.

ಕೆಲವು ಪ್ರತಿಮೆಗಳು ದ್ವೀಪದ ಅಂಚಿನಲ್ಲಿವೆ. ಕೆಲವನ್ನು ಅಹು ಎನ್ನುವ ಎತ್ತರದ ಜಾಗದಲ್ಲಿ ನಿಲ್ಲಿಸಲಾಗಿದೆ. 1859 ಹಾಗೂ 1862ರ ನಡುವೆ ಪೆರುವಿನ ಗುಲಾಮರ ವ್ಯಾಪಾರಿಗಳು ಈ ದ್ವೀಪದ ಸುಮಾರು ಎರಡು ಸಾವಿರ ವಾಸಿಗಳನ್ನು ಸೆರೆಹಿಡಿದರು. ಈ ಸಾಂಸ್ಕೃತಿಕ ಆಘಾತದಿಂದ ಚೇತರಿಸಿಕೊಳ್ಳಲು ದ್ವೀಪವಾಸಿಗಳಿಗೆ ಸಾಧ್ಯವಾಗಲೇ ಇಲ್ಲ.

ವ್ಯಾಪಾರಿಗಳ ಕೈಯಿಂದ ತಪ್ಪಿಸಿಕೊಂಡು ದ್ವೀಪಕ್ಕೆ ಮರಳಿದ ಕೆಲವರು ರೋಗರುಜಿನಗಳನ್ನು ಹೊತ್ತುತಂದರು. ಈ ರೋಗ ಎದುರಿಸಲು ಬೇಕಿದ್ದ ನಿರೋಧಕ ಶಕ್ತಿ ದ್ವೀಪವಾಸಿಗಳ ದೇಹದಲ್ಲಿ ಇರಲಿಲ್ಲ.

1877ರ ಸುಮಾರಿಗೆ ಈಸ್ಟರ್ ದ್ವೀಪವಾಸಿಗಳ ಸಂಖ್ಯೆ 150ಕ್ಕಿಂತ ಹೆಚ್ಚಿರಲಿಲ್ಲ. ಅವರ ಜೊತೆಯಲ್ಲೇ ಅವರ ಭಾಷೆ, ಸಂಸ್ಕೃತಿ ಮತ್ತು ಅವರಲ್ಲಿದ ಜ್ಞಾನ ಕೂಡ ಸತ್ತುಹೋಯಿತು. ಮೋವಾಯ್ ಪ್ರತಿಮೆಗಳ ಅರ್ಥ ಏನೆಂಬುದು ಯಾರಿಗೂ ಸ್ಪಷ್ಟವಾಗಿ ಗೊತ್ತಿಲ್ಲ. ಆದರೆ, ಅವು ರಾಪಾ ನುಯಿ ಜನಾಂಗದವರ, ದೈವತ್ವಕ್ಕೇರಿದ ಪೂರ್ವಿಕರ ಪ್ರತಿಮೆಗಳು ಎಂದು ನಂಬಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.