ಮನುಷ್ಯರನ್ನು ಕಾಲ ಮುಗಿಸುತ್ತದಂತೆ

ಹೊಸ ಹೊಳಪಿನ ಜೀವಂತ ಕ್ಷಣಗಳ
ಮಡಿಲಲ್ಲಿ ಧರಿಸಿ ಕಾಲ ನನ್ನ ಮೇಲೆರಗುತ್ತಿದೆ
ಸಮ್ಮೋಹಕ ಗಳಿಗೆಗಳಿಗೆ ಕಾತರಿಸುತ್ತಿರುವ
ನನ್ನೆದೆಯ ಹಾಡಿಗೆ ಕಾಲ ಸ್ಪಂದಿಸುತ್ತಿದೆ

ಕಾಲ ಮಹಾ ನಿಷ್ಕರುಣಿಯಂತೆ

ಸುರಕ್ಷಿತ ಪರಿಸರದರಗಿಣಿ ಈ ತನು
ಸಂಹಿತೆಗಳ ಚೌಕಟ್ಟಿನಡಿ ನಡೆನಡೆದು
ದಣಿದು ಜಡಗೊಳ್ಳುವ ಹೊತ್ತಲ್ಲಿ
ಹೊಸ ಸ್ಪರ್ಶ, ಗಂಧ, ಮೈಮನಸ್ಸಿಗೆ ಅಡರಿ
ಅದ ಮೂಸಿ ಮೂಸಿ ಕಣ್ತುಂಬಿ
ಪುಳಕಗೊಳ್ಳುವಲ್ಲಿ ಕಾಲ ಪ್ರೇರಣೆಯಾಗಿದೆ

ಕಾಲ ಭಲೇ ಕ್ರೂರಿಯಂತೆ

ಮಡಿಕೆ, ನೆರಿಗೆ, ಸುಕ್ಕು, ಅಲ್ಲಲ್ಲಿ
ಬಿಳಿಕೂದಲು ಮೊಳೆಯುತ್ತಿರುವ
ಮೂವತೈದರ ಈ ಜೀವದೊಳಗಡೆ
ಉರಿಯುವ ಜ್ವಾಲೆಯ ಬೆಳಗಿಸಿ
ಕಾಲ ಹೊಸ ಅವಕಾಶಗಳ ಸೃಜಿಸುತ್ತಿದೆ

ಕಾಲ ಕಾಯುವುದಿಲ್ಲ

ಹದಿನೈದರಲ್ಲಿ ತಿಳಿಯದ ಇಪ್ಪತೈದರಲ್ಲಿ ಒಪ್ಪದ
ಅದೆಷ್ಟೋ ಸಂಗತಿಗಳು ಮೂವತ್ತೈದರಲ್ಲಿ ಅಪ್ಪಿ
ಮುನ್ನಡೆಸುತ್ತವೆಂಬುದು ಬದುಕಿನಚ್ಚರಿಕೋಶ
ಪ್ರೇಮರಾಹಿತ್ಯದ ಗಳಿಗೆಗಳನ್ನು ಸುಟ್ಟು ಕಳೆದಿದ್ದೇನೆ
ಪ್ರೇಮದಲ್ಲಿ ಮುಳುಗಿದ ಈ ಗಳಿಗೆ
ಕಾಲವೇ ಕಾಯುತ್ತದೆಂಬ ನಂಬಿಕೆಗೆ ಇಂಬು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ಮನುಷ್ಯರನ್ನು ಕಾಲ ಮುಗಿಸುತ್ತದಂತೆ

ಹೊಸ ಹೊಳಪಿನ ಜೀವಂತ ಕ್ಷಣಗಳ
ಮಡಿಲಲ್ಲಿ ಧರಿಸಿ ಕಾಲ ನನ್ನ ಮೇಲೆರಗುತ್ತಿದೆ
ಸಮ್ಮೋಹಕ ಗಳಿಗೆಗಳಿಗೆ ಕಾತರಿಸುತ್ತಿರುವ
ನನ್ನೆದೆಯ ಹಾಡಿಗೆ ಕಾಲ ಸ್ಪಂದಿಸುತ್ತಿದೆ

ಕಾಲ ಮಹಾ ನಿಷ್ಕರುಣಿಯಂತೆ

ಸುರಕ್ಷಿತ ಪರಿಸರದರಗಿಣಿ ಈ ತನು
ಸಂಹಿತೆಗಳ ಚೌಕಟ್ಟಿನಡಿ ನಡೆನಡೆದು
ದಣಿದು ಜಡಗೊಳ್ಳುವ ಹೊತ್ತಲ್ಲಿ
ಹೊಸ ಸ್ಪರ್ಶ, ಗಂಧ, ಮೈಮನಸ್ಸಿಗೆ ಅಡರಿ
ಅದ ಮೂಸಿ ಮೂಸಿ ಕಣ್ತುಂಬಿ
ಪುಳಕಗೊಳ್ಳುವಲ್ಲಿ ಕಾಲ ಪ್ರೇರಣೆಯಾಗಿದೆ

ಕಾಲ ಭಲೇ ಕ್ರೂರಿಯಂತೆ

ಮಡಿಕೆ, ನೆರಿಗೆ, ಸುಕ್ಕು, ಅಲ್ಲಲ್ಲಿ
ಬಿಳಿಕೂದಲು ಮೊಳೆಯುತ್ತಿರುವ
ಮೂವತೈದರ ಈ ಜೀವದೊಳಗಡೆ
ಉರಿಯುವ ಜ್ವಾಲೆಯ ಬೆಳಗಿಸಿ
ಕಾಲ ಹೊಸ ಅವಕಾಶಗಳ ಸೃಜಿಸುತ್ತಿದೆ

ಕಾಲ ಕಾಯುವುದಿಲ್ಲ

ಹದಿನೈದರಲ್ಲಿ ತಿಳಿಯದ ಇಪ್ಪತೈದರಲ್ಲಿ ಒಪ್ಪದ
ಅದೆಷ್ಟೋ ಸಂಗತಿಗಳು ಮೂವತ್ತೈದರಲ್ಲಿ ಅಪ್ಪಿ
ಮುನ್ನಡೆಸುತ್ತವೆಂಬುದು ಬದುಕಿನಚ್ಚರಿಕೋಶ
ಪ್ರೇಮರಾಹಿತ್ಯದ ಗಳಿಗೆಗಳನ್ನು ಸುಟ್ಟು ಕಳೆದಿದ್ದೇನೆ
ಪ್ರೇಮದಲ್ಲಿ ಮುಳುಗಿದ ಈ ಗಳಿಗೆ
ಕಾಲವೇ ಕಾಯುತ್ತದೆಂಬ ನಂಬಿಕೆಗೆ ಇಂಬು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.