ಮಿಲ್ಖಾ ಸಿಂಗ್
ಲೇ: ಆರ್.ಬಿ.ಗುರುಬಸವರಾಜ
ಪ್ರ: ಸಾಹಿತ್ಯಲೋಕ ಪಬ್ಲಿಕೇಷನ್ಸ್
ಸಂ: 9945939436

ವೃತ್ತಿಯಲ್ಲಿ ಶಿಕ್ಷಕರಾಗಿರುವ ಆರ್.ಬಿ.ಗುರುಬಸವರಾಜ ಅವರ ‘ಮಿಲ್ಖಾ ಸಿಂಗ್– ಕಾಲದ ಓಟದೊಂದಿಗೆ ಮುಖಾಮುಖಿ’ ಕೃತಿಯು ಲೇಖಕರೇ ಹೇಳುವಂತೆ ದಿಢೀರ್ ಮಾಡಿದ ಪಾಕ. ‘ದಿ ರೇಸ್ ಆಫ್ ಮೈ ಲೈಫ್’ ಕೃತಿಯಿಂದ ಮೂಲ ಮಾಹಿತಿಯನ್ನು ಪಡೆದು ಮಿಲ್ಖಾ ಸಿಂಗ್ ಕ್ರೀಡಾಜೀವನದ ಕಥನಗಳನ್ನು ಅವರು ಕಟ್ಟಿಕೊಟ್ಟಿದ್ದಾರೆ. ದೇಶ ವಿಭಜನೆಯ ವೇಳೆ ಮಿಲ್ಖಾ ಅನುಭವಿಸಿದ ಯಾತನೆಯ ಜತೆ ಜತೆಗೆ ‘ಫ್ಲೈಯಿಂಗ್ ಸಿಖ್’ ರೂಪುಗೊಂಡ ಕಥೆಯೂ ಇಲ್ಲಿ ಹರಡಿಕೊಂಡಿದೆ.

ಮಿಲ್ಖಾ ಅವರು ತೀರಿಹೋದ ದಿನದಿಂದ ಕೇವಲ ಹತ್ತು ದಿನಗಳಲ್ಲಿ ಈ ಕೃತಿಯ ಬರಹವನ್ನು ಪೂರ್ಣಗೊಳಿಸಿದ ಲೇಖಕರು ಮಾಡಿದ್ದು ದಿಢೀರ್ ಪಾಕವಾದರೂ ಕ್ರೀಡಾ ಸಾಧಕನ ಬದುಕಿನ ಕೊಂಚ ರುಚಿಯನ್ನು ಕಟ್ಟಿಕೊಡುತ್ತದೆ. ಮಿಲ್ಖಾ ಅವರ ಬಗ್ಗೆ ಕನ್ನಡದಲ್ಲಿ ಬಂದ ಮೊತ್ತಮೊದಲ ಕೃತಿಯೂ ಇದಾಗಿದೆ.

ಈ ಮಹಾನ್ ಕ್ರೀಡಾ ತಾರೆಯ ಬದುಕಿನ ಪ್ರೇರಣೆಯಿಂದ ಕ್ರೀಡಾಲೋಕಕ್ಕೆ ಒಂದಷ್ಟು ಕಿವಿಮಾತು, ಮಕ್ಕಳ ಭವಿಷ್ಯಕ್ಕೊಂದಿಷ್ಟು ಮಾರ್ಗದರ್ಶನದ ಮಾತುಗಳನ್ನೂ ಲೇಖಕರು ಈ ಕೃತಿಯ ಕೊನೆಯಲ್ಲಿ ಪೋಣಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.