ಜೈಪುರ: ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದ ಮಾಡುವಾಗ ಕೆಲವು ಧ್ವನ್ಯಾರ್ಥದ ಪದಗಳನ್ನು ಸಮರ್ಥವಾಗಿ ಅನುವಾದಿಸುವುದು ಸವಾಲಾಗಿದೆ ಎಂದು ದೀಪಾ ಭಾಸ್ತಿ ಅನುಭವ ಹಂಚಿಕೊಂಡರು.

‘ಟ್ರಾನ್ಸ್‌ಲೇಟಿಂಗ್ ವರ್ಡ್ಸ್, ಟ್ರಾನ್ಸ್‌ಲೇಟಿಂಗ್ ವರ್ಲ್ಡ್ಸ್’ ಎಂಬ ಅನುವಾದ ಸಂಬಂಧಿ ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಅಂತೆ ಎಂಬ ಕನ್ನಡ ಪದವನ್ನು ಇಟ್ ಸೀಮ್ಸ್, ಅಪಾರೆಂಟ್ಲಿ ಎಂದೆಲ್ಲ ಇಂಗ್ಲಿಷ್‌ನಲ್ಲಿ ಹೇಳಬಹುದು. ಆದರೆ, ಅದರಿಂದ ಕನ್ನಡದ ಮೂಲ ಧ್ವನಿ ದಾಟಿಸಿದಂತೆ ಆಗುವುದಿಲ್ಲ’ ಎಂದರು.

ಭಾನು ಮುಷ್ತಾಕ್ ಅವರ ‘ಶಾಯಿಸ್ತಾ ಮಹಲ್‌ನ ಕಲ್ಲು ಮಹಡಿಗಳು’ ಎಂಬ ಕಥನ ಭಾಗದ ಸಾಲುಗಳ ಅನುವಾದವನ್ನು ಅವರು ವಾಚಿಸಿದರು.

ಕವಯಿತ್ರಿ ಸನಾ ಎಹ್ಸಾನ ಅವರು ಪಾಕಿಸ್ತಾನಿ ಎಂಬ ಕಾರಣಕ್ಕೆ ಭೌತಿಕವಾಗಿ ಸಾಹಿತ್ಯೋತ್ಸವಕ್ಕೆ ಬರಲು ಸಾಧ್ಯವಾಗದ್ದನ್ನು ಹೇಳಿಕೊಂಡರು. ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಕವನ ವಾಚಿಸಿದರು.

ಕ್ವಿಯರ್ ಸಮುದಾಯದ ತುಮುಲಗಳನ್ನು ಒಳಗೊಂಡ ‘2012’ ಎಂಬ ಕವನವನ್ನು ಗಾರ್‌ಫೀಲ್ಡ್ ಫ್ರಾನ್ಸಿಸ್ಕೊ ಡಿಸೋಜಾ ವಾಚಿಸಿದರು. ಅಸ್ಸಾಮಿ ಕತೆಗಾರ್ತಿ ಜ್ಯೂರಿ ಬರುವಾ ತಮ್ಮ ಭಾಷೆಯ ಕಥೆಯ ಪ್ಯಾರಾಗಳನ್ನು ಮೂಲಭಾಷೆ ಹಾಗೂ ಇಂಗ್ಲಿಷ್‌ನಲ್ಲಿ ವಾಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.