ಮಳೆ ಸುರಿಸುವ ಮೋಡಗಳು ಸಂಜೆಯ ಹೊತ್ತಿಗೆ ಒಂದೆಡೆ ಸೇರುತ್ತಿದ್ದಂತೆ,ಮಹದೇವಪುರ ರಸ್ತೆಯ ಫೀನಿಕ್ಸ್ ಮಾಲ್ ಒಳಗೆ ಸಂಗೀತಾಸಕ್ತರು ಒಂದುಗೂಡಿದ್ದರು. ಅತ್ತ ಸುಳಿಗಾಳಿ ತೇಲುತ್ತಿದ್ದಂತೆ, ಇತ್ತ ಬಾಲಿವುಡ್ ಹಾಗೂ ಕನ್ನಡ ಗೀತೆಗಳೂ ಅಲೆ ಅಲೆಯಾಗಿ ತೇಲಿಬಂದವು.

ಸುನ್ರಹಾ ಹೈ.., ಮನವಾ ಲಾಗೇ.., ಬರಸೋರೆ ಮೇಘಾ.. – ಹೀಗೆ ಒಂದಿನಿತೂ ಬಿಡುವು ಕೊಡದಂತೆ ತಮ್ಮದೇ ಗೀತೆಗಳಿಗೆ ಮತ್ತೆ ದನಿಯಾದರು ಶ್ರೇಯಾ ಘೋಷಾಲ್. ಜೇನಿನ ಕಂಠದ ಅವರ ಹಾಡುಗಳನ್ನು ಕೇಳಿದ ಅಭಿಮಾನಿಗಳಲ್ಲಿ ಸಂಭ್ರಮವೋ ಸಂಭ್ರಮ.ಫೀನಿಕ್ಸ್ ಮಾರ್ಕೆಟ್ಸಿಟಿ ಮಾಲ್ನಲ್ಲಿ ಗಾಯಕಿ ಶ್ರೇಯಾ ಘೋಷಾಲ್ ಅವರುಇತ್ತೀಚೆಗೆ ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮ ಸಂಗೀತಾಸಕ್ತರ ಮನ ಸೆಳೆಯಿತು.

ಕನ್ನಡದ ಮಾಧುರ್ಯಪೂರ್ಣ ಗೀತೆಗಳು ಶ್ರೇಯಾ ಕಂಠದಲ್ಲಿ ನಲಿದಾಡಿದವು.ಸಂತಸ, ಪ್ರೀತಿ, ಮಮತೆಯ ಉತ್ಕಟತೆ ಹೆಚ್ಚಿಸಿದವು. ಅಷ್ಟು ಹೊತ್ತು ಕಾದು ಕುಳಿತಿದ್ದ ವರುಣ, ಕಾರ್ಯಕ್ರಮದ ಕೊನೆಯ ಹೊತ್ತಿಗೆ ಮಳೆಯ ಸಿಂಚನ ಮಾಡಿ ಪುಳಕ ಮೂಡಿಸಿದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.