ಕುವೆಂಪು ಅವರನ್ನು ಬಿಡಿಬಿಡಿಯಾಗಿ ಅಧ್ಯಯನ ಮಾಡುವುದೇ ಬೇರೆ. ಅವರ ಸಾಹಿತ್ಯದ ಸಮಗ್ರ ಓದಿನ ಅನುಭವವೇ ಬೇರೆ. ‘ಬಾ ಕುವೆಂಪು ದರ್ಶನಕ್ಕೆ’ ಕೃತಿಯು ಕುವೆಂಪು ಅವರ ಸಮಸ್ತ ಸಾಹಿತ್ಯದ ದರ್ಶನ ಮಾಡಿಸುತ್ತದೆ.

ಇದು ಕುವೆಂಪು ಅಧ್ಯಯನ ಸರಣಿಯ ಮುಂದುವರಿದ ಭಾಗವೇ ಆಗಿದೆ. ಕುವೆಂಪು ಅವರು ಆರಂಭದಲ್ಲಿ ಇಂಗ್ಲಿಷ್ ಕವಿತೆಗಳನ್ನು ಬರೆದರು. ಅದು ಮಿಲ್ಟನ್ ಮತ್ತು ವರ್ಡ್ಸ್‌ವರ್ತ್ ಕವಿಗಳ ಅನುಕರಣೆಗಳಾಗಿದ್ದವು. ಐರಿಷ್ ಕವಿ ಕಸಿನ್ಸ್ ಅವರಿಗೂ ಇದನ್ನು ತೋರಿಸಿದರು. ಆಗ ಕಸಿನ್ಸ್ ಅವರು ಕುವೆಂಪು ಕವನಗಳಲ್ಲಿ ಸ್ವಂತಿಕೆ ಇಲ್ಲ ಎಂಬುದನ್ನು ಮುಚ್ಚುಮರೆಯಿಲ್ಲದೇ ಹೇಳಿದರು. ಕನ್ನಡ ನಾಡಿನ ಕವಿ ಕನ್ನಡದಲ್ಲಿಯೇ ಹೇಗೆ ಬರೆಯಬೇಕು ಎಂಬುದನ್ನು ಮನದಟ್ಟು ಮಾಡಿಸಿದರು. ‘ಕನ್ನಡದಲ್ಲಿ ಪದ್ಯ ಬರೆಯುವುದು ಸಾಧ್ಯವೇ?’ ಎಂಬುದು ಪುಟ್ಟಪ್ಪನವರ ಪ್ರಶ್ನೆಯಾಗಿತ್ತು. ಆದರೆ, ಕಸಿನ್ಸ್ ‘ಸಾಧ್ಯ ಮಾತ್ರವಲ್ಲ, ಅದು ಆಗಬೇಕಾದ್ದೆ ಹಾಗೇ’ ಎಂಬುದನ್ನು ಹೇಳಿದ್ದರು ಎಂಬ ಪ್ರಭುಶಂಕರ ಅವರ ‘ಕುವೆಂಪು’ ಪುಸ್ತಕದಲ್ಲಿರುವ ಸಂದರ್ಭವನ್ನು ಈ ಕೃತಿಯ ಆರಂಭದಲ್ಲಿಯೇ ತಿಳಿಸಲಾಗಿದೆ.

ಕನ್ನಡದಲ್ಲಿ ಪದ್ಯ ಬರೆಯುವುದು ಸಾಧ್ಯವೇ ಎಂದು ಪ್ರಶ್ನಿಸಿದ್ದ ಪುಟ್ಟಪ್ಪ ಹೇಗೆಲ್ಲ ಬರೆದರು ಮತ್ತು ಅವರ ಒಟ್ಟಂದದ ಸಾಹಿತ್ಯದ ಹಲವು ಮಗ್ಗಲುಗಳನ್ನು ಅರಿಯಲು ಈ ಪುಸ್ತಕ ದೊಡ್ಡ ದೀವಿಗೆ.

ಪುಸ್ತಕ: ಬಾ ಕುವೆಂಪು ದರ್ಶನಕ್ಕೆ

ಲೇಖಕರು : ನರಹಳ್ಳಿ ಬಾಲಸುಬ್ರಹ್ಮಣ್ಯ

ಪುಟಗಳು 624

ದರ: ₹ 750

ಪ್ರಕಾಶನ: ಅಭಿನವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.