ಶನಿವಾರ, 2 ನವೆಂಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ನೆನಪಿನಲ್ಲಿ ಉಳಿಯುವಂತಹ ಸುಮಧುರ ಘಟನೆ ನಿಮ್ಮ ಬಾಳಲ್ಲಿ ನಡೆಯಲಿದೆ...
Published 1 ನವೆಂಬರ್ 2024, 23:44 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಬರಹಗಾರರಿಗೆ ಕೀರ್ತಿ ಅರಸಿ ಬರುವುದು, ಆದರೂ ಬದುಕಿನಲ್ಲಿ ಸ್ಥಿರತೆಯ ಅಭಾವ ಕಾಣಲಿದೆ. ವಿವಾಹದ ವಿಚಾರದ ಕಾರ್ಯಗಳಲ್ಲಿನ ವೈಫಲ್ಯದಿಂದಾಗಿ ಮನಸ್ಸಿಗೆ ಅತಿಯಾಗಿ ಬೇಸರವಾಗಬಹುದು.
ವೃಷಭ
ಕುಟುಂಬದ ಸರ್ವತೋಮುಖ ಬೆಳವಣಿಗೆಗೆ ನಿಮ್ಮ ಪಾತ್ರ ಮುಖ್ಯ ಎಂಬುದು ಕುಟುಂಬ ವರ್ಗಕ್ಕೆ ಮನದಟ್ಟಾಗುವುದು. ದ್ವೇಷ ಮನೋಭಾವಗಳು ಸರಿಯಾಗಲಿದೆ. ಪಾಲುದಾರಿಕೆಯಲ್ಲಿ ಅಭಿಪ್ರಾಯ ಭೇದ ಉಂಟಾಗಬಹುದು.
ಮಿಥುನ
ರಾಜಕಾರಣಿಗಳಿಗೆ ಈ ದಿನ ತಮ್ಮ ಪಕ್ಷದ ಬಗೆಗಿನ ಪ್ರಚಾರಕ್ಕಾಗಿ ಉತ್ತಮ ಭಾಷಣ ನಡೆಸಿ ಜನರ ಮನಗೆಲ್ಲುವ ಒಂದು ಸದವಕಾಶ ಲಭಿಸುವುದು. ಮಕ್ಕಳಿಗೆ ವಿದೇಶದಲ್ಲಿ ಶಿಕ್ಷಣ ಕೊಡಿಸಲು ಸಂಘಗಳು ನೆರವಾಗುವವು.
ಕರ್ಕಾಟಕ
ಅಕ್ಕ-ಪಕ್ಕದವರ ಹಾವಭಾವಗಳಿಂದ ಬೇಸರಗೊಂಡು ಜೀವನದ ಪಾಠವನ್ನು ಕಲಿಯುವುದು ಅಗತ್ಯವೆನಿಸುವುದು. ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ಎಡವುವ ಪರಿಸ್ಥಿತಿ ನಿಮ್ಮದಾಗಲಿದೆ.
ಸಿಂಹ
ಬಹುಕಾಲ ನೆನಪಿನಲ್ಲಿ ಉಳಿಯುವಂತಹ ಸುಮಧುರ ಘಟನೆಯು ನಿಮ್ಮ ಬಾಳಲ್ಲಿ ನಡೆಯಲಿದೆ. ಆಹಾರ ಪದಾರ್ಥದ ಉದ್ದಿಮೆದಾರರಿಗೆ ಹೊಸ ಯೋಜನೆ ಸಾಫಲ್ಯ ತರಲಿದೆ. ಯಾತ್ರೆ ಕೈಗೊಳ್ಳುವ ಮನಸ್ಸಾಗಲಿದೆ.
ಕನ್ಯಾ
ಸಗಟು ವ್ಯಾಪಾರಿಗಳಿಗೆ ಅಧಿಕ ಲಾಭವಾಗಲಿದೆ, ವ್ಯವಹಾರಕ್ಕೆ ಸಹಾಯವಾಗುವಂತಹ ವಾಹನ ಖರೀದಿಯ ಬಗ್ಗೆ ಗಮನಹರಿಸಿ. ಬಂಧು ಮಿತ್ರರೊಡನೆ ಸಂತಸದ ಕ್ಷಣಗಳನ್ನು ಹಂಚಿಕೊಳ್ಳುವಂತಾಗಲಿದೆ.
ತುಲಾ
ಎಲ್ಲಾ ಕಾರ್ಯದಲ್ಲೂ ಆತ್ಮ ವಿಶ್ವಾಸವಿರಲಿ, ಆದರೇ ನಿಮಗಿರುವ ಅತಿಯಾದ ಆತ್ಮ ವಿಶ್ವಾಸ ನಿಮ್ಮ ಜಯಕ್ಕೆ ಹೊಡೆತವನ್ನು ನೀಡುವುದು. ಕ್ರೀಡಾಪಟುಗಳಿಗೆ ಅಭ್ಯಾಸದ ಕೊರತೆಯು ವೈಫಲ್ಯಕ್ಕೆ ಕಾರಣವಾಗುವುದು.
ವೃಶ್ಚಿಕ
ರಸ ಪದಾರ್ಥಗಳ ವ್ಯವಹಾರ ನಡೆಸುವವರಿಗೆ ಉತ್ತಮ ಅವಕಾಶ ಸಿಗಲಿದೆ. ಬಹಳ ದಿನದಿಂದ ಇದ್ದಂತಹ ಶತ್ರು ಬಾಧೆ ದೇವತಾನುಗ್ರದಿಂದ ನಿವಾರಣೆ ಆಗಲಿದೆ. ವೈವಾಹಿಕ ಜೀವನದಲ್ಲಿ ನೆಮ್ಮದಿ ಇರಲಿದೆ.
ಧನು
ರಕ್ತ ಸಂಬಂಧಿತವಾದ ಖಾಯಿಲೆಯನ್ನು ಹೊಂದಿದವರು ಅಥವಾ ಅಂತಹ ಅನುಮಾನ ಇರುವವರು ರಕ್ತ ಪರೀಕ್ಷೆ ಮಾಡಿಸುವುದು ಒಳ್ಳೆಯದು. ಬಾಕಿ ಉಳಿದ ಕೆಲಸವನ್ನು ಪೂರ್ತಿಗೊಳಿಸಲು ಈ ದಿನ ಪ್ರಶಸ್ತವಾಗಿದೆ.
ಮಕರ
ಮನೆಯ ಅಭಿವೃದ್ಧಿಯ ವಿಚಾರದಲ್ಲಿ ವದಂತಿಗಳಿಗೆ ಕಿವಿಗೊಡದೆ ಪ್ರಯತ್ನ ಮುಂದುವರೆಸಿ. ಕೃಷಿಯ ಮಾಡುವ ಬಗ್ಗೆ ಒಲವು ಹೆಚ್ಚಲಿದೆ. ವೈದ್ಯರು ತಮ್ಮ ಅಭ್ಯಾಸದಲ್ಲಿ ಹೆಚ್ಚಿನ ಜಾಗ್ರತೆವಹಿಸುವುದು ಒಳ್ಳೆಯದು.
ಕುಂಭ
ಆಸ್ತಿ ವಿಷಯಗಳನ್ನು ತ್ವರಿತ ಗತಿಯಲ್ಲಿ ಬಗೆಹರಿಸಿಕೊಳ್ಳಲು ಹಿತೈಷಿಯೊಬ್ಬರ ನೆರವು ಪಡೆಯುವಿರಿ. ಉದ್ಯೋಗಾಕಾಂಕ್ಷಿಗಳಿಗೆ ಸಂಸ್ಥೆಯ ಲೆಕ್ಕಾಚಾರವನ್ನು ನೋಡುವ ಅಮೋಘ ಅವಕಾಶಗಳ ಸೂಚನೆ ಸಿಗಲಿದೆ.
ಮೀನ
ವಿದ್ಯುತ್‌ ಅಥವಾ ಅಗ್ನಿಯಿಂದಾಗಲೀ ಅಪಘಾತಗಳು ಸಂಭವಿಸುವ ಲಕ್ಷಣಗಳಿರುವುದು. ಸದ್ಯದ ಪರಿಸ್ಥಿತಿಯಲ್ಲಿ ಕತ್ತಲೆಯ ಪ್ರಪಂಚದಲ್ಲಿರುವ ನಿಮ್ಮ ಜೀವನಕ್ಕೆ ದೂರದಲ್ಲೊಂದು ಜ್ಯೋತಿ ಕಾಣಲಿದೆ.
ADVERTISEMENT
ADVERTISEMENT