ನವದೆಹಲಿ: ಇದೇ ತಿಂಗಳು ಆಸ್ಟ್ರೇಲಿಯಾದಲ್ಲಿ ಬಾರ್ಡರ್ –ಗಾವಸ್ಕರ್ ಟ್ರೋಫಿ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಆಡಲು ಭಾರತ ತಂಡವು ತೆರಳಲಿದೆ. ಪ್ರತಿ ಬಾರಿಯಂತೆ ಈ ಬಾರಿ ಇಂಟ್ರಾ ಸ್ಕ್ವಾಡ್ ಅಭ್ಯಾಸ ಪಂದ್ಯಗಳನ್ನು ಏರ್ಪಡಿಸುವುದಿಲ್ಲ. ಬದಲಿಗೆ ನೆಟ್ಸ್ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡಲಾಗುವುದು ಎಂದು ತಂಡದ ವ್ಯವಸ್ಥಾಪನ ಮಂಡಳಿ ನಿರ್ಧರಿಸಿದೆ.

ಇದೇ 22ರಿಂದ ಪರ್ತ್ನಲ್ಲಿ ಮೊದಲ ಟೆಸ್ಟ್ ಆರಂಭವಾಗಲಿದೆ. ರೋಹಿತ್ ನಾಯಕತ್ವದ ತಂಡವು ತನ್ನ ಮೊದಲ ಅಭ್ಯಾಸ ಪಂದ್ಯವನ್ನು ಋತುರಾಜ್ ಗಾಯಕವಾಡ ನಾಯಕತ್ವದ ಭಾರತ ಎ ತಂಡದ ಎದುರು ಆಡಲಿದೆ. ಆ ಮೂಲಕ ಅಭ್ಯಾಸ ಆರಂಭಿಸಲಿದೆ. ನ. 15 ರಿಂದ 17ರವರೆಗೆ ಈ ಪಂದ್ಯ ನಡೆಯುವುದು.

ಆದರೆ ಪ್ರತಿ ಬಾರಿಯಂತೆ ತಂಡವನ್ನು 2 ವಿಭಾಗಗಳಲ್ಲಿ ವಿಂಗಡಿಸಿ ಪಂದ್ಯಗಳನ್ನು ನಡೆಸಲಾಗುವುದಿಲ್ಲ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.