ಮುಂಬೈ: ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಬಣದ ಸಂಸದ ಅರವಿಂದ ಸಾವಂತ್ ಅವರು ಶಿವಸೇನಾದ (ಏಕನಾಥ ಶಿಂದೆ ಬಣ) ಅಭ್ಯರ್ಥಿ, ವಸ್ತ್ರ ವಿನ್ಯಾಸಕಿ ಶಾಯಿನಾ ಎನ್ಸಿ ಅವರನ್ನು ‘ಹೊರಗಿನ ಮಾಲು’ ಎಂದು ಕರೆದಿರುವುದು ಮಹಾರಾಷ್ಟ್ರದ ರಾಜಕೀಯದಲ್ಲಿ ವಿವಾದ ಹುಟ್ಟುಹಾಕಿದೆ.

ಈ ಹೇಳಿಕೆಯಿಂದ ಉದ್ಧವ್ ಠಾಕ್ರೆಯವರ ಶಿವಸೇನಾ ಬಣ ತೀವ್ರ ಮುಜುಗರಕ್ಕೀಡಾಗಿದೆ.

ಸಾವಂತ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಶಾಯಿನಾ, ‘ನಾನು ಮಾಲು ಅಲ್ಲ, ಮಹಿಳೆ’ ಎಂದು ತಿರುಗೇಟು ನೀಡಿದ್ದಾರೆ.

ಸಾವಂತ್ ಹೇಳಿಕೆ ಖಂಡಿಸಿ ಶಿಂದೆ ಬಣದ ಶಿವಸೇನಾದ ಮಹಿಳಾ ಘಟಕವು ನಾಗಪಾಡಾ ಪೊಲೀಸ್ ಠಾಣೆ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದ್ದು, ಪೊಲೀಸರಿಗೆ ದೂರನ್ನೂ ನೀಡಿದೆ. ಇದರ ಆಧಾರದಲ್ಲಿ ಭಾರತ ನ್ಯಾಯ ಸಂಹಿತೆಯ ಸೆಕ್ಷನ್ 79 ಮತ್ತು 356 (2)ರ ಅಡಿಯಲ್ಲಿ ಪೊಲೀಸರು ಸಾವಂತ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

ಶಾಯಿನಾ ಯಾರು?: ಶಾಯಿನಾ ಎನ್ಸಿ ಅವರು ಜೈಂಟ್ಸ್ ಇಂಟರ್ನ್ಯಾಷನಲ್ ಸ್ಕೂಲ್ ಸಂಸ್ಥಾಪಕ ಮತ್ತು ಮುಂಬೈನ ಮಾಜಿ ‘ಶೆರಿಫ್’ (ಶೆರಿಫ್– ಮುಂಬೈ ನಗರದ ಗಣ್ಯ ನಾಗರಿಕನಾಗಿದ್ದು, ಒಂದು ವರ್ಷದ ಅವಧಿಗೆ ರಾಜಕೀಯೇತರ ಅಧಿಕಾರವನ್ನು ಹೊಂದಿರುತ್ತಾರೆ) ನಾನಾ ಚುಡಾಸಮಾ ಅವರ ಮಗಳು. ಮುಂಬೈ ನಗರದ ಮಾಜಿ ಪೊಲೀಸ್ ಕಮಿಷನರ್ ಮನಸಿಂಹ ಚುಡಾಸಮಾ ಅವರ ಮೊಮ್ಮಗಳು. ಶಾಯಿನಾ ಅವರು ಉದ್ಯಮಿ ಮನೀಷ್ ಮುನೋತ್ ಅವರನ್ನು ವಿವಾಹವಾಗಿದ್ದಾರೆ.

ಮುಂಬೈ ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿರುವ ಮತ್ತು ಶಿವಸೇನಾ (ಉದ್ಧವ್ ಠಾಕ್ರೆ ಬಣ) ವಕ್ತಾರರೂ ಆಗಿರುವ ಸಾವಂತ್ ನೀಡಿರುವ ಈ ‘ಸೆಕ್ಸಿಸ್ಟ್’ ಹೇಳಿಕೆಯು ರಾಜ್ಯ ರಾಜಕೀಯದಲ್ಲಿ ಪ್ರಮುಖ ವಿಚಾರವಾಗಿ ಮಾರ್ಪಟ್ಟಿದೆ.

ಬಿಜೆಪಿಯಲ್ಲಿದ್ದ ಶಾಯಿನಾ ಅವರು ವರ್ಲಿ ಕ್ಷೇತ್ರದಲ್ಲಿ ಹಾಲಿ ಶಾಸಕ ಆದಿತ್ಯ ಠಾಕ್ರೆ ವಿರುದ್ಧ ಸ್ಪರ್ಧಿಸಲು ಬಯಸಿದ್ದರು. ಆದರೆ, ನಂತರ ಏಕನಾಥ ಶಿಂದೆ ನೇತೃತ್ವದ ಶಿವಸೇನಾವನ್ನು ಸೇರಿದ್ದರು. ಪಕ್ಷವು ಅವರನ್ನು ಮುಂಬಾ ದೇವಿ ಕ್ಷೇತ್ರದಿಂದ ಕಣಕ್ಕಿಳಿಸಿದೆ. ವರ್ಲಿ ಮತ್ತು ಮುಂಬಾ ದೇವಿ ಎರಡೂ ಕ್ಷೇತ್ರಗಳು ಮುಂಬೈ ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುತ್ತವೆ.

ಮುಂಬಾ ದೇವಿ ಕ್ಷೇತ್ರದಲ್ಲಿ ಶಾಯಿನಾ ಅವರು ಮೂರು ಬಾರಿಯ ಕಾಂಗ್ರೆಸ್ ಶಾಸಕ ಅಮಿನ್ ಪಟೇಲ್ ಅವರನ್ನು ಎದುರಿಸುತ್ತಿದ್ದಾರೆ.

ಚುನಾವಣಾ ಆಯೋಗವು ಸಾವಂತ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ತಿನ ಉಪ ಸಭಾಪತಿ ಡಾ.ನೀಲಂ ಗೋರೆ ಒತ್ತಾಯಿಸಿದ್ದಾರೆ.

ಮಹಾಯುತಿ ಮೈತ್ರಿಕೂಟ ಕೂಡ ಸಾವಂತ್ ವಿರುದ್ಧ ವಾಗ್ದಾಳಿ ನಡೆಸಿದೆ.

ಸಾವಂತ್ ಹೇಳಿದ್ದೇನು?

‘ಆಕೆಯ ಸ್ಥಿತಿಯನ್ನು ನೋಡಿ. ಆಕೆ ತನ್ನ ಜೀವನ ಪೂರ್ತಿ ಬಿಜೆಪಿಯಲ್ಲಿದ್ದರು. ಈಗ ಇನ್ನೊಂದು ಪಕ್ಷಕ್ಕೆ ಹೋಗಿದ್ದಾರೆ. ಹೊರಗಿನಿಂದ ಬಂದ ‘ಮಾಲು’ ಇಲ್ಲಿ ಕೆಲಸ ಮಾಡದು. ಮೂಲ ‘ಮಾಲು’ ಮಾತ್ರ ಕೆಲಸ ಮಾಡುತ್ತದೆ... ನಮ್ಮಲ್ಲಿ ಅಂತಹ ಮಾಲು ಇದೆ’ ಎಂದು ಸಾವಂತ್ ಹೇಳಿದ್ದರು.

ಈ ಸಂದರ್ಭದಲ್ಲಿ ಜೊತೆಗಿದ್ದ ಅಭ್ಯರ್ಥಿ ಪಟೇಲ್ ನಗುತ್ತಿದ್ದರು. ಸಾವಂತ್ ಹೇಳಿಕೆಗೆ ತಿರುಗೇಟು ನೀಡಿರುವ ಶಾಯಿನಾ ‘2014 ಮತ್ತು 2019ರಲ್ಲಿ ನಾವು ಇದೇ ಅರವಿಂದ ಸಾವಂತ್ ಪರವಾಗಿ ಪ್ರಚಾರ ಮಾಡಿದ್ದೆವು. ಒಬ್ಬ ಮಹಿಳೆಯನ್ನು ‘ಮಾಲು’ ಎಂದು ಕರೆಯುವ ಅವರ ಯೋಚನಾ ಮಟ್ಟ ಯಾವ ರೀತಿ ಇದೆ ಎಂಬುದನ್ನು ನೋಡಿ. ಈ ಚುನಾವಣೆಯಲ್ಲಿ ಇಲ್ಲಿನ ಅದೇ ಮತದಾರರು ಅವರನ್ನು ಶೋಚನೀಯವಾಗಿ ಸೋಲಿಸಲಿದ್ದಾರೆ’ ಎಂದು ಹೇಳಿದ್ದಾರೆ.

ಹೇಳಿಕೆ ವಿವಾದ ಸ್ವರೂಪ ಪಡೆಯುತ್ತಿದ್ದಂತೆಯೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಾವಂತ್ ‘ಶಾಯಿನಾ ಅವರು ಈ ವಿಚಾರವನ್ನು ಇಟ್ಟುಕೊಂಡು ಕಥೆ ಕಟ್ಟಲು ಬಯಸುತ್ತಿದ್ದಾರೆ. ನಾನು ಏನು ಹೇಳಿದ್ದೇನೋ ಅದನ್ನು ಪೂರ್ಣವಾಗಿ ತೋರಿಸಿ. ಅವರು ಆ ವಿಧಾನಸಭಾ ಕ್ಷೇತ್ರದಲ್ಲಿ ನೆಲಸಿಲ್ಲ. ನನ್ನ 55 ವರ್ಷಗಳ ರಾಜಕೀಯ ಜೀವನದಲ್ಲಿ ನಾನು ಮಹಿಳೆಯ ಘನತೆಗೆ ಯಾವತ್ತೂ ಕುಂದು ತಂದಿಲ್ಲ. ಯಾವಾಗಲೂ ಅವರನ್ನು ಗೌರವಿಸಿದ್ದೇನೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.