ಅಕ್ರಮ ಕಟ್ಟಡಗಳ ವಿರುದ್ಧ ಕ್ರಮ ತಿಳಿಯಲು ಬಿಬಿಎಂಪಿ ಕಚೇರಿಗೆ ಹೋದೆ. ಸಂಬಂಧಪಟ್ಟ ಅಧಿಕಾರಿಗಳು ಅದೃಷ್ಟವಶಾತ್ ಕಚೇರಿಯಲ್ಲೇ ಇದ್ದರು. ಯಾರೂ ಮಾಮೂಲಿ ವಸೂಲಿಗೆಂದು ರೌಂಡ್ಸ್ ಹೋಗಿರಲಿಲ್ಲ.

‘ಅಕ್ರಮ ಕಟ್ಟಡ ಮೇಲೆ ಬರುತ್ತಿದ್ದಂತೆ ಎಚ್ಚರಗೊಂಡು ಮಾಲೀಕನಿಗೆ ನೋಟಿಸ್ ಕೊಡುತ್ತೇವೆ’ ಎಂದರು ಹಿರಿಯ
ಅಧಿಕಾರಿಯೊಬ್ಬರು.

‘ಪಾಯ ಹಾಕುವುದನ್ನೇ ತಡೆಯ
ಬಹುದಲ್ಲವೇ?’

‘ಕಟ್ಟಡ ಎಷ್ಟು ದೊಡ್ಡದಿರುತ್ತದೆ ಎಂದು ತಿಳಿಯಬೇಕಾದರೆ ಅದು ಮೇಲೇಳಲು ಸಮಯ ಕೊಡಬೇಕು. ವಾಚ್ ಮಾಡ್ತಾ ಇರ್ತೇವೆ’.

‘ಮತ್ತೆ ನಿಮ್ಮ ನೋಟಿಸ್?’

‘ಅದು ಮಾಮೂಲಿ. ಅದಕ್ಕೆ ಅವನು ಹೆದರಲ್ಲ. ಗೋಡೆಗಳು ಮೇಲೇಳುತ್ತಿದ್ದಂತೆ ಇನ್ನೊಂದು ನೋಟಿಸ್ ಕೊಡ್ತೇವೆ. ಮೊದಲನೇ ನೋಟಿಸ್ಗೇ ಮಾಮೂಲು ಕೊಟ್ಟಿದ್ದೆ, ಈಗ ಇನ್ನೊಂದು ನೋಟಿಸೇಕೆ ಎಂದು ಕೇಳ್ತಾನೆ’.

‘ಕರೆಕ್ಟ್ ಅವನು ಕೇಳಿದ್ದು’.

‘ಅದಕ್ಕೆ ನಾವು, ನೀನು ಕಟ್ತಾ ಇರು, ನೋಟಿಸ್ ಕೊಡ್ತಾ ಇರ್ತೇವೆ. ಇದೆಲ್ಲಾ ಮಾಮೂಲು ಅಂತ ಹೇಳ್ತೀವಿ. ಮೂರು ಅಂತಸ್ತು ಮೇಲೆ ಬಂದ ಮೇಲೆ, ಇನ್ನೂ ಎಷ್ಟು ಅಂತಸ್ತು ಕಟ್ತೀಯ ಅಂತ ಕೇಳ್ತೀವಿ. ಪ್ಲಾನ್ ಪ್ರಕಾರ ಎರಡು, ಈಗ ಮೂರಾಗಿದೆ. ಇನ್ನೆರಡಕ್ಕೆ ಪ್ಲಾನ್ ಆಗಿದೆ. ದೇವರು ಮನಸ್ಸು ಮಾಡಿದರೆ ಆರನೇ ಅಂತಸ್ತು ಮೇಲೇಳುತ್ತೆ ಅಂತಾನೆ. ಆದರೆ ನಾವು ಅವನ ಮಾತಿಗೆ ಕೇರ್ ಮಾಡದೆ ಇನ್ನೊಂದು ನೋಟಿಸ್ ಇಶ್ಯೂ ಮಾಡ್ತೀವಿ’.

‘ಕೆಲಸ ನಿಲ್ಲುತ್ತಾ?’

‘ಇಲ್ಲ, ಅಷ್ಟೊತ್ತಿಗೆ ಬಿಲ್ಡಿಂಗ್ ವಾಲುತ್ತೆ. ಎಲ್ಲರೂ ಹೋ! ಅಂತಾರೆ. ಆಗ ನಾವು ಇನ್ನಷ್ಟು ಎಚ್ಚರಗೊಂಡು ಅವನ ಖರ್ಚಿನಲ್ಲೇ ಕಟ್ಟಡ ನೆಲಸಮ ಮಾಡೋದಿಕ್ಕೆ ಹೇಳ್ತೇವೆ’.

‘ಅಕ್ರಮ ಕಟ್ಟಡಗಳ ವಿರುದ್ಧ ಹೊಸ ಕಠಿಣ ಕಾನೂನು ತರ್ತೀವಿ ಅಂತ ಸಿಎಂ ಹೇಳಿದಾರಲ್ಲ?’

‘ರಂಗೋಲಿ ಕೆಳಗೆ ನುಸಿಯೋರು ಯಾವಾಗ್ಲೂ ಇದ್ದೇ ಇರ್ತಾರೆ, ಅಧಿಕಾರಸ್ಥರು ಬದಲಾಗಬಹುದು ಅಷ್ಟೆ’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.